ಮುಂಗಾರಿನ ಮಳೆ
ಸಂಗಮದಲಿ ಬೆಳೆ
ದಂಗಾದ ಕೊಳೆಯು ಕೊಚ್ಚುತಿದೆ/
ಬೆಂಗದಿರನ ಕಳೆ
ತಂಗಾಳಿಯ ಸೆಳೆ
ಕಂಗಳ ಕಾಂತಿಯು ಚಿಮ್ಮುತಿವೆ//
ಚಿಗುರುತಿವೆ ಹಸಿರು
ಜಿಗಿಯುತಿವೆ ಮನವು
ನಿಗಿನಿಗಿ ಕಾಮನ ಬಿಲ್ಲಿನಲಿ/
ನೆಗೆಯುತ ನಲಿಯುತ
ಧಗೆಯನು ತಳ್ಳುತ
ತಗಾದೆ ತೆಗೆಯದೆ ತಂಪಿನಲಿ//
ರೈತನ ಬದುಕಲಿ
ಜತನದ ಚಿಂತೆಯು
ಹಿತಮಿತವಿಲ್ಲದೆ ಸಾಗುತಿದೆ
ಶತಕದ ನೋವಿನ
ಕಥನವು ಮಿಂಚಿತ
ಪಥದೊಳು ಶ್ರಮಿಕನು ನಿಂತಿಹನು//
ವರುಣನು ತಂದಿಹ
ಹರುಷದ ಧಾರೆಯ
ಕರಿನೆರಳ ಛಾಯೆ ಮುಚ್ಚುತ/
ಬರವನು ತಡೆದಿದೆ
ತರತರದಿ ಧರೆಯು
ಜರತಾರಿ ಹಸಿರಲಿ ಹೊಳೆದಿದೆ// ಅಭಿಜ್ಞಾ ಪಿ ಎಮ್ ಗೌಡ-
ಅರೇ... ಇವ್ಳಿಗೇನಾಯ್ತು... ಯಾಕ್ ಹಿಂಗಾಡ್ತವ್ಳೆ...ಲವ್ವು .. ಗಿವ್ವು.. ಶುರುವಾಯ್ತ ಇವ್ಳಿಗೆ ದೇವದಾಸ....😬
-
ಬರುಡಿಳೆಯ ಕಂಡು ಮುಗಿಲು ಕಣ್ತುಂಬಿ ಸುರಿಸಿತು ಮುಂಗಾರು ಮಳೆ💦 ಹಾಡುತ ಮಧುಮಗಳಿಗೆ ಹರುಷದ ಸುವ್ವಾಲೆ....!
ಹನಿಹನಿಯು💦 ತಾಕಿ ಮೈದೊಳೆದ ಇಳೆಯಿಲ್ಲಿ ವೈಯಾರದಿ ಬಳುಕುತ ಹಸಿರೊಲ್ಮೆಗೆ ನಾಚುತ ತೂಗಿದೆ ಉಯ್ಯಾಲೆ...!
ತಂಪೆರೆದ ಹನಿಹನಿಗಳ💦 ಸವಿದನಿಯ ಪ್ರೇಮದ ಘಮಲು, ಕುಡಿಯೊಡೆದ ಒಲವಲ್ಲಿ ಕುಣಿದಾಡಿದೆ ನವ್ವಾಲೆ...!
ಓಡಿದನು ದೂರಕ್ಕೆ ನೇಸರನು ನೀನಿರಲು ರಂಗು ಚೆಲ್ಲುತ್ತಾ ಬಾನಂಗಳದತ್ತ, ನೀಡಲು ಮಧುರ ನೆನಪುಗಳಿಗೆ ಕರೆಯೋಲೆ💦 ...!-
ಹುಡುಗ ಗೆದ್ದಾಗ ಲೈಫ್ ಜೊತೆ ಒಂದ್ ಸೆಲ್ಫಿ
ಹುಡುಗಿ ಸಿಕ್ಕಾಗ ಕೃಷ್ಣನ ಮ್ಯಾರೇಜ್ ಸ್ಟೋರಿ-
ಮುಂಗಾರು ಮಳೆಯಲಿ
ಕೊಡೆಯ ಅಡಿಯಲಿ
ನಿಂತಿರುವೆ ಮಧ್ಯದ ಪಥದಲಿ
ಒಂಟಿಯಾಗಿಲ್ಲಿ
ನನ್ನವಳೊಲವ ನೆನೆಯುತ್ತ
ಬಳಿ ಬಂದು ಹೇಳಬಾರದೇ!
ಒಮ್ಮೆ ನಿನ್ನೇ ಪ್ರೀತಿಸುವೆ ಅಂತ..!
-
ಧಗಧಗಿಸುವ ಧರಣಿಯ ತಂಪಾಗಿಸಲು
ಕೋಲ್ಮಿಂಚು ಹರಿಸಿ
ಸಿಡಿಲ ಅಬ್ಬರವಗೈದು
ಚಿಟಪಟ ಹನಿಗಳುರುಳಿಸಿ
ಭೂರಮೆಯ ತೋಯಿಸಲು
ಸಜ್ಜಾಗುತಿದೆ ಮುಂಗಾರುಮಳೆ-
ಹುಡುಗಿ ಅತ್ತಾಗ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ
ಹುಡುಗ ನಕ್ಕಾಗ ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ 😜-