ಆದಿಯೂ ನೀನೆ...
ಅಂತ್ಯವೂ ನೀನೆ...
ಅಚಿಂತ್ಯವೂ ನೀನೆ...
ಅಗಮ್ಯವೂ ನೀನೆ...
ಸಕಲವೂ ನೀನೆ...
ಸರ್ವವೂ ನೀನೆ...
ಎಲ್ಲವೂ ನೀನೆ ಈಶ್ವರ!
ನೀ ಇಲ್ಲದಿದ್ದರೆ ಎಲ್ಲವೂ ನಶ್ವರ!-
"ನನ್ನ ಸ್ವಂತಿಕೆಯೇ... ನನ್ನ ಶ್ರೀಮಂತಿಕೆ...."
ನನ್ನ... read more
ಆ ಶಿವ ನಿಮ್ಮ ಕಷ್ಟಗಳನ್ನೆಲ್ಲ ದೂರ ಮಾಡಿ...
ಸದಾ ಸಂತೋಷದಿಂದ,ನೆಮ್ಮದಿಯಿಂದ
ಬಾಳಿಸಲಿ ಎಂದು ಹರಸುತ್ತ!
ಬೇರೊಬ್ಬರಿಗೆ ಕೆಡುಕು ಮಾಡದ ಹಾಗೆ
ಒಳ್ಳೆಯ ಬುದ್ದಿಕೊಟ್ಟು ಕಾಪಾಡಲಿ ಎಂದು ಬೇಡಿಕೊಳ್ಳುತ್ತ!
ಎಲ್ಲರಿಗೂ ಒಳ್ಳೇಯದನ್ನೇ ಬಯಸಿ.
ಎಲ್ಲರನ್ನು ಪ್ರೀತಿಸಿ... ಪ್ರೀತಿಯಿಂದ ಬಾಳಿ...
ಅಂತ ಹೇಳುತ್ತಾ!
ಎಲ್ಲರಿಗೂ ಮಹಾ ಶಿವರಾತ್ರಿ ಹಬ್ಬದ ಶುಭಾಶಯಗಳು....-
ಆ ದೇವರಿಗೆನೋ ಕಾತುರ
ನಿನ್ನನ್ನು ಕರೆಸಿಕೊಳ್ಳಲು..!
ನಿನಗೇಕೆ ಆತುರ
ನೀ ಇಷ್ಟು ಬೇಗ ಹೋಗಲು..?-
ಪದೇ ಪದೇ ಸೋತ ಹೃದಯಕ್ಕೆ
ಪ್ರೀತಿಯ ಆಸರೆ ಬೇಕಿಲ್ಲ!
ಪ್ರೀತಿಸುವ ಆಸೆಯು ಆ ಹೃದಯಕ್ಕಿಲ್ಲ!
ಪ್ರೀತಿಸಿದರೆ ಕಳೆದುಕೊಳ್ಳುವ ಭಯ ಕಾಡುವುದಲ್ಲ!
ಕಳೆದುಕೊಂಡರೆ ತಡೆದುಕೊಳ್ಳುವ
ಶಕ್ತಿ ಆ ಹೃದಯಕ್ಕಿಲ್ಲ!-
ಎಲ್ಲಿಯವರೆಗೂ ನೀನು ಅವರ
ಇಷ್ಟದಂತೆ ವರ್ತಿಸುತ್ತಿಯೂ
ಅಲ್ಲಿಯವರೆಗೂ ಮಾತ್ರ ನೀನು
ಒಳ್ಳೆಯವನು!-
ಸಂಬಂಧಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರವಿದ್ದರೆ
ಅವುಗಳು ಸಂಬಂಧಗಳಾಗಿರುವುದಿಲ್ಲ!
ಕ್ರೀಡೆಗಳಾಗಿರುತ್ತವೆ!-
ಅಭಿಮಾನಿಗಳನ್ನೇ ದೇವರೆಂದವರು
ರಾಜ್ ಕುಮಾರ್...
ಅಭಿಮಾನಿಗಳಿಗೆ ದೇವರಾದವರು
ಪುನೀತ್ ರಾಜ್ ಕುಮಾರ್...-
ಅವಳಿನ್ನು ನಕ್ಷತ್ರದ ಹಾಗೆ!
ನೋಡಬಹುದು ಅಷ್ಟೇ..
ಕೈಗೆಟುಕಲು ಸಾಧ್ಯವೇ..?-