ಸವಿತಾ ಮರಡಿ  
3 Followers · 1 Following

Joined 27 February 2024


Joined 27 February 2024

ಹಾಗಿದ್ದರೆ ಹೀಗೆನ್ನುವ
ಹೀಗಿದ್ದರೆ ಹಾಗೆನ್ನುವ
ಹುಂಬ ಜನರೆದುರು
ಮಾತಿಗಿಳಿದು ರಾಡಿಯಾಗುದಕ್ಕಿಂತ
ಮೌನ ಬೇಲಿಯೊಳಿದ್ದು
ಕಾರ್ಯದ ಕಾಲುವೆ ಹರಿಸುವುದೇ ಲೇಸು

-



ಹಾಗಿದ್ದರೆ ಹೀಗೆನ್ನುವ
ಹೀಗಿದ್ದರೆ ಹಾಗೆನ್ನುವ
ಹುಚ್ಚು ಜನರ
ಚುಚ್ಚು ನುಡಿಗಳಿಗೆಂದು
ಮನವ ನೀಡದೆ
ನಿನ್ನಿಷ್ಟಕೆ ನೀನಿದ್ದು
ಬದುಕ ಸುಂದರೆಯ ಕಾಣು

-



ಅವಕಾಶಗಳು ಒದಗಿ ಬಂದಾಗ
ಭಯಕ್ಕೆ ಬೆನ್ನೆಲುಬಾಗಿ ನಿಂತರೆ
ಸಾಧಿಸುವ ಛಲದ ಕಣ್ಣಿಗೆ
ಬಟ್ಟೆ ಕಟ್ಟಿದಂತಾಗುವುದು

-



ಬಾಳ ಬಂಡಿಗೆಂದು ಕಲ್ಲು ಮುಳ್ಳಿನ ತಡೆಯು
ಧೃತಿಗೆಡದೆ ಅಡಿ ಇಡಬೇಕು ಪ್ರತಿ ಹೆಜ್ಜೆಯು

ಭರವಸೆಯ ಬೆಳಕು ಮನವ ಹೊಕ್ಕಿರಲು
ಅಡಿ ಅಡಿಯೂ ಸುಮದ ಹಾಸಾಗುವುದು

-





ಬಿಳಿ ಬಣ್ಣದ ಬದುಕಿನಲಿ
ಪ್ರೀತಿ, ಸ್ನೇಹ, ಸಹನೆಗಳ ಭಾವ ಭಿತ್ತಿ
ಮಧುರ ಮನವನೆಂದು ರಂಗಾಗಿಸಿ
ನೆಲೆಯ ಗುಡಿಯನೆಂದು ಅಂದವಾಗಿಸಿ
ಜೀವ,ಜೀವನವನು ಹಸನಾಗಿಸೋಣ

-


30 DEC 2024 AT 21:18

ದಣಿದ ದೇಹ ಮನಸ್ಸುಗಳಿಗೆ
ಉತ್ಸಾಹದ ಚಿಲುಮೆಯಾಗಲು
ಇರಬೇಕು ಬದುಕಿನಲಿ
ಆಗೊಮ್ಮೆ ಇಗೊಮ್ಮೆ ಪ್ರವಾಸಗಳು

-


30 DEC 2024 AT 21:12

ಆಧುನಿಕತೆಯ ಭರಾಟೆಯಲ್ಲಿ
ತಂತ್ರಜ್ಞಾನಗಳು ಅದೆಷ್ಟೇ ಮುಂದುವರೆದು
ಬೆರಳ ತುದಿಯಲ್ಲೆ ಮಾಹಿತಿಗಳೆಲ್ಲಾ ಲಭ್ಯವಾದರೂ
ಮನಃಪಟಲದಲ್ಲಿ ಉಳಿಯುವುದು ಮಾತ್ರ
ಪುಸ್ತಕದ ಓದಿನ ಜ್ಞಾನ ಮಾತ್ರ...

-


8 DEC 2024 AT 20:37

ಇಂದಿದ್ದು ನಾಳೆ ಅಳಿಯುವ
ಒಡವೆ,ವಸ್ತು,ಆಸ್ತಿಗಳಿಗಿಂತ
ನಾವೆಂದು ಅಳಿಯುವವರೆಗೂ
ಜತೆಯಾಗಿರುವ
ನಿಷ್ಕಲ್ಮಶ ಮನವೇ
ನಿಜವಾದ ಆಭರಣ...

-


7 DEC 2024 AT 19:57

ಪ್ರತಿ ಹುಟ್ಟಿಗೂ ಸಾವು ಖಚಿತ
ಪ್ರತಿ ಸಾವಿಗೂ ಮರುಹುಟ್ಟು ನಿಶ್ಚಿತ

ಪ್ರತಿ ಜನ್ಮವೂ‌ ಹೊಸ ಪ್ರಾರಂಭದ ಸಂಕೇತ
ಪ್ರತಿ ಕನಸುಗಳಿಗೂ ಹೊಸ ಹಾದಿಯು ನಿರ್ಧರಿತ

-


6 DEC 2024 AT 19:25

ಏಳುಬೀಳಿನ ಹಾದಿಯಲಿ
ಮುಗ್ಗರಿಸುವುದು ಸಹಜ

ನಡಿಗೆ ತಪ್ಪಿದರು
ನಡೆ ತಪ್ಪದಿರಲಿ

ಸಾಧಿಸುವ ಛಲಕೆ
ಮನವೆಂದು ಕುಗ್ಗದಿರಲಿ

ಮುನ್ನುಗ್ಗುವ ಹಠವಿರಲು
ಗೆಲುವಾಗುವುದು ಸದಾ

-


Fetching ಸವಿತಾ ಮರಡಿ Quotes