ಕನ್ನಡತಿಯ ಜೀವನೊಡನಾಡಿ
ನನ್ನ ಬಾಳಿನ ದಿವ್ಯ ಪ್ರಕಾಶಿನಿ
ನಸುನಗುವ ಒಲವಿನೈಸಿರಿ
ಬದುಕಿಗವಳೇ ಚೈತನ್ಯದ ಚಿಲುಮೆ
ಎರಡು ವರುಷದ ದಾಂಪತ್ಯಕೆ
ತಾಳ್ಮೆಯ ಅಡಿಪಾಯ ಹಾಕಿದ
ಪ್ರೇಮಮಯಿ ಹೃದಯವಂತೆ
ಅನುದಿನವೂ ಅನುರಾಗದಿ
ಅನುಕ್ಷಣವೂ ಒಲವಗಾನದಿ
ನಗುತಿರಲಿ ನನ್ನೊಳಗೆ ನಿನ್ನಯ
ಸವಿನೆನಪಿನ ಸುಮಧುರಗಾನ
ಸಂತೋಷದ ಚಿಲುಮೆಯಾಗಲಿ
ನಮ್ಮ ದಾಂಪತ್ಯದ ಪ್ರೇಮದುಯ್ಯಾಲೆ.-
ತಾಳ್ಮೆಯಿಂದ ತಾಯಿಯಾಗಿ
ಮಮತೆಯಿಂದ ಮಡದಿಯಾಗಿ
ವಾತ್ಸಲ್ಯದಿಂದ ತಂದೆಯಾಗಿ
ಅಕ್ಕರೆಯಿಂದ ಅಕ್ಕಳಾಗಿ
ಅಂತಃಕರಣದಿಂದ ಅಜ್ಜಿಯಾಗಿ
ನೋವುನಲಿವಿಗೆ ಸ್ನೇಹಿತೆಯಾಗಿ
ಬದುಕಿನ ಸಂಸಾರದ ಸಾರಥಿಯಾಗಿ
ಸಣ್ಣಪುಟ್ಟ ಕಿರಿಕಿರಿಗಳನ್ನೂ ತಳ್ಳಿಹಾಕಿ
ಯಶಸ್ವಿ ಎರಡು ವರುಷದ ದಾಂಪತ್ಯವನ್ನು
ಒಲವರಾಗದಿ ಬೆರೆಸಿ, ಪ್ರೇಮರಸದೌತಣದ
ಜೊತೆಗೆ ಪ್ರೀತಿಯ ಗೆಳೆತಿಯಾಗಿ,
ಬಾಳಸಖಿಯಾಗಿ ಒಲವ ಬಾಳ ಬೆಳಗಿಸಿದೆ.
ದಾಂಪತ್ಯಗೀತೆಗೆ ರಾಗನೀನಾದೆ ತಾಳ ನಾನಾದೆ
ಒಲವಿನ ದಾಂಪತ್ಯದ ಸವಿಗಾನ ಸೂಸುತಿದೆ
ತಂಗಾಳಿಯ ಒಡನಾಡಿಯಾಗಿ ಸಂತಸದಿ.-
ಇಂದಿನ ಕಾಲಘಟ್ಟದಲ್ಲಿ ...
ವಿವಾಹದ ಅನನ್ಯ ಪಾವಿತ್ರ್ಯ ಸಂಸ್ಕಾರ !!
ಮೋಹದ ಹೊನ್ನಿನ ಅಸಹ್ಯ ವ್ಯಾಪಾರ !!
ವಧು-ವರರ ಮದುವೆಯ ಆಡಂಬರದ ಸಿರಿ ಆಚಾರ !!
ಬಲಿಕೊಡಲು ಅಲಂಕರಿಸಿದ ಕುರಿಯ ಪರಿ ಗ್ರಹಚಾರ !!-
ಬದುಕಿನ ಕಡಲಲ್ಲಿ ಪ್ರೀತಿಯ
ಅಲೆಯಾಗಿ ಬಂದವನು ನೀನು..
ಜಂಜಾಟದ ಸುಳಿಯಲ್ಲಿ ಸಿಕ್ಕಾಗ
ಭರವಸೆಯ ಹುಟ್ಟು ನೀಡಿದವನು ನೀನು..
ಕೈ ಹಿಡಿದು ಹೆಜ್ಜೆಗೆ ಹೆಜ್ಜೆಯಾಗಿ ಬಾಳ ಪಯಣದಲ್ಲಿ ಜೊತೆಗಿರುವೆ ಎಂದು ಪ್ರಮಾಣಿಸಿ..
ಮದುವೆ ಎಂಬ ಮೂರು ಗಂಟಲ್ಲಿ
ನನ್ನನು ಒಲವಿನ ಬಂಧನದಲ್ಲಿ ಕಟ್ಟಿ ಹಾಕಿದವನು...
ಬೆಸೆದ ಗಂಟಲ್ಲಿ ಏಳೇಳು ಜನ್ಮಕ್ಕು ನಾ ನಿನ್ನ ಹೃದಯದ ಮಂಟಪದಲ್ಲಿ ಬಂಧಿಯಾಗಿರುವೆ.-
ಕಂಕಣದ ಸೌಭಾಗ್ಯ ಕೂಡಿ ಬಂದಿದೆ ನಿನಲ್ಲಿ
ಹೊಸ ವಸಂತದ ಸಿಂಚನದಲ್ಲಿ
ಕಾಣುವ ಸುಖ ಕೈ ಬೀಸಿ ಕರೆಯುತ್ತಿದೆ ಕಾಣದ ದುಃಖ ಮರೆಮಾಚಿ ಕೊರಗುತಿದೆ
ಮೈ ಮನವ ಬಂದಿಸಿ ಆಸೆ ಆಕಾಂಕ್ಷೆಗಳ ನಿಂದಿಸಿ
ನಾಳೆಯ ಕನಸ ಕಾಣುವ ಸೊಬಗು
ವಿವಾಹದ ಮೆರುಗು ಕಾಣುತಿದೆ
ಸಕಲ ಸಾಧನೆಯ ಛಲ ಮುಚ್ಚಿ ಹೋಗಿದೆ
ದಿನ ನಿತ್ಯದ ಕೊರಗು ಕೂಗುತಿದೆ
ಪತಿಯ ಅನುಮಾನ ಪತಾಕೆ ಯೆದ್ದು ನಿಂತಿದೆ
ಇಂತಹ ಸಾಮ್ರಾಜ್ಯದಲ್ಲಿ ಸಿಲುಕಿ ನರಳಲು
ನೀ ಸಿದ್ದನಾಗಿಹಳಂತೆ ಭಾಸವಾಗುತ್ತದೆ...
-
🌹ಮಹಾಭಾರತ💐
ಯಯೋರೇವ ಸಮಂ ವಿತ್ತಂ ಯಯೋರೇವ ಸಮಂ ಶ್ರುತಂ |*
*ತಯೋರ್ವಿವಾಹಃ ಸಖ್ಯಂ ಚ ನ ತು ಪುಷ್ಪವಿಪುಷ್ಪಯೋಃ ||*
-- .
ಯಾರಿಗೆ ಹಣ ಮತ್ತು ವಿದ್ಯೆ ಸಮಾನವಾಗಿದೆಯೋ ಅವರ ನಡುವೆ ಮಾತ್ರ ಮದುವೆಯೋ ಸ್ನೇಹವೂ ಪ್ರಶಸ್ತ. ಹೆಚ್ಚು ಕಡಿಮೆ ಇರತಕ್ಕವರಲ್ಲಿ ಪ್ರಶಸ್ತವಲ್ಲ.-
ಹರ್ಷಳ ಮೊದಲ ನೋಟದಲ್ಲೇ
ರಾಘವನು ಸಿಲುಕುತ್ತ ಮಾಯಪಾಶ
ಗುರುಹಿರಿಯರ ಸಮಾವೇಶ
ಮೊಳಗಿತ್ತು ಸಂಭ್ರಮದ ವೇದಘೋಷ
ಇಬ್ಬರಲೂ ಉಕ್ಕಿಹರಿವ ಪ್ರೀತಿಯ ಸ್ಪರ್ಶ
ಮೂಡಿತ್ತು ಗರ್ಭದಲಿ ಚೊಚ್ಚಲ ಅಂಶ
ಪ್ರೀತಿಯ ಆದಿಯ ಜೀವನದಿ ಪ್ರವೇಶ
ಸದಾ ಸರಸದ ರಸರಸ , ಒಮ್ಮೊಮ್ಮೆ ವಿರಸ
ಮರುಕುಡಿಯಾಗಿ ಭೂಮಿಯ ಸಾರಾಂಶ
ನಾವಿಬ್ಬರೂ ನಮಗಿಬ್ಬರೆನ್ನುತ
ಸ್ವರ್ಗಕ್ಕೆ ಕಿಚ್ಚ್ಹಚ್ಚುವ ಸಂಸಾರದ ಸಂತಸ
ತಿರುಗಾಡಿ ಹಲವಾರು ವಿದೇಶಗಳ ಪ್ರದೇಶ
ಕೊನೆಗೊಮ್ಮೆ ಸ್ವಂತದ ರಾಜಧಾನಿಯ ವಾಸ
ನೆಮ್ಮದಿಯ ಬದುಕಿಗೀಗ ಹರೆಯದ
ಹದಿನಾರರ ವರುಷ
ನೂರ್ಕಾಲ ಖುಷಿ ಖುಷಿಯಾಗಿ ಬಾಳಿರೆನ್ನುವ
ಅಣ್ಣ ಅತ್ತಿಗೆಯ ಅಭಿಮಾನದ ಹಾರೈಕೆಯ ಕವನದ ದೃಶ್ಯ 😍😍❤❤
ಪ್ರಿಯಾ ದೀಕ್ಷಿತ್-
ಮದುಮಗಳ ಕೈಯಲ್ಲಿ ಮದರಂಗಿಯ ಚಿತ್ತಾರ
ಮದುಮಗನ ಎದೆಯಲ್ಲಿ ಒಲವಿನ ಓಂಕಾರ
ಹಸೆಮಣೆಯ ಮೇಲೆ ಕನಸುಗಳಿಗೆ ಆಕಾರ
ಬಂದ ಬೆಸೆಯಲು ಅತಿಥಿ ಸತ್ಕಾರ-
ಮದುವೆಯ ಮುಂಚೆ ಇಬ್ಬರಲ್ಲೂ ಆದರ್ಶ
ಮದುವೆಯ ನಂತರ ಬರೀ ಸಂಘರ್ಷ
ಅರ್ಥ ಮಾಡಿಕೊಳ್ಳಲು ಬೇಕು ಹತ್ತಾರು - ವರುಷ
ಅಷ್ಟು ಹೊತ್ತಿಗೆ ಆಗಿರುತ್ತದೆ ವೃದ್ದಾಪ್ಯದ ಪ್ರವೇಶ
- ಕೆ. ಚರಣ್ ಕುಮಾರ
-
ಏಳು ಹೆಜ್ಜೆಗಳನ್ನು ಹಾಕಿ ಆರು ಋತುಗಳಲ್ಲಿ ನಲಿಯುತಾ ಐದು ಮುತ್ತೈದೆಯರಿಂದ ಕಳಸ ಬೆಳಗಿಸಿ ನಾಲ್ಕು ದಿಕ್ಕುಗಳ ಸಾಕ್ಷಿಯಾಗಿ ಮೂರು ಗಂಟುಗಳ ಬಂದನದಿಂದ ಎರಡು ಜೀವಗಳನ್ನು ಒಂದು ಮಾಡುವ ಅವಕಾಶ ಸನ್ನಿವೇಶಗಳೆ ಮದುವೆಯ ಸಂಭ್ರಮ..
-