ನಾನು "ಗೃಹಿಣಿ "
ಅನ್ನೋದಕ್ಕೀನ್ನ ಜಾಸ್ತಿ,
ನಮ್ಮೊರ್ ಮುದ್ದಿನ "ಅರಗಿಣಿ "-
❤ಕನ್ನಡ ಸಾಹಿತ್ಯ ಪ್ರೇಮಿ❤
❤ಕರದಂಟಿನಷ್ಟೇ sweet ❤
ಕವನಗಳು ನನ್ನಲ್ಲಿರುವ ಅಗಣಿತ
ಭಾವ... read more
ಇಂದು ಹುಟ್ಟುವ ಸೂರ್ಯ ಪಥ ಬದಲಿಸುತ್ತಾನೆ
ನಿಶ್ಯಕ್ತ ಕಿರಣಗಳಿಗೆ ಶಕ್ತಿ ಬರುತ್ತದೆ,
ಆ ಶಕ್ತಿ ನಮಗೂ ಪಸರಿಸಲಿ
ಪರ್ವತವು ಚಲನೆಯ ನಿಯಮ ಪಾಲಿಸುವಾಗ,
ನಾವು ಜಡವಾಗುವುದು ಬೇಡ.
ನಾವು ಬದಲಾಗಲು ಇದು ಒಳ್ಳೆಯ ಸಮಯ
ಬದುಕಿಗೆ "ಸಂ"ಕ್ರಾಂತಿಯ ಸ್ಪರ್ಶ ಸಿಗಲಿ
ಎಲ್ಲರಿಗೂ ಸಂಕ್ರಾಂತಿಯ ಹಬ್ಬದ ಹಾರ್ದಿಕ ಶುಭಾಶಯಗಳು.
ಎಳ್ಳು ಬೆಲ್ಲ ತಿಂದು ಸ್ವಲ್ಪನಾದ್ರು ಒಳ್ಳೆಯದ ಮಾತಾಡೋಣ
-
ಇಂದಿನ ನಮ್ಮ ಈ ಪರಿಸ್ಥಿತಿಗೆ
ನಿನ್ನೆಯ ನಾವೇ ಕಾರಣವಾಗಿರುತ್ತೆವೆ
ಮುಂದಿನ ನಮ್ಮ ನಾಳೆಗಳಿಗೆ
ನಾವೇ ಹೊಣೆಗಾರರಾಗಿರುತ್ತೇವೆ
ಇನ್ನೊಬ್ಬರನ್ನು ದೂಷಿಸುವುದು ತರವಲ್ಲ-
ಹಗಲು ಕಳೆದು ರಾತ್ರಿ ಬಂದಿರಲು
ನಮಗಾಗಿಯೇ ಕನಸಿನ ಲೋಕದ
ಬಾಗಿಲು ತೆರೆದಿರಲು
ಸ್ವತಂತ್ರವಾಗಿ ಹಾರುವ ಬಾ
ಕನಸಿನುಗಳ ಕಲೆಹಾಕುವ ಬಾ
ನಕ್ಷತ್ರಗಳ ಜೊತೆ ನಲಿದಾಡುವ ಬಾ
ಚಂದ್ರ ನಾಚುವಂತೆ ಶೃಂಗಾರದಿ ತೇಲುವ ಬಾ
-Megha pujeri
-
ಕನ್ನಡಮ್ಮನ ಉತ್ಸವ ಮಾಡೋಣ
ಕನ್ನಡ ರಾಜ್ಯೋತ್ಸವ ಮಾಡೋಣ
ಸಾಹಿತ್ಯದ ಬೀಡಿಗೆ
ಸಂಸ್ಕೃತಿಯ ನಾಡಿಗೆ
ಕನ್ನಡಮನ ಊರಿಗೆ
ಉತ್ಸವ, ಮಾಡೋಣ
ಕನ್ನಡರಾಜ್ಯೋತ್ಸವ ಮಾಡೋಣ
ಸಕ್ಕರೆಯ ನಾಡಿಗೆ
ಕವಿಗಳ ತಾಯ್ನಡಿಗೆ
ಶ್ರೀಮಂತ ಕಲೆ ನಾಡಿಗೆ
ಉತ್ಸವ, ಮಾಡೋಣ
ಕನ್ನಡರಾಜ್ಯೋತ್ಸವ ಮಾಡೋಣ
ಕಪ್ಪು ಮಣ್ಣಿನಲ್ಲಿ
ಶ್ರೀಗಂಧದ ಸುಗಂಧದಲ್ಲಿ
ಕನ್ನಡಿಗರಾಗಿ ಹುಟ್ಟಿದ್ದಕ್ಕೆ ಹೆಮ್ಮೆಪಡೋಣ
ಉತ್ಸವ ಮಾಡೋಣ,
ಕನ್ನಡ ರಾಜ್ಯೋತ್ಸವ ಮಾಡೋಣ
-
ನಾ ಗೀಚೋ ಪದಗಳೆಲ್ಲ
ಪಡೆದಿಹವು ನಿನ್ನಿಂದ ಜೀವ
ನಿನ್ನ ಪ್ರೀತಿಯೇ ಆದರ ಭಾವ
ಕೊಡದಿರು ಹೃದಯಕೆ ನೋವ
ತಾಳಲಾಗದು ಈ ಬಡ ಜೀವ
-
ಚಂದಿರನ ಬೆಳದಿಂಗಳಲ್ಲಿ ಮಿಂದೆದ್ದವನೆ
ಕಮಲದದಂತ ಕೋಮಲ ಹೃದಯದವನೆ
ಮುಗುಳುನಗೆಯ ಆಭರಣ ತೊಟ್ಟವನೆ
ನನಗಾಗಿ ಭೂಮಿಗೆ ಸರ್ಗ ತಂದವನೆ
ನಾ ಏಳೇಳು ಜನ್ಮಕೂ ಬರೆದಿರುವೆ....
ನೀ ಎಂದೆಂದಿಗೂ ನನ್ನವನೇ....❤
ನೀ ಎಂದೆಂದಿಗೂ ನನ್ನವನೇ....❤-
ಹೈಕು
ಆತ ಆಡಿದ್ದೆ
ಬದುಕು, ಸೂತ್ರದಾರ
ಮೇಲೆ ಇದ್ದಾನೆ
ನಾವೆಲ್ಲ ನೆಪ ಮಾತ್ರ
ಬಾಳ ಆಟದಿ-