ನನ್ನ ವೈಯಕ್ತಿಕ ಕಾರಣಗಳಿಂದ ಯುವರ್ಕೋಟ್ ನಿಂದ ನಿರ್ಗಮಿಸುತ್ತಿರುವೆ
ಮತ್ತೆ ಬರುವೆ🙏🙏-
ನಾನು ವೈದ್ಯಕೀಯ ಯಕ್ತಿಕ ಕಾರಣಗಳಿಂದ ನಾನು ಯುವರ್ಕೋಟ್ನಿಂದ ತಾತ್ಕಾಲಿಕವಾಗಿ ನಿರ್ಗಮಿಸುತ್ತಿರುವೆ..ಮತ್ತೆ ಬರುವೆ🙏🙏
-
ಬರೆಯಲು ಬಾರದಿದ್ದರೂ ಬರೆಯುತ್ತಿರುವೆ
ಬರೆ ಬಿದ್ದರೂ ಬರೆಯುದನ್ನ ಬಿಡುವುದಿಲ್ಲ-
ಉತ್ತರ ಸಿಕ್ಕಿಲ್ಲದ ಪ್ರಶ್ನೆಯು
ಬೆನ್ನು ಹತ್ತಿದ ಬೇತಾಳ
ಸಿಕ್ಕರೂ ಸಿಗಬಹುದು
ಹುಡುಕುತ್ತಿರುವೆ ಪಾತಾಳ-
ಮಾತ್ರಾಗಣ ಆಧಾರಿತ ಗಜಲ್
********************
ಮೌನರೋದನ ಕೇಳುವರಾರು
ಸತ್ಯಶೋಧನ ಮಾಡುವರಾರು
ಸ್ವಾರ್ಥದ ಜನಗಳು ಇಲ್ಲಿರುವರು
ನಿನ್ನ ಜೀವನ ಕಟ್ಟುವರಾರು
ನಂಬಿಕೆಗೆ ಅರ್ಹರಲ್ಲದವರು
ಬಾನಚಂದ್ರನ ಕಸಿದವರಾರು
ಮೌನ ಕ್ರಾಂತಿಗೆ ಮುನ್ನುಡಿ ಇದೆ
ಮಾತಿನ ಚಂದನ ಅರಿವರಾರು
ಕೋಮಲ ಮನಸ್ಸು ನರಳುತಿಹುದು
ಪ್ರೀತಿಯ ಸಿಂಚನ ತಂದವರಾರು-
ಯಾರನ್ನು ಅಜ್ಞಾನಿಯೆಂದು
ಕಡೆಗಣಿಸಬೇಡಿ
ನಾನೇ ಜ್ಞಾನಿಯೆಂದು
ಬೆನ್ನುತಟ್ಟಿಕೊಳ್ಳಬೇಡಿ
ನಿನಗೊಲಿದ ಜ್ಞಾನ ಅವರಿಗೆ
ಒಲಿಯದರಿಬಹುದು
ಅವರು ಬೇರೆ ವಿಷಯಗಳಲ್ಲಿ
ಪ್ರಾವೀಣ್ಯತೆ ಪಡೆದಿರರುತ್ತಾರೆ-
ಸತ್ಯಕ್ಕೆ ಸಾಕ್ಷಿ ಬೇಕಾಗಿದೆ
ಸಾಬೀತು ಪಡಿಸಲು
ಸಾಕ್ಷಿ ದೊರೆಯದಿದ್ದರೆ
ಸತ್ಯವೇ ಸುಳ್ಳಾಗಿ ಬಿಡುವ
ಸಂಭವ ನೂರು ಪಟ್ಟಿದೆ
ಸುಳ್ಳಿನ ಅರಮನೆಯಲ್ಲಿ
ಸತ್ಯವನ್ನ ಕಟ್ಟಿ ಕೆಡವಲಾಗಿದೆ-
1.ತ್ರಿವೇಣಿ
2.ಪಿ ಲಂಕೇಶ್
3.ಎಸ್. ಎಲ್. ಭೈರಪ್ಪ
4.ಪೂರ್ಣಚಂದ್ರ ತೇಜಸ್ವಿ
5.ವೈದೇಹಿ-