ಉಸಿರ ತುಣುಕಲಿ
ನಿನ್ನ ಮೆಲುಕು
ವೈಯಾರದ ಮಾತಲಿ
ಪ್ರೇಮಿಯಾಗಿ ಸೋತು
ಅಪರಿಚಿತನಂತೆ ಪರಿಚಿತವು
ಹೃದಯಾಳದ ತರಂಗವು
ಗಮನಿಸೆಯಾ ಎನ್ನ
ಭಾವಮೃದಂಗದ ಹೃದಯವನ್ನ.
ಕಾಯುವೆ ನಿನಗಾಗಿ
ನೀ ಮೆಚ್ಚಿದ ರಾಗವಾಗಿ...
ಮೀಟುವ ಭಾವಗಳ ಮಧ್ಯದಿ
ಆಡಿಸೋ ಪ್ರೇಮದ ರಾಗದಿ...-
👻 ಅಗೋಚರ ಸಂಚಾರಿ ☠️
(✍️🅚🅟🅢.)
563 Followers · 165 Following
✍️: ಪಂಚಮಿ ಶೆಟ್ಟಿಗಾರ್(kps)
Joined 26 October 2020
7 NOV 2024 AT 22:07
28 APR 2023 AT 21:12
ಬದಲಾದ ಯುಗದ ಮಾನವನ ಮಾನವೀಯತೆಗೆ ಕರೆಮಾಡಿದೆ...
ತಕ್ಷಣವೇ ನಂಬರ್ ಬ್ಲಾಕ್ ಆಗಿತ್ತು!!-
25 APR 2023 AT 20:55
खुद से प्यार करना सीखो
लोग तो तुझसे नफरत करते ही है।
चलो तुम सच्चे रास्ते पर
लोग तो झूठी जीभ आजमाते रहते हैं।
-
25 APR 2023 AT 19:56
ಮನವೇಕೋ ಜಿಗಿಯುತಿದೆ ಜಿಂಕೆಯಂತೆ!
ಪ್ರೇಮದ ಪರಿಮಳವಿಲ್ಲದೆ;
ಗೆಳೆತನದ ಅನುಬಂಧವಿಲ್ಲದೆ,
ಕಹಿಯಾಗೇ ಹೋರಾಡಿ ಜಯಿಸಿಹೆನು
ಸ್ನೇಹ ಪರದೆ ಹೊತ್ತವರ ನಾಲಿಗೆಯಲ್ಲಿ!
-
2 APR 2023 AT 18:27
ಎಲ್ಲರೊಡನೆ ಬೆರೆತರೂ.
ಒಬ್ಬಂಟಿಯಾಗಿರುವೆ ನನ್ನೊಡನೆಯೂ..
ಶಾಪವೆಂದರಿಯದಿರು ಮನವೇ
ಇದು ನಿನಗೆ ವರದಾನವು
ಆ ಶಿವನಿರುವಾಗ!
-
31 DEC 2022 AT 19:51
ಹಾಯ್.. ಹಲೋ...ನಮಸ್ಕಾರ😁🙏
.
.
.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು(1/1/23)🍻🎉❤️
.
.
.
ಆರೋಗ್ಯ ಮತ್ತು ನೆಮ್ಮದಿಯ ಬಾಳು ನಿಮ್ಮದಾಗಲಿ.. ಒಟ್ನಲ್ಲಿ ನಗ್ ನಗ್ತಾ ಹ್ಯಾಪಿಯಾಗಿರಿ.
-
20 NOV 2022 AT 12:10
ಅಲೆಗಳಂತೆ ಬಂದು ಹೃದಯಕ್ಕೆ ಅಪ್ಪಳಿಸಿತು
ಕ್ಷಣಕಾಲ ತುಟಿಯಂಚಲಿ ನಗು ಬರಿಸಿ ಮತ್ತೆ ದೂರ ಸರಿಯಿತು.-