Prakash Mayannavar   (ಛವಿ (ಪ್ರಕಾಶ))
599 Followers · 171 Following

read more
Joined 30 April 2018


read more
Joined 30 April 2018
6 APR 2022 AT 15:01

ಸಖಿ,
ಕಡು ಸೆಕೆಯಲಿ
ಸುಳಿದು ನಲಿಸೋ
ತಂಗಾಳಿ ನಿನ್ನುಸಿರು

-


18 MAR 2022 AT 18:58

ಸದರದಿ ಅಧರದ ಬಣ್ಣವ
ಮೊಗದ ತುಂಬ ಹರಡಿದಳು,
ಹೋಳಿಯ ಹಬ್ಬವೆಂದು
ತುಂಟತನದಿ ನೆನಪಿಸಿದಳು.

-


1 MAR 2022 AT 10:07

ಕನಸಲ್ಲ ನನಸಲ್ಲ
ಕನಸು ನನಸು ಮೀರಿದ ಭಾವ
ನನ್ನೊಳಿಲ್ಲ ನಿನ್ನೊಳಿಲ್ಲ
ನನ್ನ ನಿನ್ನ ಮೀರಿದ ಅನುಭಾವ

ಸತ್ಯವಲ್ಲ ಮಿಥ್ಯವಲ್ಲ
ಯಾವ ನಾಮ ಇವನಿಗಿಲ್ಲ
ಪುಣ್ಯವಲ್ಲ ಪಾಪವಲ್ಲ
ಯಾವ ಹಂಗೂ ಇಲ್ಲವಲ್ಲ

ಇಹದಲಿಲ್ಲ ಪರದಲಿಲ್ಲ
ಎಲ್ಲವೂ ಹೌದು, ಏನೂ ಅಲ್ಲ
ಆಕಾರವಿಲ್ಲ, ಗುಣಭೇದವಿಲ್ಲ
ಚರಾಚರಗಳ ತೇಜವಷ್ಟೇ ಮತ್ತೆನಿಲ್ಲ

ರವಿಯಲ್ಲ, ಭುವಿಯಲ್ಲ
ಛವಿಯಲ್ಲ, ಕವಿಯ ಸವಿಭಾವವಲ್ಲ
ಬೆಳಗಿದಲ್ಲ, ಕತ್ತಲೂ ಅಲ್ಲ
ಅನಾದಿ, ಅನಂತನೀತ ಬೇರೆನೂ ಇಲ್ಲ...!

-


3 MAY 2020 AT 21:16

ನಿಸಾರರು ಇನ್ನಿಲ್ಲ,
ಎಂಬುದು ನಿಜವಲ್ಲ..!

ಸಂಜೆ ಐದರ ಮಳೆ
ಇನ್ನೂ ನಿಂತಿಲ್ಲ
ಗಾಂಧಿಬಜಾರು ಇನ್ನೂ
ಮೌನವಾಗಿಲ್ಲ
ನಿಸಾರರು ಇನ್ನಿಲ್ಲ
ಎಂಬುದು ತರವಲ್ಲ..

ಜೋಗದ ಸಿರಿಯ
ಬೆಳಕಿನ್ನೂ ನಂದಿಲ್ಲ
ಬೆಣ್ಣೆ ಕದ್ದ ನಮ್ಮ ಕೃಷ್ಣ
ನಮಗಿನ್ನೂ ಸಿಕ್ಕಿಲ್ಲ
ನಿಸಾರರು ಇನ್ನಿಲ್ಲ
ಇದೇನು ಸತ್ಯವಲ್ಲ..

ಕಾವ್ಯ ನೆಲೆಸಿಹ ನನ್ನ
ಎದೆಯಲಿನ್ನೂ ಬೆಳಕಿದೆ
ಅಕ್ಷರದ ಅಮರದೀಪ
ಅನಂತವಾಗಿ ಬೆಳಗುತಿದೆ
ನಿಸಾರರು ಇನ್ನಿಲ್ಲ
ಎಂಬುದು ಸತ್ಯವಲ್ಲ..
ಇದೆಂದೂ ನಿಜವಲ್ಲ..

-


28 MAY 2019 AT 0:09

ಹುಡುಗಿ,
ನಿನ್ನ ಕಂಡಕ್ಷಣ
ಮದವೇರಿ
ಮಧುಹೀರಿ
ಮುದ್ದಿಸುವಾಸೆ
ಮೊಳಕೆಯೊಡೆಯುತ್ತದೆ
ರಾಮನಂತಿದ್ದ
ಮನದ ತುಂಬ
ಕಾಮನ ಬಿಂಬ
ಆವರಿಸಿ
ಉನ್ಮಾದಗೊಳಿಸುತ್ತದೆ

-


4 DEC 2018 AT 20:35

ವಿರಹ ಅವನ
ಅನುಗಾಲದ ಮಿತ್ರ
ಬರಹ ಅವನ
ಪರಿಚಯದ ಪತ್ರ

-


19 OCT 2018 AT 6:47

ಆಪತ್ಸುಮಗ್ನಃ ಸ್ಮರಣ೦ ತ್ವದೀಯ೦
ಕರೋಮಿ ದುರ್ಗೇ ಕರುಣಾರ್ಣವೇಶಿ|
ನೈತಚ್ಛರತ್ವ೦ ಮಮ ಭಾವಯೇಥಾಃ
ಕ್ಷುಧಾತೃಷಾರ್ತಾ ಜನನೀ೦ ಸ್ಮರ೦ತಿ|

ಕೆಡುಕಿನ ಮೇಲೆ
ಒಳಿತಿನ ವಿಜಯದ ಕುರುಹಾಗಿರುವ
'ವಿಜಯ ದಶಮಿ'ಯ ಹಾರ್ದಿಕ ಶುಭಾಶಯಗಳು.
ವಿಜಯ ನಿಮ್ಮದಾಗಲಿ ಎಲ್ಲ ಒಳ್ಳೆಯ ಕೆಲಸಗಳಲಿ
ಸರ್ವಮಂಗಳೆ ಸರ್ವರಿಗೂ
ಸನ್ಮಂಗಳವನ್ನುಂಟು ಮಾಡಲಿ💐

-


18 OCT 2018 AT 12:44

ಎಲ್ಲ YourQuote ಬರಹಗಾರರು
ಇಂದು YourQuote appನ
ಪೂಜಿಸಬೇಕಲ್ಲವೇ?
ಏಕೆಂದರೆ ಅವರ ಬರಹಗಳಿಗೆ
ಇದೇ ಆಯುಧವಲ್ಲವೇ?

-


12 OCT 2018 AT 8:23

ಪಕ್ಕದಲ್ಲಲ್ಲ
ನಿನ್ನಲ್ಲಿ,
ನಿನ್ನೊಳಗಡೆ,
ಎದೆಯಾಳದಲ್ಲಿ
ನಾನಿರುವೆನಲ್ಲ.

-


12 SEP 2018 AT 17:04

ಅವಳು:
ಒಲವ ಮಳೆಯಲ್ಲಿ
ನಿತ್ಯ ನೆನೆಯುತಿರುವೆವು
ಶೀತ-ನೆಗಡಿ ಬರಬಹುದು.

ಅವನು:
ಆಗಾಗ ಪಡೆದರೆ
ಬಿಸಿಯಪ್ಪುಗೆಯ ಕಾವು
ಏನೂ ತೊಂದರೆ ಇರದು.

-


Fetching Prakash Mayannavar Quotes