SUVARANA YOGI   (Chethana Muniswamygowda)
110 Followers · 3 Following

💐 for good Society🙏.
*Humanity is Religion and knowledge is caste*
Joined 16 February 2020


💐 for good Society🙏.
*Humanity is Religion and knowledge is caste*
Joined 16 February 2020
20 APR AT 9:03

*Yogi 🪷 Chetana*
An empty pocket is better than an empty head and an empty heart.*

*An empty pocket is not dangerous to anyone, but an empty head and an empty heart are dangerous to oneself and society.*
*Become wise🙏

-


19 APR AT 22:16

*ಯೋಗಿ 🪷 ಚೇತನಾ*

ನಾನು ಎಂದರೆ ವಾದ ...
ನಾವು ಎಂದರೆ ಚರ್ಚೆ ...
ಚರ್ಚೆಯಿಂದಲೇ ಸಮಸ್ಯೆಗೆ ಪರಿಹಾರ ... .
"ತಿಳಿದು ಬದುಕು ತುಳಿದು ಬದುಕಬೇಡ" 🌲

-


13 APR AT 8:42

     🕉️ *ಯೋಗಿಚೇತನಾ* 🏵️ 

   " *ಎಲ್ಲರಿಗೂ ಬೇಕಾಗುವ " ಹಣ್ಣು" ಕೈ , ಬಾಯಿ ಸೇರುತ್ತದೆ. ಯಾರಿಗೂ ಬೇಡವಾದ ಬೀಜ, ಭೂಮಿ ಸೇರುತ್ತದೆ. 

       ಬೇಡವಾದ ಬೀಜದೊಳಗೆ ಸಾವಿರಾರು ಹಣ್ಣುಗಳು ಬಿಡುವ ಕಾಲ ಬಾರದೇ ಇರದು. ತಿರಸ್ಕಾರ ಗೊಂಡವರೇ ಮುಂದೊಮ್ಮೆ ಪುರಸ್ಕರಿಸುವಂಥ ಕಾಲ ಬಂದೇ ಬರುತ್ತದೆ.

ಆ ಕಾಲ ಬರುವವರಿಗೆ ಕಾಯಲೇ ಬೇಕು. ಇದೇ ಸಾಧನೆಯ ಬದುಕು.

-


11 APR AT 6:35


ಸೊಸೆ ದೇವತೆ ತರಹ ಇರಬೇಕು?


*ಪ್ರತಿಯೊಬ್ಬರು ಮನೆಗೆ ಬರುವ ಸೊಸೆ ದೇವತೆ ತರಹ ಇರಬೇಕು ಅಂತ ಬಯಸುತ್ತಾರೆ.
ಬಯಸುವುದು ಖಂಡಿತ ತಪ್ಪಲ್ಲ.*

*ಆದರೆ ಮೊದಲು ಅವಳಿಗೋಸ್ಕರ ನಿಮ್ಮ ಮನೆ ಮತ್ತು ಮನಸ್ಸನ್ನು ಸ್ವರ್ಗದ ತರಹ ಇಟ್ಟುಕೊಳ್ಳಬೇಕು.

ಏಕೆಂದರೆ ದೇವತೆ ಸ್ವರ್ಗದಲ್ಲಿ💃🏼 ವಾಸಮಾಡುತ್ತಾಳೆ ವಿನಃ ನರಕದಲ್ಲಿ ಅಲ್ಲ.*

-


25 MAR AT 14:56

ಗಂಡನ ಮೇಲಿರುವ ಪ್ರೀತಿಗೆ ಹೆಂಡತಿ ಕೋಪಗೊಳ್ಳುತ್ತಾಳೆ. ಮತ್ತು ಗಂಡನನ್ನು ಬಿಟ್ಟು ಬೇರೆ ಯಾರ ಮೇಲೂ ಕೋಪಗೊಳ್ಳದ ಜೀವಿ ಎಂದರೆ ಅದು ಹೆಂಡತಿ.*


*ಹೆಂಡತಿ ಕೋಪಗೊಂಡಾಗ ಗಂಡ ತುಂಬಾ ತಾಳ್ಮೆಯಿಂದ ಇದ್ದರೆ, ತನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಾನೆ ಅಂತಾ ಅರ್ಥ.

-


1 FEB 2022 AT 9:53

*ಹರಿ ಸ್ಮರಣೆ ಮಾಡುವರು ನರರಲ್ಲವೋ* |ಪ.|ಶರೀರವು ಎಲ್ಲರಂತಲ್ಲವರದು* ||ಅ.ಪ.||

*ಮುರಹರಿಗೆರಗುವ ಶಿರ ದ್ವಾರಕಾಪುರವು* | ಚರಿತೆ ಕೇಳುವ ಕರ್ಣ*ಗೋಕರ್ಣವೋ* ||

*ಬರಿದು ಹೊಗಳುವ ಜಿಹ್ವೆ ನಿಜಕ್ಷೀರ ಸಾಗರವು*ಚರಣ ಪೂಜಿಸುವ ಕರಗಳೇ ರಾಮೇಶ್ವರ*||1||

*ವಿಷ್ಣು ನಿರ್ಮಾಲ್ಯಾಘ್ರಾಣಿಸುವ ನಾಸಿಕ ಕಂಚಿ* |ಕೃಷ್ಣನ ನೋಡುವ ದೃಷ್ಟಿ ಶ್ರೀಮುಷ್ಣವು* |

*ವಿಠಲಗರ್ಪಿತವೆಂಬ ಉದರವೇ ಬದರಿ* |
*ಘಟ್ಯಾಗಿ ಇರುತಿಪ್ಪ ಹೃದಯವೇ ವೈಕುಂಠ* ||2||

*ವರ ಜಂಘೆ ಪದ ಗಂಗೆ ತುಂಗೆ ಎನಿಸುವವು*ಸರ್ವಾಂಗ ಅನಂತಾಸನ ಶ್ವೇತದ್ವೀಪ*
|
*ಬರಿಯಮಾತಲ್ಲವಿದು ಶೃತಿ ಪುರಾಣಗಳುಕ್ತಿ|*ಪುರಂದರ ವಿಠಲನು ಅವರ ವಶದೊಳಿರುತಿಹನು*
||3||— % &

-


1 FEB 2022 AT 9:48

-- ಮಹಾಭಾರತ, ಉದ್ಯೋಗಪರ್ವ--

*ರೋಹತೇ ಸಾಯಕೈರ್ವಿದ್ಧಂ ವನಂ ಪರಶುನಾ ಹತಂ |*
*ವಾಚಾ ದುರುಕ್ತಂ ಭಿಭತ್ಸಂ ನ ಸಂಹೋರತಿ ವಾಕ್ ಕ್ಷತಮ್ ||*

ಬಾಣಗಳಿಂದಾದ ಗಾಯ ಗುಣಹೊಂದುತ್ತದೆ. ಕೊಡಲಿಯಿಂದ ಕಡಿದ ವನವು ಚಿಗುರುತ್ತದೆ. ಆದರೆ ಕೆಟ್ಟ ಮಾತಿನಿಂದಾದ ಗಾಯ ತೀವ್ರವಾದದ್ದು. ಅದು ಗುಣ ಹೊಂದುವದಿಲ್ಲ.
— % &

-


29 JAN 2022 AT 17:22


-- ಸುಭಾಷಿತ ರತ್ನಭಾಂಡಾಗಾರ--
ಲಕ್ಷ್ಮೀರ್ವಸತಿ ಜಿಹ್ವಾಗ್ರೇ ಜಿಹ್ವಾಗ್ರೇ ಮಿತ್ರಬಾಂಧವಾಃ |*
ಜಿಹ್ವಾಗ್ರೇ ಬಂಧನಂ ಪ್ರಾಪ್ತಂ ಜಿಹ್ವಾಗ್ರೇ ಮರಣಂ ದ್ರುವಂ|*

ನಾಲಗೆಯ ತುದಿಯಲ್ಲಿ ಲಕ್ಷ್ಮೀ ನೆಲಸಿದ್ದಾಳೆ ; ಮಿತ್ರರೂ ಬಾಂಧವರೂ ನಾಲಗೆಯ ತುದಿಯಲ್ಲಿಯೇ ; ಬಂಧನವೂ ಅದರಿಂದಲೇ ; ನಿಜವಾಗಿ ಮರಣವೂ ಅದರದಲೇ.
— % &

-


28 JAN 2022 AT 17:23

*ಕತ್ತೆ ಕುದುರೆ ಯಾಗಿ ಹರಿಗೆ ಶರಣೆನಲುಂಟೆ*|
*ಹಂದಿ ನಾಯಿಯಾಗಿ ಹರಿಗೆ ಶರಣೆನಲು ಉಂಟೆ*|
*ಕ್ರಿಮಿ ಕೀಟವಾಗಿ ಹರಿಗೆ ಶರಣೆನಲು ಉಂಟೆ*|
*ಮರೆತೆಯಾ ಮಾನವ ಹಿಂದಿನನುಭವಗಳನು*|
*ನಿನಗೆ ಮಾನುಷ ಜನ್ಮ ವು ಬರಲಾಗಿ*|
*ಪುರಂದರ ವಿಠ್ಠಲನ್ನ ನೆನಿ ಕಂಡ್ಯ*|
*ಎರಗು ಕಂಡ್ಯ*||.— % &

-


28 JAN 2022 AT 11:17

ಬಹುತೇಕ ಜನರು ದೇವರನ್ನು
ಕಲ್ಲಿನಲ್ಲಿಟ್ಟು ಪೂಜಿಸಿದರು ,
ಹಲವರು ಬೆಳ್ಳಿಯಲ್ಲಿಟ್ಟು
ಪೂಜಿಸಿದರು, ಇನ್ನು ಕೆಲವರು
ಚಿನ್ನದಲ್ಲಿಟ್ಟು ಪೂಜಿಸಿದರೂ
ದೇವರು ಒಲಿಯುವುದಿಲ್ಲ ,
ಆದರೆ ದೇವರು ಒಲಿಯುವುದು
ಮನಸ್ಸಿನಲ್ಲಿಟ್ಟು ಪೂಜಿಸಿದಾಗ ಮಾತ್ರ.

-


Fetching SUVARANA YOGI Quotes