ಇದೂಂದು ಮಾಯಾನಗರಿ
ಆಸೆಗಳು ಪುಟಿದೇಳೂ ಗರಿಗರಿ
ಕಣ್ಣೆದುರೇ ತಿರುಗುವ ಬಣ್ಣದ ಬಿಂಗರಿ!
ಬೆಂಗಳೂರಿನ ಮಾಯಾಜಾಲ,
ಕರಗತ ಮಾಡಿಕೊಂಡವನ ಜೀವಜಾಲ.
ಕನಸುಗಳಿಗೆ ಬೆಚ್ಚಗಿನ ಕಾವು,
ನನಸಾಗಲೆನ್ನುವ ನೀವು.
ಮೆಜೆಸ್ಟಿಕ್ ನಿರ್ಲಿಪ್ತ ಜನರ ನಡುವೆ
ಸಾಗರವಾಗಿ ಹರಿದು ಬರುವ
ಶಬ್ದಮಾಲಿನ್ಯ, ವಾಯುಮಾಲಿನ್ಯ,
ಹೃದಯಮಾಲಿನ್ಯ......
ಮುಗಿಲು ಚುಂಬಿಸುವ ಕಾಂಕ್ರಿಟ್
ಡಬ್ಬಗಳು,ನೆಲಗಂಟಿಯೇ ಮಲಗಿರುವ ಜೋಪಡಿಗಳು...
ಸಿಲಿಕಾನ್ ಸಿಟಿಯೊಳಗೆ ವಿಜೃಂಭಿಸಿದೆ ಹಸಿವು, ಕನವರಿಕೆಗಳು.
ಒಂದಾನೊಂದು ಕಾಲದ
ಜೀವನದಿ ವೃಷಭಾವತಿ
ಗುಟುಕು ನೀರಿಗಾಗಿ ಕೂಳಕು
ಹಸಿಮೈಯೂಳು ಗದಗುಟ್ಟುತ್ತಿದ್ದಾಳೆ.
ತಾಯಿ ಭುವನೇಶ್ವರಿಗೆ
ವರುಶವಿಡಿ ಕಲಬೆರಕೆ ಅಭ್ಯಂಜನ,
ನವೆಂಬರ್ ತಿಂಗಳ ಭರ್ಜರಿ ಭೋಜನ!
ಮಿಶ್ರ ಸಂಸ್ಕತಿಯ ಮೇಲೂಗರ.,
ಎಲ್ಲಿ ಸಿಕ್ಕಿತು ಹೇಳಿ ನಿಮಗೆ ಏಕತೆಯ ಹಾರ!-
ಬೆಂಗಳೂರಿನ ಚಿತಾಗಾರದ ರಸ್ತೆಯಲ್ಲೀಗ
ಅನಿರ್ದಿಷ್ಠಿತ ಟ್ರಾಫಿಕ್ ಜ್ಯಾಮ್!
(Caption ಓದಿ)-
ಹುಚ್ಚಂಗಿ ಏಕನಾಥೇಶ್ವರಿಯ ನಾಡಿದು
ಮದಕರಿ ನಾಯಕರಾಳಿದ ಬೀಡಿದು
ವೀರ ವನಿತೆ ಓಬವ್ವಳ ನೆಲೆವೀಡಿದು
ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆಯಿರುವ
ಸಂಪಿಗೆ ಸಿದ್ದೇಶ್ವರನ ಕೋಟೆನಾಡು
ಚಿತ್ರದುರ್ಗವಿದು-
ನಿಜವಾದ ಮ್ಯಾರಥಾನ ರೇಸ್ ಎಂದರೆ ಬೆಂಗಳೂರಿನ ಟ್ರಾಫಿಕ್ ನಲ್ಲಿ ನಿಲ್ಲಲಾರದೆ ಬಿಟ್ಟು ಬಿಡದೆ ಓಡುವುದು.
A true marrathon race is a non-stop race in Bangalore traffic.
"ದೈನಂದಿನ ನಿಜವಾದ ಜೀವನ ಅನುಭವ"
"True Life Experience in Everyday"
-
ಬೆಂಗಳೂರು ನಿನಗೆ ಶರಣು...
ಈ ಜೀವದ ಮೇಲಿರುವ ಆಸೆಗೊ ಅಥವಾ
ಸದ್ಯದ ಪರಿಸ್ಥಿತಿಗೊ ನಿನ್ನನ್ನು ತೊರೆದು
ನಮ್ಮ ಜನ್ಮಸ್ಥಳದ ಕಡೆಗೆ ಪಯಣಿಸಿದ್ದೇವೆ...
ಆದರೂ ಸದಾ ನಿನ್ನ ನೆನಪಲ್ಲಿ ನಾವುಗಳು...
ನಮ್ಮ ಜೀವನಕ್ಕೆ ಆಸರೆಯಾಗಿದ್ದ
ಬೆಂಗಳೂರಿಗೆ ನನ್ನ ಎರಡು ಸಾಲುಗಳು...
ಕೆಳಗಿರುವ ಶೀರ್ಷಿಕೆಯಲ್ಲಿ ಓದಿ...-
ಮಹಡಿ ಮೇಲೆ ನಿಂತಿದ್ದೆ,
ಯಾವುದೋ ಯೋಚನೆಯಲಿ ಕಳೆದೋಗಿದ್ದೆ,
ಹೇಗನಿಸಿತು ಬೆಂಗಳೂರು?!
ಹೀಗೇ, ಕೇಳುತ್ತಾ ಅಲ್ಲೊಬ್ಬರು ಬಂದು ನಿಂತರು.
ಅಯ್ಯೋ ಟ್ರಾಫಿಕ್ಕು, ಎನ್ನುವಷ್ಟರಲ್ಲೆ ನಕ್ಕರು.
ಈ ಊರೆ ಹೀಗೇ, ಎಲ್ಲರಿಗೂ ಅನಿವಾರ್ಯ,
ಆದರೆ ಯಾರಿಗೂ ಹಿಡಿಸದು ಎಂದರು.
ಹೊಸ ಜಾಗ, ಹೊಸ ಜೀವನ ಶೈಲಿ, ಹೊಸದಾಗಿದೆ, ಇಷ್ಟವಾಗುತ್ತಿದೆ ಎಂದೆ,
ಆಶ್ಚರ್ಯದಿಂದ ನನ್ನೊಮ್ಮೆ ನೋಡಿದರು.
ಹೊಸತರಲಿ ಎಲ್ಲವೂ ಚಂದವೇ, ಎಂದರು, ಸುಮ್ಮನಾದರು.
ಅವರ ಜಿಜ್ಞಾಸೆಯ ಕಂಡ ನಾನು,
ಕೆದಕಲಿಲ್ಲ ಹೆಚ್ಚೇನು.
ಹಳಸೀತು ಈ ಖುಷಿಯು ಕೆಲ ದಿನಗಳಲ್ಲೆ,
ಎನ್ನುತ್ತಾ ಹೊರಟು ಹೋದರು.
ಆಗಸವ ನಾನೊಮ್ಮೆ ನೋಡಿದೆ ಸುಮ್ಮನೆ,
ಅದೇ ನಮ್ಮೂರ ಚಂದಿರ, ಬದಲಾಗಿರಲಿಲ್ಲ.
ಅಷ್ಟೆತ್ತರದ ಮಹಡಿಯ ಮೇಲೂ ವಾಹನಗಳ ಸದ್ದು ಕೇಳುವುದು ನಿಂತಿರಲಿಲ್ಲ,
ನಿಶಃಬ್ದವೆಂಬ ಪದಕ್ಕೆ, ಇಲ್ಲಿ ಅರ್ಥವೇ ಇರಲಿಲ್ಲ.
ಹಾಡೊಂದು ಹಾಕಿದೆ, ಒಬ್ಬಂಟಿ ಎನಿಸಲಿಲ್ಲ.
ಮತ್ತೊಮ್ಮೆ ಅದೇ ಪ್ರಶ್ನೆ, ನನ್ನನ್ನು ನಾನೇ ಪ್ರಶ್ನಿಸಿಕೊಂಡೆ,
ಹೇಗನಿಸಿತು ಬೆಂಗಳೂರು?!
ಹಾಳಾದ ಟ್ರಾಫಿಕ್ಕು, ಅನಿಶ್ಚತ ವಾತಾವರಣ,
ಭಾವನೆಗಳೇ ಇರದ ಜನರು ಎಂಬ ಅಪವಾದದ ನಡುವೆಯೂ,
ಬೆಂಗಳೂರು ಬ್ಯುಟಿಫುಲ್ಲು,
ಹಲವಾರು ಕನಸಿಗೆ ಜೀವ ತುಂಬಿರುವ ತವರು,
ನಾನಂತು ಹಕ್ಕಿಯಾಗಿಹೆನಿಲ್ಲಿ ರಕ್ಕೆ ಇರದೆ ಹೋದರು.-
ಇಂದು ಬಾನ ತುಂಬಾ
ಲೋಹದ ಹಕ್ಕಿಗಳ ಹಾರಾಟ..!
ನೋಡುಗರ ಮನಸೆಳೆದ
ಆಧುನಿಕ ಮೀನಿನ ಓಟ..!
ಇತಿಹಾಸ ಸೃಷ್ಟಿಸಲು
ಬೆಂಗಳೂರಲ್ಲಿ ನಡೆದ
"AERO INDIA" ನೋಟ..!
-
ಕಪ್ಪು ಮಣ್ಣಿನ ಊರಗ
ಹಸಿರು ಮರದಾಗ
ಕೈ ಚಾಚಿ ಗುಲಾಬಿ
ಕೋಡತಾನ
ಗುಲ್ಬರ್ಗ ..-