ರವಿ ಕುಮಾರ ಎಸ್   (ರವಿ....)
47 Followers · 37 Following

read more
Joined 28 October 2019


read more
Joined 28 October 2019

ಇಂದಿನ ರೋಗ
ಮನುಷ್ಯನಿಗಷ್ಟೆ ಅಲ್ಲದೆ
ಮಾನವೀಯತೆಗು ಅಂಟಿದೆ ಗುರುವೆ;
ಸಂಭಂದಗಳ ಮುಖ ಕಳಚುತ್ತಿದೆ
ಅತ್ತಿರ‌ಸುಳಿಯದ ಬಂಧುಗಳು
ಹೆತ್ತವರಿಗೆ ಹೆಗಲಾಗದ ಮಕ್ಕಳು
ದೇಹಕ್ಕಂಟುವ ರೋಗಕ್ಕಿಂತ
ಒಳಗೊಳಗೆ ಒದ್ದೆಯಾಗುವ
ಕಣ್ಣೀರ ಹನಿಗಳ ತೂಕವೆ ಹೆಚ್ಚು...



-



ನನ್ನ ‌‌ಬಾಳ ಪಯಣದಲಿ
ಪ್ರಯಾಣಿಕನು ನಾನೆ ಪ್ರಾಮಾಣಿಕನು ನಾನೆ
ಪ್ರತಿಯೊಂದಕ್ಕು ಅಳಿವುಂಟಂತೆ ಇಲ್ಲಿ
ಅತಿಯಾದಾರೆ ಕಹಿವುಂಟಂತೆ ಇಲ್ಲಿ
ಕೊನೆ ಇರದ ನನ್ನ ನೋವಿಗೆ
ಸಿಗದೆ ಇರದ ಆ‌ ನೆಮ್ಮದಿಯ
ಊರಿಗೆ ನಾನ್ನೊಬ್ಬನೆ ಅರಸನಂತೆ..

-



ನಿನಗೆಂದೆ ಬರೆದ ಪ್ರೇಮದ
ಪುಟಗಳು ಅಳಿದು‌ ಮರೆಯಾಗಿವೆ

ನಿನ್ನ ನೆನೆವ ಮನಸ್ಸು
ಕನಸಿನ‌ ಹೊಲದೊಳಗೆ
ತೇವವಾಗುತ್ತಿದೆ

ಮಿತಿ ಇಲ್ಲದೆ‌‌ ಸುರಿಯುವ
ಮಳೆ ಹನಿಗಳಿಗಳಿಗೆ ಪ್ರೇಮದ
ಬೆಲೆ ಎಂದಿಗೂ‌‌ ತಿಳಿಯದು






-



ನನ್ನ ಬದುಕಿನ‌ ಕ್ಷಣಗಳ
ಪದಕ್ಕಿಳಿಸಿ ಪುಟಗಳಾಗಿಸೊ‌ ಗೀಳಿನಲಿ
ಒಂದೊಂದೆ‌‌ ಅಕ್ಷರವ ಬರೆಯುತ್ತಾ ಹೋದೆ
ಪುಟಗಳೆನೊ ಒಪ್ಪುತ್ತಿವೆ ಪದಗಳು ಯಾಕೊ
ಹಿಂದೆ‌ ಸರಿಯುತ್ತವೆ....

-



ಪ್ರೇಮವೆಂದರೆ
ಮರದಿಂದ‌ ಗಾಳಿಗೆದರಿ ಉದುರಿದ ಎಲೆಗಳು
ಮತ್ತೆ ಚಿಗುರೊಡೆದು‌ ಎಲೆಯಾಗುವ
ಆಸೆ ನಂಬಿಕೆ ಇದೆಯಲ್ಲ ಅದುವೆ
ನೈಜ ಪ್ರೇಮ...





-



ಬದುಕಿನ ತಿರುವುಗಳ ಮೇಲತ್ತಿ
ಧರೆಯೂರಿ‌ ಗಾಯಗೊಂಡ‌
ಮಂಡಿಗಳಿಗೆ ಔಷಧಿ‌‌ ಹಚ್ಚಿ‌
ಬೆವರಿಳಿದ‌ ದೇಹಕ್ಕೆ ವಿಶ್ರಾಂತಿ
ಪಡೆವ ಘಳಿಗೆಗೆ
ಸಿಡಿಲು ಮತ್ತೆ ಅಪ್ಪಳಿಸುತ್ತಿದೆ
ಆದರೂ ಕಾಯುವೆ
ಮುಂದಿನ ಆ ನನ್ನ ದಿನಕ್ಕೆ...



-



ಬೆಳೆಗಳೆಂಬ ಬೀಜವ ಭೂಗರ್ಭದೊಳಾಯಿಸಿ
ಬೆವರ ಅನಿಗಳ‌ ತೊಟ್ಟಿಕ್ಕಿಸಿ‌
ದಣಿವನ್ನು ಮರೆತು ಬಿಸಿಲಲ್ಲೆ ಬೆರತು
ಮಳೆಯ ಓಲೈಕೆಯ ಕಾಯುತ್ತ
ಇಳೆಯೆ ಸ್ವರ್ಗವೆನ್ನುತ್ತ
ಸಾಗುತಿಹನು ಹೊಲದೊಳು ಅವನೆ ರೈತ‌

-




ಪ್ರೇಯಸಿಯ ಪ್ರೇಮದ ಬಳ್ಳಿಯು
ಕತ್ತರಿಸಿಹೋದರು
ಒಮ್ಮೆ ಮತ್ತೊಮ್ಮೆ
ಹಬ್ಬುವುದು ಕಷ್ಟವೇನಲ್ಲ‌ ಗುರುವೇ
ಕರುಳಿನ ಬಳ್ಳಿ ಎಂಬುದು
ಒಮ್ಮೆ ಕತ್ತರಿಸಿ ಹೋದರು
ಹಬ್ಬುವುದಿದೆಯಲ್ಲ‌‌
ಅದರಲ್ಲಿದೆ ಸಾರ್ಥಕ‌
ಜೀವನ...

-



ಮನ ಮನೆಯ ಬೆಳಕು
ಭೂ‌‌ ಸ್ವರ್ಗಕ್ಕೆ ಹೊಳಪು‌‌
ಧಣಿದವರಿಗೆ ಕಾವೇರಿ
ಸಹನೆಯಲ್ಲಿ ನೀ‌ ಸಿರಿ

ಜಗಕೆ ‌ನೀ‌ ಉಪಕಾರಿ‌
ಕರುಣೆಯಲ್ಲಿ ನಿನಗಾರು ಸರಿ‌
ಆರಂಭಕ್ಕು ಅಂತ್ಯಕ್ಕೂ
ನಿನ್ನದೆ ಮುನ್ನುಡಿ

ಹೆಣ್ಣಾಗಿ ಕಣ್ಣಾಗಿ
ಬದುಕಿಗೆ ಜೊತೆಗೂಡಿ
ಬರವಣಿಗೆಯ ಮೊದಲಕ್ಷರ ನೀ
ಬರಗಾಲದಲ್ಲೂ ಬೆಳೆಯಾಗುವವಳು
ನೀ

-



ಒಡೆದ ಮನಸಿನ‌ ಚೂರುಗಳನ್ನೆಲ್ಲ
ಒಂದೊಂದಾಗೆ ಜೊಡಿಸಿ
ಒಂದರೊಳಗೊಂದು ಕೂಡಿಸಿ
ಮತ್ತೊಮ್ಮೆ ಅದರ ಸ್ಥಾನಕ್ಕೆ
ಕೊಂಡೊಯ್ದು ಕೂರಿಸುತ್ತಿರುವೆ
ಇಂದಾದರು ನನ್ನ ಮಾತನ್ನು
ಕೇಳಲೆಂದು ಇಂತಹ ಪರಿಸ್ಥಿತಿ
ಇನ್ನೆಂದು ಕಾಡಲೆಂದು

-


Fetching ರವಿ ಕುಮಾರ ಎಸ್ Quotes