ಆಗಸವ ಕೈಯಲ್ಲಿ ಹಿಡಿಯುವ ಹಂಬಲ
ನೀನಾದೆ ನನಗೆ ಬೆಂಬಲ
ಅದ್ವಿತೀಯ ಅಪ್ಪಟ ಬಂಗಾರ
ನನ್ನೇಲ್ಲ ಇಚ್ಚೆಗಳ ಈಡೇರಿಸುವ ಸಾಹುಕಾರ
ಸಾಗರದಿ ಹೊಳೆಯುವ ಮುತ್ತು
ನೀ ನೀಡಿದ ಬೆಳದಿಂಗಳ ಕೈತುತ್ತು
ಬದುಕಿಗೆ ಆಸರೆ ನೀ
ನನ್ನ ಪ್ರೀತಿಯ ಅಗಣ್ಯ ಸಂಪತ್ತು
ಹಸಿಮುನಿಸಿನ ತುಸು ಕೋಪಕೆ
ನೀನಾದೆ ಪ್ರೀತಿಯ ಲಸಿಕೆ
ಗದರು ಮೀಸೆಯ ಹೃದಯವಂತಿಕೆಯ ತಾಯಿ
ನನ್ನೊಳಗೆ ನಿನ್ನ ಪ್ರೀತಿಯ ಸಾಲೇ....
ಅಕ್ಕರೆಯ ಅಗಣಿತ ಸಾಲು
ಪೋಣಿಸಿದರು ಸಾಲದು
ಪದಗಳಿಲ್ಲ ಶಬ್ದಕೋಶದಿ
ನಿನ್ನ ವರ್ಣಿಸಲು ಅಪ್ಪ .....
✍Thilaka kulal
-
15 JUN 2021 AT 21:12
30 APR 2020 AT 13:11
"ಮನಸ್ಸಿನ ಮಾಮರದಲ್ಲಿ ಮನೆಮಾಡಿದ
ಮನ್ಮಥನ ಮಗಳು"
"ಸದಾ ಸಿಟ್ಟಿನಿಂದಿರುವ
ಶ್ರೀದೇವಿಯಂತವಳು"
"ವಾರೆಗಣ್ಣ ಬೀರಿ
ನನ್ನ ನೋಡಿ ನಕ್ಕವಳು...🥰-
27 SEP 2020 AT 19:47
ಅದಲು ಬದಲು ಕಂಚಿ ಕದಲು!
ನಮ್ಮನೇಲಿ ಆಗಾಗ ವಿಚಿತ್ರಗಳು ನಡೆಯುತ್ತದೆ. ಇಟ್ಟ ವಸ್ತು ಇದ್ದಂತೆ ಇರಲ್ಲ, ಮತ್ತೆಲ್ಲೋ ಸಿಗುತ್ತದೆ. ಕೆಲವೊಮ್ಮೆ ಮಂಗಮಾಯ, ಅರ್ಥವಾಗುತ್ತಿಲ್ಲ!
(SUSPENSE THRILLER REAL STORY)
Caption ಓದಿರಿ!-
17 APR 2021 AT 8:29
|ಮಗಳು|
ತಂದೆ ತಾಯಿಗೆ ಖುಷಿ,
ಆಡುವ ಮಗಳ
ಕಂಡರೆ.
ಕಸಿವಿಸಿ ಅವಳು
ನಿಯಮಗಳ..
ಕೊಂದರೆ.
-
10 OCT 2018 AT 10:12
ಮಗಳಿಲ್ಲವೆಂಬ ಕೊರತೆ ನನಗಿಲ್ಲ.
ತಾಯಿ ಆದರೂ ಮಗಳಂತೆ ಬರುವಳವಳು ,
ಒಮ್ಮೆ ವರಮಹಾಲಕ್ಷ್ಮೀಯಾಗಿ
ಇನ್ನೊಮ್ಮೆ ಪುಟ್ಟ ಗೌರಿಯಾಗಿ
ಮತ್ತೊಮ್ಮೆ ನವದುರ್ಗಿಯಾಗಿ
ಇವರಿಗೆ ಸೀರೆ ಉಡಿಸಿ ಅಲಂಕರಿಸುವಲ್ಲಿ
ನಾನು ಧನ್ಯೆ ಪರಿಪೂರ್ಣವಾಗಿ .
-
1 OCT 2019 AT 11:27
ಯಾವಾಗ ಒಬ್ಬ ತಂದೆ, ತನ್ನ ಮಗಳಲ್ಲಿ
ತನ್ನ ತಾಯಿಯನ್ನು ಕಾಣುತ್ತಾನೊ,
ಅಂದಿಗೆ ಆ ಮಗಳ ಜೀವನ ಸಾರ್ಥಕ.-