ಸಾಗರತೀರದಲ್ಲಿ ,
ಸಾಗುವ ಆಸೆ ,
ನಿನ್ನ ಜೊತೆಯಾಗಿ ,
ಹೆಜ್ಜೆಗೆ ಹೆಜ್ಜೆ ಕೂಡಿಸಿ.
ತೋಳ ಬಳಸಿ ,
ತಬ್ಬಿ ಲತೆಯಂತೆ ,
ಕೆನ್ನೆಗೆ ಕೆನ್ನೆ ತಾಕಿಸಿ...
ಪ್ರೇಮದುಂಗುರವ ,
ತುಟಿಯ ಮೇಲೆ ಮೂಡಿಸಿ,
ಹುಲುಸಾದ ಎದೆಯ
ಅಂಗಳದಲ್ಲಿ ಮೃದುವಾಗಿ
ಮದರಂಗಿ ಬೆರಳುಗಳ ಓಡಿಸಿ,
ಮದನಾರತಿ ರಂಗೋಲಿ ಬಿಡಿಸುವಾಸೆ...
ಓ ನನ್ನ ಒಲವಿನ ಮೀಸೆ.....
ಹದವಾಗಿ ಹಣ್ಣಾದ ಮಾವ
ಚುಚ್ಚದೆ ಗಿಳಿಯಂತೆ ಕಚ್ಚಿ ತಿನ್ನ
ಬಾರದೇ ಓ ಜೀವ...
ನನ್ನ ಒಲವಿನ ಮೀಸೆಯೆಂದರು
ಮತ್ತೆ ಬಂದು ಮುತ್ತಿಕ್ಕುವಾಗ
ಹೆಚ್ಚಿಸಿತು ಕಣೋ ಆ ಮಿಸೆ
ಹೆಚ್ಚು ಆಸೆ
ಹುಚ್ಚಿಡಿಯುವ ನಶೆ ಹೀಗೆಕೇ...?-
ತೋರ್ಬೆರಳಿಂದ ಕುಡಿಮೀಸೆಯ ತೀಡಿ
ಕಣ್ಣಂಚಿನಿಂದಲೇ ಮೋಡಿಯ ಮಾಡಿ,
ದೂರದಿಂದಲೇ ಗ್ರಹಿಸುವೆ ನನ್ನೆದೆ ತುಡಿತ
ನನ್ಮನದಿ ವಾಸಮಾಡುವ ನೀ ಮಹಾನ್ ಪಂಡಿತ.!!
ಮನದ ಹಿಡಿತ ತಪ್ಪಿಸೋ ನಿನ್ನ ಮೀಸೆ
ನನ್ನ ಹೃದಯ ದೋಚುವ ಹೊಸ ವರಸೆ,,
ಹರಕೆ ಕಟ್ಟಿರುವೆನೋ ನಿನ್ನನ್ನೇ ಹಂಬಲಿಸಿ
ಕರುಣಿಸೋ ಧೀರನೆ ನನ್ನ ಪತ್ನಿಯಾಗಿ ವರಿಸಿ.!!
ನಮ್ಮೊಳಗೊಳಗೆ ಎಲ್ಲೆಯ ಮೀರಿ ಹಾರಾಡುವ
ನನಗೆ ನೀ ನಿನಗೆ ನಾ ಎಂದು ಕೂಗಾಡುವ,
ಎಗ್ಗು ಸಿಗ್ಗು ಇಲ್ಲವೆನೆ ಎನ್ನಬೇಡ
ಕೊನೆತನಕ ಹಿಡಿದ ಕೈ ಬಿಡಬೇಡ..!!-
ಗಡ್ಡ ಬಿಟ್ಟಿರೋರೆಲ್ಲಾ ದೇವ್ದಾಸ್ಗಳಲ್ಲ,
ಮೀಸೆ ಬಿಟ್ಟೋರ್ಗೆಲ್ಲಾ ಮೀಟ್ರಿರಲ್ಲ,
ಕ್ಲೀನ್ ಶೇವ್ ಮಾಡಿರೋರೆಲ್ಲಾ ಸಾಚಾಗಳಲ್ಲ.
ಹೀಗಿರುವಾಗ!
ತಲೆ ಕೂದ್ಲ್ ಉದ್ರಿರೋ ಹುಡ್ಗೂರ್ನ,
ಹುಡ್ಗೀರ್ ಯಾಕ್ ಇಷ್ಟಪಡಲ್ಲ?-
ಆ ನಿನ್ನ ಮುದ್ದಾದ ಮೊಗ
ಅದರ ಮೇಲೊಂದು
ಮಂದಹಾಸದ ಮುಗ್ಧ ನಗು
ಆ ನಗುವಿನ ಮೇಲೆ
ನನ್ನ ಕಾಡುವ ಆ ನಿನ್ನ ಮೀಸೆ
ಅದಕ್ಕೆ ನಾ ಸೋತೆ
-
ಹಾಗೇ ಸುಮ್ಮನೆ:
*************
ಆಗತಾನೇ
ಮದುವೆಯಾದವಳ
ಮುಖ ಕೆಂಪಾಗಿದ್ದರೆ
ಆಕೆಯ ಗಂಡನಿಗೆ
ಮೀಸೆ ಇದೆಯೆಂದು
ಅರ್ಥ!!-
ನೀ
ಅಪ್ಪಿಕೊಂಡಾಗೆಲ್ಲಾ
ಮೂಡುವುದು
ನನ್ನಲ್ಲಿ
ಆಸೆ....!!!
ತಿರುಗಿಸಬೇಕೆನ್ನಿಸುವುದು
ಸದಾ
ಕಾಟ ಕೊಡುವ
ಆ ನಿನ್ನ ಮೀಸೆ...!!!!-
ಮೀಸೆ ಮರೆಯಲಿ ನಗುತ
ನೀ ಮಾಡಿದಿ ಎನ್ಮನಕ ಮೊಡಿ
ತಿಳಯದಾತೊ ಹುಡುಗ
ಆ ನಿನ್ನ
ಪ್ರೀತಿಯ ಪರಿ.,-
ಅಜ್ಜಿ ಹೇಳಿದ್ದು
============
ಆತನ ಹೆಸರು ಚೆನ್ನ. ಸನ್ನಡತೆಯ, ಸರಳ ಸ್ವಭಾವದ ವ್ಯಕ್ತಿ.
ಮನಯಲ್ಲಿ ಕಿತ್ತು ತಿನ್ನುವ ಬಡೆತನ.ತನಗೆ ಬೇಕಾದಗಲೆಲ್ಲಾ ಧನಿಕನೊಬ್ಬನ ಹತ್ತಿರ ತನ್ನ ಒಂದು ಮೀಸೆ ಕೂದಲನ್ನು ಅಡವಿಟ್ಟು ತನಗೆ ಬೇಕಾದಷ್ಟು ಹಣ ತರುತಿದ್ದ .ದೊರೆತಾಗ ಹಣ ವಾಪಸ್ಸು ಕೊಟ್ಟು ಮೀಸೆ ಬಿಡಿಸಿಕೊಂಡು ಹೋಗುತಿದ್ದ...ಇದನ್ನು ಗಮನಿಸುತಿದ್ದ ರಾಜಣ್ಣನೆಂಬುವನು ತನ್ನ ಮೀಸೆಯ ಕೂದಲನ್ನು ಬೇಕಾದಷ್ಟ ಕಿತ್ತುಕೊಂಡು ಹೋಗಿ ಅದನ್ನು ಧನಿಕನಿಗೆ ಕೊಟ್ಟುಹಣ ಕೇಳಿದ..ಆ ಧನಿಕ ರಾಜಣ್ಣನ ಮಾತುಗಳನ್ನು ಆಲಿಸಿದ ನಂತರ..."ನಾನು ಚೆನ್ನನಿಗೆ ಹಣ ಕೊಡುವುದು ಅವನ ಮೀಸೆಗಲ್ಲ..ನಂಬಿಕೆಗೆ.ಅವನು ತನ್ನ ಮೀಸೆಯ ಕೂದಲಿಗೂ ಅವಮಾನವಾಗದಂತೆ ಜಾಗ್ರತೆ ವಹಿಸುತ್ತಾನೆ.ಅದರಿಂದ ಆ ಕೂದಲು ಮೌಲ್ಯಭರಿತವಾಗಿದೆ.ನೀನು ಒಂದೇ ಸಾರಿಗೆ ಇಷ್ಟೊಂದು ಕೂದಲು ಕಿತ್ತುಕೊಡುತ್ತಿರುವ ನೀನು ಹಣ ವಾಪಸ್ಸು ಕೊಡುವೆ ಎನ್ನುವ ನಂಬಿಕೆ ನನಗಿಲ್ಲವೆಂದು ಹೇಳಿದ..
-