ಹೃದಯಿ ❣️   (ಪ್ರೀತಿ. ಎಚ್. ಕೆ.)
289 Followers · 99 Following

read more
Joined 4 August 2019


read more
Joined 4 August 2019
7 MAY 2022 AT 11:46

ಅಳಿದುಳಿದ ಒಲುಮೆಯ
ಹೊದ್ದು ನಡೆಯುವಾಸೆ
ಬೇಡ ಏನಲೇ....
ಒಮ್ಮೆ ಸಾಗಿ ಬರಲೇ....!

-


4 MAR 2022 AT 9:44

ಧುಮ್ಮಿಕ್ಕುವ
ಈ ಕೋಪಕೆ
ನಿನ್ನ ಆಲಿಂಗಣವೇ
ಮದ್ದು ಸಖ.

-


4 JAN 2022 AT 22:12

ಬೆಂಬಿಡದೆ ಕಾಡುವ
ನೆನಪುಗಳಿಗೆ
ನಿನ್ನದೇ ಹೆಸರಿಡುವೆ
ನೀ ಇದ್ದರೂ,
ಇರದಿದ್ದರೂ,
ನಾ ಪ್ರೀತಿಸುತಲೇ ಇರುವೆ.

-


19 DEC 2021 AT 10:10

ಪ್ರತಿ ಮುಂಜಾವಿಗೂ
ನನ್ನದೊಂದೇ ಕೋರಿಕೆ.
ಪದೇ ಪದೇ
ನಿನ್ನ ನೋಡುವ ಬಯಕೆ.

-


14 NOV 2021 AT 22:07

ನೆನಪುಗಳ
ನೆಂಟಸ್ಥಿಕೆಯಲ್ಲೇ
ಉಳಿಯುವಂತೆ
ಮಾಡಿದ್ದು
ನಿನ್ನ
ಪ್ರೀತಿಯೊಂದೆ.

-


6 SEP 2021 AT 21:55

ಅದೆಷ್ಟು ರಾತ್ರಿಗಳು ಕಳೆದವೋ,
ನೆನಪುಗಳ ತಲೆದಿಂಬಿಗೆ ಒರಗಿದ ಅವನ ಪ್ರೀತಿ,
ಚೇತರಿಸಿಕೊಳ್ಳಲೇ ಇಲ್ಲ.

-


10 JUL 2021 AT 16:53

ಎನ್ನ ಜೀವದೊಳ್ ಬೆರೆತ ಜೀವಾತ್ಮನಿಗೂ
ಜೀವಿಸುವ ಹಕ್ಕಿಲ್ಲ..
ಸಮಯ ಬಂದೊಡನೆ, ಸಾವು ಕಂಡೊಡನೆ.

-


16 JUN 2021 AT 19:44

ನಿನ್ನ ಹಾಗೇ
ನಿನ್ನ ಪ್ರೀತಿಯೂ ಕೂಡ,
ಎಷ್ಟು ಸ್ವಾರ್ಥಿಯೋ
ಅಷ್ಟೇ ಗೌಪ್ಯ.

-


31 OCT 2020 AT 10:59

ನಿನ್ನಿಷ್ಟದಂತೆ ನನ್ನಿಷ್ಟದಲ್ಲಿ
ಬೆರೆತು ನಡೆಯೋಣ ಸಖ..,
ಹಾಲಲ್ಲಿ ಬೆರೆತ ನೀರಂತೆ,
ಜೇನಲ್ಲಿ ಬೆರೆತ ಸಿಹಿಯಂತೆ,
ನಮ್ಮನ್ನು ಹೊರತು ಇನ್ನಿಲ್ಲದಂತೆ...

-


14 APR 2020 AT 8:31

ಅಂದು.....
ಕವಯಿತ್ರಿಯ
ಕವಿತೆಯ
ಕವಲುಗಳಲ್ಲಿ
ಕುಪ್ಪಳಿಸಿದ
ಕನಸು
ಇಂದು.....
ಕವಿಯ
ಕಾಗದದಿ
ಕಾವ್ಯವಾಗಿ
ಕದಡುತಿಹುದು
ಕವಿಮನವ

-


Fetching ಹೃದಯಿ ❣️ Quotes