ಭವಿಷ್ಯ ಕಟ್ಟುವ ದೇಗುಲ
ಇಂದು ಕೋಮು ಸಂಘರ್ಷದ ಆಲಯ
ಸಮಾನತೆಯ ನಿಲಯ
ಧರ್ಮದ ವಿಷಬೀಜ ಬಿತ್ತುವ ವಲಯ
ಮರೆಮಾಚಿದೆ ವಿವಿದತೆಯಲ್ಲಿ ಏಕತೆ
ಅಡ್ಡಕತ್ತರಿಯಲ್ಲಿ ಸಾಮರಸ್ಯದ ಸಮಾನತೆ
ತಿರಸ್ಕಾರದ ಮನಸ್ಥಿತಿಯಲ್ಲಿದೆ ಗುರುವಿನ ಗುರುತ್ವ
ಕೇಳುವರಾರಿಲ್ಲ ಅವನ ಭವಿತ ರೂಪಿಸುವ ನೀತಿ ತತ್ವ
ಪಥ ಬದಲಿಸಿದ ಶಿಕ್ಷಣ
ಉಜ್ವಲ ಭವಿಷ್ಯದ ಭಾರತಕ್ಕೆ ಇದು ಅವಲಕ್ಷಣ
ಮೊಳಗಲಿ ಸಮಾನತೆಯ ಸಾರ
ಕೂಗಲಿ ಏಕತೆಯ ಭಾವಸ್ವರ
#ವಂದೇ ಮಾತರಂ ..
#ಜೈ ಹಿಂದ್ ❤
-Kiran(patli)
— % &-
ಕೋಟೆನಾಡು ಚಿತ್ರದುರ್ಗದ ಅರಸ,,
ಜಗದ ಹಸಿವು ನೀಗಿಸುವ ಗೌಡರ ಕುಲದ ಅನ್ನದಾತ,
... read more
ಧಮನಿಯ ದೊರೆಸಾನಿ
ಕವಿ ಮನದ ಅಭಿಮಾನಿ
ಅನುರಾಗದ ದೀವಟಿಗೆಯ ಒತ್ತು ತಾರೆ ಒಲವಧ್ಯಾನಿ❤!!..
-
ನನ್ನಯ ಎದೆಗೂಡಿನ
ಬಾಗಿಲು ತೆರೆದಿದೆ ನಿನಗಾಗಿ ಪ್ರಿಯೆ ,
ಭಾವಗಳ ತೋರಣದೀ ಸಿಂಗರಿಸಿ
ನಗುವಿನ ಕಂಪನ್ನು ಪಸರಿಸಿ
ವಿಶ್ವಾಸದ ಪುಷ್ಪವ ಚೆಲ್ಲಿ
ಪ್ರೇಮ ಕಿರಣಗಳ ಪ್ರಕಾಶಮಾನವಾದ ಬೆಳಕಿನಲ್ಲಿ
ನಂಬುಗೆಯ ದೀವಟಿಗೆ ಹಿಡಿದು
ತನು ಮನವು ನಿಷ್ಕಲ್ಮಶವಾಗಿ
ಕಾದು ನಿಂತಿದೆ ನಿನ್ನ ಸ್ವಾಗತಿಸಲು
ಬಾರೇ ಸಂಪ್ರದಾಯದ ಹೊಂಬೆಳಕ್ಕಾಗಿ
ಒಲುಮೆಗರಿಯ ಸಿರಿ ಕನ್ನಡತಿಯಾಗಿ
ಸೀರೆಯ ಸೊಬಗಿನಲ್ಲಿ
ಮಲ್ಲಿಗೆಯ ಘಮಲಿನಲ್ಲಿ
ಕಾಲ್ಗೆಜ್ಜೆಯ ನಾದ ಸ್ವರದಲ್ಲಿ
ಸಿಂಧೂರದ ಪಾವಿತ್ರ್ಯತೆಯಲ್ಲಿ
ಗಂಧದ ಗೂಡಿನ ಅಂದದ ಹೆಣ್ಣಾಗಿ ಬಾ
ಸರ್ವ ಋತುಗಳಲ್ಲೂ ಮಮತೆಯ ಮಾತೆಯಾಗಿ ಬಾ
ಸ್ವಾಭಿಮಾನದ ನಾರಿಯಾಗಿ ಒಲವ ದೀಪವ ಹಚ್ಚು ಬಾ !!!❤❤❤-
ಬಯಕೆಯ ಬಡತನದಲ್ಲಿ ಸೋತ ನಗುವ ಶ್ರೀಮಂತ ಧಣಿ
ಸೊರಗಿದೆ ನಭದೆತರಕ್ಕೆ ಕೂಗುವ ಬಯಕೆಯ ಚೇತನದ ದನಿ
ಕುಸಿದು ಬಿದ್ದಿದೆ ಗರಿಬಿಚ್ಚಿ ಹಾರುವ ನಂಬಿದ ಹಕ್ಕಿಯ ಕನಸಿನ ಭವ್ಯ ಗಣಿ
ಕಾಲನ ನಿರೀಕ್ಷೆಯಲ್ಲಿ ಕಾಲದೂಡುತ್ತಿದೆ ವಿಶ್ವಾಸದ ಧಮನಿ !!!!!
-
ನಗುಮೊಗದ ಚೆಂದುಳ್ಳಿ ಚೆಲುವೆ
ನಲಿಯುತ್ತಿರು ಸದಾ ನನ್ನೊಲವೆ
ಸೋದರನ ಪಟ್ಟ ಕಟ್ಟಿದ ಈ ಸುದಿನ
ಚುಕ್ಕಿತಾರೆಯಾಗಿ ಸದಾ ವಿಜೃಭಿಸುತ್ತಿರಲಿ ನಿನ್ನ ಮನ
ಹೆತ್ತವರ ಕರುಳ ಬಳ್ಳಿಯ ಕೂಗು
ಎಷ್ಟೇ ವಸಂತಗಳುರುಳಿದರು ನೀ ಇನ್ನೂ ಮಗು
ನೆಮ್ಮದಿಯ ಜೋಕಾಲಿ ಜೀಕುತ್ತಿರಲಿ ಬದುಕಿನಲ್ಲಿ
ಸ್ನೇಹದ ನಿಸ್ವಾರ್ಥ ನೆನಪುಗಳು ಹಸಿರಾಗಿ ಕಂಗೊಳಿಸಲಿ ಮನದಲ್ಲಿ
ದ್ರೌಪದಿಯ ಛಲವಿರಲಿ
ಮಂಥರೆಯ ಹಠವಿರಲಿ
ರಾಧೆಯ ಪ್ರೀತಿಯಿರಲಿ
ರಾವಣನಾರಿಯ ಸಂಯಮ ನಿನಗಿರಲಿ
ಒಟ್ನಲ್ಲಿ ಸನಾತನ ಧರ್ಮದ ಸಂಸ್ಕೃತಿಯ ಕೂಸಾಗೂ
ಪ್ರೀತಿಸುವ ಮನಸ್ಸುಗಳ ನಾಡಿಮಿಡಿತದ ಸ್ವರಲಹರಿಯಾಗು !!!!!!
#ಹ್ಯಾಪಿ ಹುಟ್ದಬ್ಬಾ ಬಂಗಾರಿ 🎉❤
-Kiran (patli)
-
ಈ ಅಸುಳೆಗೆ ಬಂದೆರಗಿದೆ ಘನ ಘೋರ ರೋಗ
ಉಸಿರು ಬಿಗಿ ಹಿಡಿದು ಹೋರಾಡುತ್ತಿದೆ ಸಹಕರಿಸಿ ಬೇಗ
ಕ್ರೂರ ವಿಧಿಯ ಚೆಲ್ಲಾಟ
ಜಗ ನೋಡುವ ಮುನ್ನವೇ ನರಳಾಟ
ಕರುನಾಡಿನ ಮುಗ್ಧ ಮನಗಳೇ
ಈ ಪುಟ್ಟ ಜೀವಕ್ಕೆ ಆಯಸ್ಸಿನ ಶ್ರೀ ರಕ್ಷೆ ನೀಡೋಣ ಬನ್ನಿ
ಹೆತ್ತ ಜೀವಕ್ಕೂ, ನೊಂದ ಮನಕ್ಕೂ ಸಾಂತ್ವನದ ಸಹಾಯ ಹಸ್ತವ ಚಾಚೋಣಾ ಬನ್ನಿ 🙏🙏🙏
#ಕಂದನ ಉಳಿಸು ಕರ್ನಾಟಕ-
ಶೂನ್ಯ ಬದುಕಿನ ಅನುಯಾಯಿ
ಬವಣೆಯ ಜಂಜಾಟದ ಸಂಚಾರಿ
ಸೋತ ಜೀವನದ ರಾಯಭಾರಿ
ಶ್ವಾಸವ ಕೊಲ್ಲಲು ಕಾಯುತ್ತಿರುವ ಸಂಹಾರಿ
ಯಮನ ನಿರೀಕ್ಷೆಯಲ್ಲಿ ಕಾಲದೂಡುತ್ತಿರುವ ನಿಶಾಚಾರಿ !!!!!
-
ನಮ್ಮಿ ಸ್ನೇಹದ ಬಂಡಿಯ ಸಾರಥಿ
ಬದಲಾಯಿಸಿದೆಯ ಬದುಕಿನ ದಾರಿ !
ಅಗಣಿತ ಹೃದಯಗಳ ಪ್ರೀತಿಯ ಅಧ್ಯಕ್ಷ
ನಂಬಿದ ಮನಗಳ ಬಿಟ್ಟು ಸೇರಿದೆಯ ಯಮನ ಕಕ್ಷೆಯ !
ಅಶ್ವಮೇಧದ ಸ್ನೇಹಾನುರಾಗಿ
ವಿಶ್ವಾಸದ ಬಿಕ್ಷೆ ನೀಡಿದ ಸ್ನೇಹದಜೋಗಿ !
ಸಾವಿರಾರು ಗುಂಡಿಗೆಯ ನಂಬಿಕೆಯನ್ನು ಒಂದು ದಾರದ ಕುಣಿಕೆಯಲ್ಲಿ ಬಲಿಪಡೆದೆ
ಸಾಗರದಷ್ಟು ಹೆತ್ತವರ ಕನಸುಗಳನ್ನು ದುಡುಕಿ ಅರೆಕ್ಷಣದಲ್ಲಿ ಕೊಂದೆ !
ದುಷ್ಟ ಸಮಾಜದ ದುರುಳರ ಮಾತಿಗಂಜಿ ಉಸಿರು ಚೆಲ್ಲಿದೆ
ನಂಬಿದ ಜೀವಿಗಳ ನೋಯಿಸಿ ಪರಶಿವನ ಲೋಕಕ್ಕೆ ಹೋದೆ !
ಒಮ್ಮೆ ಬದುಕಿನ ಖುಷಿಯ ಪುಟವ ತಿರುವಬಾರದಿತ್ತೆ ಮನವೇ
ಹೆಮ್ಮರದಂತೆ ಹಬಿದ್ದ ನಿಷ್ಕಲ್ಮಶ ಪ್ರೀತಿಯ ನೆರಳಲ್ಲಿ ನೀ ನಲಿಯಬಾರದಿತ್ತೆ ಜೀವವೇ !!!!!...
miss you gani .....
-Kiran (patli)
-
ಸದಾ ನಗುವಿನ ಮೊಗದ
"ಗಣೇಶ"ನು ನೀನು !
ಎಲ್ಲರ ಹೃದಯದೊಳಗೆ
ನಂಬಿಕೆಯ ಗಣಿಯಾದವನು ನೀನು !
ಪ್ರೀತಿಯ ಮಳೆಸುರಿಸಿ
ವಿಶ್ವಾಸದ ಕಾಮನಬಿಲ್ಲನು ಮೂಡಿಸಿದವನು ನೀನು !
ಅಕ್ಕರೆಯ ಮಾತಲ್ಲಿ ಸಿಹಿ ಜೇನಿನ ಸ್ವಾದವ ಬೆರಸಿ
ಮಾನವೀಯತೆಯ ಮಡಿಲಲ್ಲಿ ಮೆರೆದ ಮುದ್ದು ಕೂಸು ನೀನು !
ಸ್ನೇಹಲೋಕದ ಅಪರಂಜಿ ಚಿನ್ನ
ಪ್ರತಿ ಹೃದಯದಲ್ಲೂ ಪ್ರೀತಿಯ ಸಾಮ್ರಾಜ್ಯ ಕಟ್ಟಿದ ದೊರೆ ನೀನು !
ಹೆತ್ತವರ ಒಡಲಲ್ಲಿ ಅಕ್ಕಂದಿರ ಎದೆಯಲ್ಲಿ ಬೆವರಿನ ಹೊಳೆ ಹರಸುತ್ತ ನಿಸ್ವಾರ್ಥ ಸ್ನೇಹದ ಧ್ವನಿಯಾದವನು ನೀನು !
ಕ್ರೂರ ವಿಧಿಯಾಟಕೆ ಬಲಿಯಾದೆಯಾ ಗುಲಗಂಜಿ ಮನವೇ ?
ನಮ್ಮೆಲ್ಲರ ಕಂಬನಿಯ ಸಾಗರದಲ್ಲಿ ನೀ ಹೇಗೆ ನಿದ್ರಿಸುತ್ತಿರುವೆ ಓ ಅಪರಂಜಿ ಜೀವವೇ ?
ಸಾವಿನ ಹಸಿವಿಗೆ ನೀ ಆಹಾರವಾಗಬಾರದಿತ್ತು
ಇದು ನಿನ್ನ ಸಾವಲ್ಲ ಹೊಸ ಹುಟ್ಟು ಗೆಳೆಯ !!
#ಮತ್ತೆ ನಮ್ಮಿ ಸ್ನೇಹಕುಲದಲ್ಲೆ ಹುಟ್ಟಿ ಬಾ ಗಣಿ 💜
- Kiran (patli)
-