ಅದ್ಭುತ ಪಯಣ ಈ ಬದುಕು
ನೆನ್ನೆಯ ಅನುಭವಗಳ ರಾಶಿ
ಜೊತೆಗೊಂದಿಷ್ಟು ನಂಬಿಕೆ, ವಿಶ್ವಾಸ ಬೆರಸಿ
ಮುಗುಳುನಗೆಯೊಂದಿಗೆ ಬರಮಾಡಿಕೊಂಡರೆ
"ನಾಳೆ" ಎಂಬ ಅವಕಾಶ ನಮಗಾಗಿ
ಬದುಕಲೇಬೇಕಿದೆ ಎಲ್ಲ ಪರೀಕ್ಷೆ ಎದುರಿಸಿ
ಬದುಕ ಬೇಕಿದೆ ಹಲವರ ನಂಬಿಕೆ 'ಹುಸಿ ' ಗೊಳಿಸಿ
ಪ್ರತಿದಿನವೂ ಹೊಸ ಹುರುಪಿನಿಂದ ಸ್ವೀಕರಿಸಿ
ಏನೇ ಬಂದರೂ ತುಂಬು ಹೃದಯದಿಂದ ಸ್ವಾಗತಿಸಿ
ಬೆಂಬಲವಾಗಿ ನಿಲ್ಲುವ ಎಲ್ಲ ಮನಸ್ಸುಗಳಿಗೆ ನಮಸ್ಕರಿಸಿ
ನಮ್ಮಲ್ಲೇ ಇರುವುದಂತೆ ಸಮಸ್ಯೆಗೆ ಪರಿಹಾರಗಳು
ಈ ಕ್ಷಣಕ್ಕೆ ನಾ ಅಗಿಯೆನು ಕಸ್ತೂರಿ ಮೃಗದಂತೆ
ಅವರಿವರಿಗೆ ಕಾಣುವುದು ನನಗೆ ಕಾಣದಾಗಿದೆ
ಕಾಣಬಲ್ಲೆನು, ಹುಡುಕಬಲ್ಲೆನು ಒಂದು ದಿನ
ಅಲ್ಲಿಯವರೆಗೂ ಉಸಿರಾಡಬೇಕಿದೆ ನಂಬಿಕೆಯೊಂದಿಗೆ
ಕೆ. ಚರಣ್ ಕುಮಾರ್
- ಕೆ. ಚರಣ್ ಕುಮಾರ್
-
ಕಳೆದ ವರ್ಷದಲ್ಲಿ
ಕಳೆದುಕೊಂಡದ್ದೇ ಹೆಚ್ಚು
ಹಚ್ಚಿದ ದೀಪ ಬೆಳಕಿನಡಿಯಲ್ಲಿ
ಮೆಲ್ಲನೆ ಕಂಬನಿ ಜಾರುತ್ತಿತ್ತು.
ಪ್ರೀತಿಪಾತ್ರರ ನೆನಪಿಸುತ್ತಿತ್ತು
ಕೆ. ಚರಣ್ ಕುಮಾರ್-
ಸೋಲಿದ್ದರು, ಗೆಲುವಿದ್ದರು
ಸಾಗುತಿರಬೇಕು ಜೀವನ
ಕೋಪದ ಜ್ವಾಲೆ ಆರಲಿ
ಪ್ರೀತಿಯ ಜ್ಯೋತಿ ಬೆಳಗಲಿ
ಹತಾಶೆಯ ಕತ್ತಲೆ ದೂರವಾಗಲಿ
ಅವಮಾನದ ಕಿಡಿ ತಾಗದಿರಲಿ
ಕೆಚರಣ್ ಕುಮಾರ್
ಬಲಿಪಾಡ್ಯಮಿ ಶುಭಾಶಯಗಳು-
ಹೊರಟಿದೆ ನಕ್ಷತ್ರ ಬಾರದ ಲೋಕಕೆ
ಭಾರವಾಗಿದೆ ಅಸಂಖ್ಯಾತ ಕನ್ನಡಿಗರ ಹೃದಯಕೆ .
- ಕೆ. ಚರಣಕುಮಾರ್-
ಜೀವನದಲ್ಲಿ "ಹಣ " ನೇ ಮುಖ್ಯ ಅಲ್ಲ ಅಂತ ಹೇಳೋಕಾದರು ನಮ್ಮ ಹತ್ರ ಹಣ ಇರಬೇಕು. ಖಾಲಿ ಜೇಬು ಮಾತು ಯಾರು ಕೇಳಲ್ಲ.
- ಕೆ. ಚರಣ್ ಕುಮಾರ್-
ಅವರಿವರ ಬೈಯುವುದೇ ಆಗಿದೆ ರಾಜಕಾರಣ
ಯೋಚಿಸಬೇಡಿ ಬೈ ಎಲೆಕ್ಷಣ್ ಬಂದಿರುವುದೇ ಕಾರಣ
- ಕೆ. ಚರಣ್ ಕುಮಾರ್-
ವ್ಯರ್ಥವಾಗದಿರಲಿ ಹಗಲು, ವ್ಯರ್ಥವಾಗದಿರಲಿ ರಾತ್ರಿ, ವ್ಯರ್ಥವಾಗದಿರಲಿ ಪ್ರೀತಿ, ವ್ಯರ್ಥವಾಗದಿರಲಿ ಭಕ್ತಿ
ವ್ಯರ್ಥವಾಗದಿರಲಿ ಕನಸು, ವ್ಯರ್ಥವಾಗದಿರಲಿ ವಯಸ್ಸು
ವ್ಯರ್ಥವಾಗದಿರಲಿ ಪ್ರಾರ್ಥನೆ, ವ್ಯರ್ಥವಾಗದಿರಲಿ ಚಿಂತನೆ
ವ್ಯರ್ಥವಾಗದಿರಲಿ ಒಳ್ಳೆತನ ವ್ಯರ್ಥವಾಗದಿರಲಿ ದಿನ ಕ್ಷಣ
ವ್ಯರ್ಥವಾಗದಿರಲಿ ಉತ್ಸಾಹ, ವ್ಯರ್ಥವಾಗದಿರಲಿ ಪ್ರೋತ್ಸಾಹ
- ಕೆ. ಚರಣ್ ಕುಮಾರ್
-
ಕ್ಷಮಿಸಿಬಿಡು ಜೀವನವೇ
ಎಡವಿ, ಎಡವಿ ದಾರಿ ತಪ್ಪಿದ್ದಕ್ಕೆ
ಪ್ರಯತ್ನವೇ ಇಲ್ಲದೆ ಸೋತಿದ್ದಕ್ಕೆ
ಸದಾ ಅಹಂಕಾರದ ಮೂಟೆ ಹೊತ್ತಿದ್ದಕ್ಕೆ
ನನ್ನ ತನವ ಕಳೆದುಕೊಂಡಿದ್ದಕ್ಕೆ
ಉದ್ಧಾರವಾಗದೇ ಉದಾಸೀನ ಮಾಡಿದ್ದಕ್ಕೆ
ಸಿಕ್ಕ ಸಿಕ್ಕವರನ್ನೆಲ್ಲಾ ನಂಬಿದಕ್ಕೆ
ಪರಿಚದವರೆಲ್ಲಾ ಸ್ನೇಹಿತರು ಎಂದುಕೊಂಡಿದ್ದಕ್ಕೆ
ಮಾಡಿದರಾಯ್ತು ಎಂಬ ಸೋಮಾರಿತನಕೆ
ನಗುವುದನ್ನೇ ಮರೆತು ಒತ್ತಡದಲ್ಲೇ ಇದ್ದಿದ್ದಕ್ಕೆ
ಸೋಲುಗಳನು ಹೆದರಿಸಿಲಾಗದಿದ್ದಕ್ಕೆ
ಹತ್ತಿರದವರಲ್ಲಿ ಸಹಾಯ ಅಪೇಕ್ಷಿಸಿದಕ್ಕೆ
ತಿಳಿದೋ, ತಿಳಿಯದೆಯೋ ದ್ವೇಶ ಸಾಧಿಸಿದಕ್ಕೆ
ಜೀವನದ ಉದ್ದೇಶ ಮರೆತಿದ್ದಕ್ಕೆ
ಕ್ಷಮಿಸಿಬಿಡು ಅವರಿವರ ಅಭಿಪ್ರಾಯಕೆ ಹೆದರಿದಕ್ಕೆ
ಸುಮ್ಮನೇ ಬಹಳ ಕಾಲ ಚಿಂತೆ ಮಾಡಿದ್ದಕ್ಕೆ
ತಿದ್ದಿಕೊಳ್ಳುವ ಹಂಬಲವಿದೆ ಛಲವಿದೆ ಮನದಲ್ಲಿ
ಈಗಲೇ ಸರಿಸಮಯ ನಡೆಯಲು ಆ ಹಾದಿಯಲ್ಲಿ
- ಕೆ. ಚರಣ್ ಕುಮಾರ್-
ಬೆಂಗಳೂರಿನಲಿ ವಾಯುಭಾರ ಕುಸಿತ
ಸಲಗ ಹಿಟ್ ಆಗೋದು ಖಚಿತ
ವರುಷಗಳಾದ ಮೇಲೆ ಯಶಸ್ಸು ಸಿಕ್ಕಿದೆ
ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಮತ್ತಷ್ಟೂ ಬೇಕಿದೆ
- ಕೆ. ಚರಣ್ ಕುಮಾರ್-
ನಮ್ಮ ಪ್ರಯತ್ನಗಳಿಗೆ, ಸೋಲುಗಳಿಗೆ, ಎಡವಟ್ಟುಗಳಿಗೆ, ಅನುಮಾನಗಳಿಗೆ, ನೋವುಗಳಿಗೆ, ಹತಾಶೆಗಳಿಗೆ, ನಂಬಿಕೆಗೆ, ಸಂಭ್ರಮಗಳಿಗೆ, ಮುಟ್ಟಾಳತನಕೆ, ಕೋಪದಗಳಿಗೆಗೆ,ಗೆಲುವಿಗೆ ಕೊನೆವರೆಗೂ ನಾವೇ ಸಾಕ್ಷಿ
- ಕೆ. ಚರಣ್ ಕುಮಾರ್-