ದೊಡ್ಡ ದೊಡ್ಡ ಮನೆ ಕಾರು
ಸತತ ಫಾರಿನ್ ಟೂರು
ದುಬಾರಿ ಬಟ್ಟೆಯ ಜೋರು
ಇವೆಲ್ಲವುಗಳಿಗೆ
ಮೌಲ್ಯ ಮರ್ಯಾದೆಯ
ಮನಸಿನ ದೊಡ್ಡತನದಲಿ
ಪರರ ವಸ್ತುವಿಗೆ ದುರಾಸೆ ಪಡದೆ
ಬದುಕಿದಾಗ ಮಾತ್ರ
ಮಹತ್ವದ ಬದುಕಿಗೆ ಮೊಹರು
ಇಲ್ಲದಿರೆ
ಎಸೆಯಲೂ ಬರದೇ ತಿನ್ನಲೂ ಆಗದೇ
ಬರಡ ಬದುಕು
ತುಂಬು ಪದರಿನೊಳಗೆ ಜೊಳ್ಳುಕಾಳಿನ ಕಸರು
ಹಾಗೆ ಸುಮ್ಮನೆ...
ಪ್ರಿಯಾ ದೀಕ್ಷಿತ್
-
ನೇಸರ
ಬಿಂಕಬಿಗುಮಾನವಿಲ್ಲದೇ ನಿನ್ನೆಯ ಕತ್ತಲ ಕಳೆದು
ನಂಬಿಕೆ ಹೊಸತನದಿ ಪ್ರತಿನಿತ್ಯ ಬೆಳಗುವ ನೇಸರ
ನಮ್ಮೀರ್ವರ ಒಲುಮೆ ಇವನಂತೆಯೇ ಪ್ರಖರ
ಕದ್ದು ಮುದ್ದಿಸಿ ಗೆದ್ದ ಬದುಕಿಗೆ ಪ್ರೇಮಮದ್ದಿನ ಸಾರ
ಪ್ರಿಯಾ ದೀಕ್ಷಿತ್-
ಮೇಧಾವಿ
ಹತ್ತು ಹಲವು ಬ್ರಹ್ಮವಿದ್ಯೆ ಕಲಿತಿಲ್ಲ
ನಾನಲ್ಲ ನುರಿತ ಮೇಧಾವಿ
ನಿನ್ನ ಕ್ಷಣವೂ ಕೂಡ ಅಗಲದಷ್ಟು
ತುಳುಕುತಿದೆ ಪ್ರೀತಿ , ನೀನಿದನರಿತ ಅನುಭವಿ ❤
ಕುತೂಹಲ
ಒಳಗೊಳಗೆ ನಗು ನಾಚಿಕೆ ಗಾಬರಿಯ
ಮೊದಮೊದಲು ಬುದ್ಧಿ ಮನಸಿನ ಕೋಲಾಹಲ
ಹರೆಯದಿ ಮೂಡುವ ಹೊಚ್ಚಹೊಸಪ್ರೀತಿ
ಅರಿಯದ ಅಂತರದ ಕುತೂಹಲ 😍
ಪ್ರಿಯಾ ದೀಕ್ಷಿತ
-
ಕಾಲಕಾಲಕ್ಕೆ ಬೆಳೆ ಕೊಡುವ ವಸುಧೆ
ಬೆಳೆದದ್ದ ಆರಿಸಿ ಕೇರಿ ತುಂಬುವ ಶ್ರದ್ಧೆ
ಕಸಮುಸುರಿ ಕೂಲಿಯ ಕೊಳೆ
ಗುದ್ದಿ ತಿದ್ದಿ ಆಕಾರಕೊಡುವ ಕಳೆ
ಸತ್ಸತ್ತು ಬದುಕಿ ಬೇನೆತಿಂದರೂ
ಮುಗುಳ್ನಕ್ಕ ಮಮತೆ
ಬಡತನವೋ ಸಿರಿತನವೋ
ಸದಾ ಕಾಪಿಟ್ಟು ಬದುಕುವ ಘನತೆ
ಆಕಾಶದಲಿ ವಾಹನ ಹಾರಿಸುವ ಪೈಲೆಟ್ಟೊ
ಹಗಲಿರುಳೆನ್ನದೇ ಜೀವ ಉಳಿಸುವ ಡಾ! ಗುಟ್ಟೋ......,
ಎಲ್ಲರಲೂ ಒಂದೇ ಮತ
ತನ್ನ ನಂಬಿ ಬದುಕುವವರಿಗೆ ಕೊಡುವ ನಿಶ್ಚಿಂತೆ ಭರವಸೆಯ ಹಿತ
ಬಹುಶಃ ಇದು ಅವಳಲ್ಲಿ ಕಲಿಸದೇ ಬಂದ ಹುಟ್ಟುಗುಣ
ಅವಳು ಸ್ತ್ರೀ ಎನ್ನುವುದೇ ಕಾರಣ ❤❤
ಎಲ್ಲರಿಗೂ ನಮ್ದಿನದ ಶುಭಾಶಯಗಳು
#happywomensday
ಪ್ರಿಯಾ ದೀಕ್ಷಿತ್-
ಬಯಸಿರುವುದೆಲ್ಲ ಲೌಕಿಕಗಳಷ್ಟೆಯಲ್ಲ
ಸ್ವಾಭಿಮಾನದ ಸಮ್ಮಾನಕೆ ಕೆಲವೆಲ್ಲ
ಪಾರದರ್ಶಕತೆಯ ಸಂಬಂಧಕೆ
ನಾಟಕೀಯದ ಲೇಪನ ಬೇಕಿಲ್ಲ
ಇಲ್ಲದಿರೆ
ವಜ್ರದಂದದ ಹೊಳಪು
ಅಸಲಿ ಗಾಜಿನ ಥಳಕು
ಭಾವನೆಗಳ ಭಾರ ತಡೆಯಲಿಕ್ಕಿಲ್ಲ
ಹಾಗೆ ಸುಮ್ಮನೆ....
ಪ್ರಿಯಾ ದೀಕ್ಷಿತ್
-
ಮತ್ಮತ್ತೆ ಕಾಡಿದೆ ನನಸಿನ ಕನಸು
ಕೂಡಿಕಳೆಯಲ್ಲೊಂದಿಷ್ಟು ಘಳಿಗೆಯ ಬಯಸು
ಬದುಕೆಂಬ ದಟ್ಟಹನಿಯ ನೀರಿನಲಿ
ಮುಗ್ಧನೆನಪೆಂಬ ಕಾಗದದೋಣಿ
ಮನವ ತೇಲಿಸು
ಅನಿರೀಕ್ಷಿತ ಬದುಕಿನ ಪ್ರೌಢ ತಿರುವುಗಳಲ್ಲಿ
ಮರೆತೆಲ್ಲ ಒತ್ತಡದ ನೀರಸು
ಮೆಲುಕಿ ಹಳೆಯದೆಲ್ಲ ನಕ್ಕುನಲಿಯಲು
ಸ್ನೇಹ ಒಂದು ಓಯಾಸಿಸ್ಸು ❤❤
ಪ್ರಿಯಾ ದೀಕ್ಷಿತ್
-
ಕಪ್ಪುರಾತ್ರಿಯ ಚೂರು ಕುರುಹಿಲ್ಲದೇ
ನಿತ್ಯವೂ ತಪ್ಪದೇ ಬೆಳಗುವ ಭಾಸ್ಕರ
ಹೊಸತನಬೆಳಗೊಂದು ಎಳೆಚಿಗುರಿನ ಆಗರ
ಬೆಲ್ಲವಿರದೆಯೂ ಸಿಹಿಮಧುರ ಮಾತೊಂದು
ಕುಸಿದ ಮನಕೆ ಮುಗುಳ್ನಗೆಯ ಹುಲುಆಸರ
ಮನಸು ಬುದ್ಧಿಗಳೋಟದ ಬಿಡದ ಪೈಪೋಟಿಯಲಿ
ಭಾವನೆಗಳ ಮೃದುಹೃದಯಕೆ ಭರವಸೆಯ
ಆಧಾರ ❤❤
ಹಾಗೆಸುಮ್ಮನೆ......
ಪ್ರಿಯಾ ದೀಕ್ಷಿತ್
-
ಬೇಕೆಂದರೂ ಮರಳಿ ಸಿಗದ ,
ಮತ್ಮತ್ತೆ ಬರುವ ಬೇಡಗಳ ಬದುಕು
ಇದ್ದಾಗ ಗುದ್ದು ಗದ್ದಲದ ತುಣುಕು
ಸದ್ದಿಲ್ಲದೇ ಕೊಲ್ಲುವ ಇರದ ಮೌನದ ಕುಹಕು
ಹಲವೆಡೆ ನಿರ್ಜೀವ ಉಸಿರಿನ ಬದುಕು
ಇನ್ಕೆಲವು ಸತ್ತಾಗೂ ಜೀವಂತಿಕೆಯ ಮೆಹೆಕು
ಒಟ್ಟಾರೆ ಬಯಸಿದ ಬದುಕು
ಅದೃಷ್ಟದಂದದ ಆಸೆತೋರಣಕಿಸಿ
ಬದುಕುವ ಬದುಕು-
ಕಗ್ಗತ್ಲಕಳೆದು ಹೊಸಕಿರಣದ ಸೆರಗು
ಸಂತಸ ಸದ್ವಿಚಾರ ಸಂತೃಪ್ತಿಯ ಸೊಬಗು
ನಕ್ಕುನಗಿಸಿ ಆಹ್ಲಾದ ಸುಕೃತವ ಪಸರಿಸಿ
ನಿನ್ನೆಯ ಸಿಹಿಕಹಿಯೊಡನೆ
ಇಂದು ಮೇಲ್ಪಂಕ್ತಿಯ ಹೊಸಯತ್ನವು
ಅದ್ಭುತನಾಳೆಯ ನಿರೀಕ್ಷಿಸುವ
ಮತ್ತೊಂದು ಸುಂದರ ಬೆಳಗು!!!!❤❤
-
ಹೊಳೆಯುತ ಎಲ್ಲೆಡೆ ಹೊಸತನ
ಋತುವಸಂತನಾಗಮನ
ಕೋಗಿಲೆಯ ಕುಹೂವಿನ ಸಿಂಚನ
ನಂಬಿಕೆಯ ನಗುವು ನಿತ್ಯ ನೂತನ
ಹಳೆಬೇರು ಹೊಸಚಿಗುರು
ಮಾವು ಬೇವು ಹುಳಿಒಗರು
ಸೇರಿದಾಗ ಸಿಹಿ ಬೆಲ್ಲ
ಕಳೆಯುತಿಹುದು ಕಹಿಯೆಲ್ಲ
ಮೆಲ್ಲುತ ಒಟ್ಟಿಗೆ ಹಲವು ರುಚಿ ಸಮ್ಮಿಶ್ರಣ
ಬಹುಮುಖ ಬದುಕಿಗೆ ಭರವಸೆಗಳ ಲಾಂಛನ
ಸುಖಸಮೃದ್ಧಿ ನೆಮ್ಮದಿತರಲಿ ಪ್ಲವ
ಆರೋಗ್ಯ ಆಯುಷ್ಯವು ಎಲ್ಲೆಡೆ
ಉಕ್ಕಲಿ ಸಂತಸದ ಭಾವ ❤❤
ಯುಗಾದಿಹಬ್ಬ ಮತ್ತು ಹೊಸವರ್ಷದ ಶುಭಾಶಯಗಳು 🌿🌿🌿🌿
ಪ್ರಿಯಾ ದೀಕ್ಷಿತ್-