ರಾಜು ಹಗ್ಗದ  
850 Followers · 857 Following

read more
Joined 14 November 2017


read more
Joined 14 November 2017

ಬದುಕಿಗೆ ದಾರಿದೀಪವಾಗುತ್ತದೆ
ಆತ್ಮಸ್ಥೈರ್ಯದ ಬೆಳಕಾಗಿರುತ್ತದೆ
ಸಂಯಮದ ಬೇರಾಗಿರುತ್ತದೆ
ನಮ್ಮ ಪ್ರತಿಕ್ಷಣದ ಬದುಕಿಗೆ
ಹೊಳೆವ ನಕ್ಷತ್ರದಂತೆ ಶಿಕ್ಷಣ
ಪ್ರಜ್ವಲಿಸುವ ದೀಪವಾಗಿರುತ್ತದೆ.

-



ಅವಳೆಂದರೆ ಹಾಗೆಯೇ...
ಧೋ ಎಂದು ಸುರಿವ
ಮಳೆಯ ನಡುವೆಯೂ
ಮಳೆಹನಿಗಳೂ
ನಾಚುವಂತೆ ಮುದ್ದಿಸುವಾಕೆ!

-



ಜಾತ್ರೆಯ ಗಿಜಿಗಿಜಿ ಗದ್ದಲದಲ್ಲೂ
ನನ್ನ ಕಂಡ ವಾರೆಗಣ್ಣಿನ ಅವಳ ಕುಡಿನೋಟ
ಕುಲುಕುಲು ನಗುವಿನೊಂದಿಗೆ ಅಂತ್ಯವಾಯ್ತು!

-



ಮರಳಿ ಬಂಧ ಬೆಸೆಯದು
ಕರುಳಬಳ್ಳಿ ಕೂಡದು
ನಂಟು ಅಂಟು ಕಳೆವುದು
ಪ್ರೀತಿಗಲ್ಲಿ ಗಲ್ಲಿದೆ
ಸ್ನೇಹಕಲ್ಲಿ ಕೊನೆಯಿದೆ!

-




ಅನುರಾಗದ ಅಲೆಗಳು
ಅನವರತ ಎದೆಗಪ್ಪಳಿಸಿ
ಅಸಂಖ್ಯ ,ಅಗಣಿತ
ಭಾವದಲೆಗಳನು
ಅನುರಣಿಸಿವೆ ಎದೆಯಲಿ!

-



ಬದುಕು ತಾನು ರೂಪಿಸಿದ ಯೋಜನೆಯನ್ನು ಮನುಷ್ಯರಾದ ನಮ್ಮ ಮೇಲೆ ಪ್ರಯೋಗಿಸುತ್ತಲೇ ಇರುತ್ತದೆ. ಆ ಪ್ರಯೋಗಕ್ಕೆ ವಿಧಿಯಿಲ್ಲದೇ ನಮ್ಮನ್ನು ನಾವು ಒಡ್ಡಿಕೊಳ್ಳಬೇಕಾಗುತ್ತದೆ. ಅದನ್ನು ವಿಧಿಯಾಟ‌ ಎಂದು ಕರೆಯುತ್ತೇವೆ.

-



ಹೃದಯಕೂ ಮಾತಿಗೂ ಅಂತರವಿರದಿರಲಿ
ಮಾತಿಗೂ ಬದುಕಿಗೂ ವ್ಯತ್ಯಾಸವಾಗದಿರಲಿ
ನಡೆನುಡಿಗಲೊಂದಾದೊಡೆ ಬದುಕು ಸಾರ್ಥಕ.

-



ಹೊಟ್ಟೆ ಹಸಿವು ಇರುವವರ ಜೊತೆ ಬದುಕಬಹುದು!
ಕನಸುಗಳ ಹಂಬಲವಿರದವರ ಜೊತೆ ಬದುಕಲಾಗದು!

-



ಮನಸ್ಸು ಮಗುವಾಗುತ್ತದೆ
ನಗು ಮುಗುಳ್ನಗುತ್ತದೆ
ಭಾವ ಪ್ರೀತಿಯ ಹೂ ಬಿಡುತ್ತದೆ.

-



ಪ್ರಾಮಾಣಿಕತೆ ಹಾಗೂ ಅಪ್ರಾಮಾಣಿಕತೆಗಳ ನಡುವಿನ ಹೋರಾಟದಲ್ಲಿ ಮುಗ್ಧತೆ ಕೊನೆಯುಸಿರೆಳೆಯುತ್ತದೆ‌.

-


Fetching ರಾಜು ಹಗ್ಗದ Quotes