ಮಾತು ಮೌನವಾಗುವುದು ಯಾವಾಗ?
-
ನಾ ಹಾಡುತ ಬರೆಯುವೆ ಆಗಾಗ ಗೀತೆ 🎶
ನರ್ಸ್ ನನ್ನ ನೋಡಿ ನಕ್ಕಿದ್ದು "ಮೇ 4"😃
ಅಂತ ನಮ್ಮಪ... read more
ಭಾವ ತೊರೆದ
ಶವದ ಮುಂದೆ
ಅತ್ತರೇನು
ಲಾಭ ?
ಆತ್ಮನಿಗಿಲ್ಲದ
ಅನುಭೂತಿ
ಧರಿಸಿದರೇನು
ಸುಖ....!
-
ಹೂವಂತ ಕಣ್ಮಣಿ ನಾನಾಗಲೇನ..🙈
ನೀ ತಂದ ಉಡುಗೊರೆ ನನಗಲ್ಲವೇನ ..😕
ಮನಸಾಗ ಪ್ರೀತಿ ಹೊತ್ತಿನಿ ಕೇಳ..
ನಿನ್ನ ಕನಸನ್ನಾ ಕದ್ದ ಚೆಲುವೆ
ನಾ ತಾನೇ ಹೇಳ✨
ಕಲಿಯುಗದ ಶಬರಿ ನಾನಾಗಲೇನ 🙈
ನೀ ಬರುವ ದಾರಿ ನನಸೇರಲೇನ 🫣
ನಗುವಾದ್ರೂ ನೋವಾದ್ರೂ ಪಾಲೈತೆ ಕೇಳ..
ನಿನ್ನ ಜಗದ ಯಜಮಾನಿ
ನಾ ತಾನೇ ಹೇಳ✨
-
ಪ್ರೀತಿಯ ನಿರೀಕ್ಷಿಸಿ ಹೋದರೆ ಹಿಂದೆ
ಕಳೆದು ಕೊಳ್ಳುವಿರಿ ಸ್ವಾಭಿಮಾನ ಗೌರವ ಮುಂದೆ
ಉಳಿಯುವುದು ಬೇಸರ ನೋವು ಒಂದೆ..🤗
-
ಭಾರತಾಂಬೆಯ ಸ್ವಾತಂತ್ರ್ಯ ಗೊಳಿಸಲು
ಹೋರಾಡುತ ಎಷ್ಟೋ ಮಹಾತ್ಮರು
ಸೇರಿಹರು ಭೂಮತೆಯ ಮಡಿಲನು...🇮🇳
ಬದುಕೋಣ ಸ್ಮರಿಸುತ, ಜಾತಿ ಧರ್ಮದ
ಗೋಡೆ ಹೊಡೆಯುತ, ನಾವೆಲ್ಲ
ಭಾರತಿಯರೆಂಬ ನಿಜ ಅರ್ಥ ಉಳಿಸುತ....🇮🇳-
ಹುಚ್ಚು ಮನದ ಪ್ರೀತಿಯ ಕೋಟೆಯಲ್ಲಿ
ಬಂದಿಯಾಗಿಹೆ ಗೆಳೆಯ..
ನಾ ಮರೆಯಾಗುವ ಮುನ್ನ ಈ ಪುಟ್ಟ ಪ್ರೀತಿಯ ಪ್ರಪಂಚಕ್ಕೆ ಬಂದು ಸೇರುವೆಯಾ?...🍃
-
ಮಾಯದ ಸತ್ಯ ನಿತ್ಯದ ಕರ್ಮದಲ್ಲಿ
ತೂಗಾಡುತ್ತಿರುವಾಗ ತೇಪೆ ಹಚ್ಚಿ
ಒಳ್ಳೆಯವರೆಂದೆನಿಸಿಕೊಳ್ಳೋ
ಚಟಕ್ಕೆ ಮುಖವಾಡ ಹೊತ್ತವರೆ ಹೆಚ್ಚು 🙃
-
ನಿನ್ನ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀನೇ ಆಗಿರುವೆ ಅದಕ್ಕಾಗಿಯೆ ನಾನು ಪ್ರಶ್ನೆಯಾಗಿ ಉಳಿದಿರುವೆ😌
-