QUOTES ON #ಬಾಳ

#ಬಾಳ quotes

Trending | Latest
3 JUN 2020 AT 23:26

ನೀ
ಭಾವ
ಬಾಳ ತೇರು
ಬಾನ್ಮಣಿಯಂತೆ
ಭಾತಿಗೊಳ್ಳುತಿರುವ
ಬಿಮ್ಮನೆ ಬೆಳಕ ನೀಡುತ
ಬಂಗಾರ ಬಾಳ ಪಯಣದಲಿ ಬೆರೆತಿಹೆ
ಬಾಳಿನ ಜ್ಯೋತಿಯ ಬೆಳಗುವ ನಿರ್ಮಲ ಬಂಧು
ಬಂಧುತ್ವವ ಮೆರೆವ ಅಜಾತಶತ್ರು ಇವನಿವ
ಬರಹಗಳ ಒಡೆನಾಟ ಬೀಗುವ ಮನದಿ
ಬ್ರಾತೃತ್ವದಿ ಸಾಗುತ ಮನದೊಳು ಮೂಡಿದೆ
ಬೆಸುಗೆಯಲಿ ನವ ಸಂಬಂಧವನು ಹೊಸೆಯುತ
ಬಸವಳಿದ ಮನಕೆ ಆಸರೆಯ ನೀಡುತಿಹ
ಭರವಸೆಗಳ ಚಿತ್ತಾರ ಮೂಡಿ
ಬಂಗಾರದೊಡುವೆಯ
ಭಾಸುರದಂತೆ
ಭಾವಯಾನ
ಜೀವ
ನೀ

-


17 DEC 2019 AT 9:25

ಅವನು ಕೊಟ್ಟ
ಪ್ರೀತಿಯ ವರವೋ .!
ಅವನಿಟ್ಟ
ಸಿಂಧೂರದ ಕಣವೊ
ಸದಾ ನನ್ನೊಂದಿಗಿನ
ಸಾಂಗತ್ಯ ಸಂಪ್ರೀತಿಯೊಳು
ಎಚ್ಚರಿಕೆಯೊಂದಿಗೆ
ಬಾಳ ಬೆಳಗುವ ಜ್ಯೋತಿಯಾಗಿ
ಬದುಕಿನ ಭಾಗದಲ್ಲಿ
ಸಕ್ರಿಯವಾಗಿ
ಪಾಲ್ಗೊಳ್ಳುವ ಒಲವಿನೊಳಗಿನ
ಜ್ಞಾನೋತ್ಸವ ಮೂರ್ತಿಯೂ
ಸದಾ ಕಾಡುವ ಕಾಯುವ
ನಿತ್ಯೋತ್ಸವ ಖನಿಯೂ.!

-



ಬಾಳ
ದೋಣಿಯಲ್ಲಿ
ಕಾಣದೂರಿಗೆ
ನನ್ನ
ಪಯಣ.

-


1 OCT 2021 AT 9:29

ನಿನ್ನ ನೆನಪಿನ ಬುಟ್ಟಿಯ ಹಿಡಿದು ಸಾಗುತಲಿದೆ ಈ ಪಯಣ ಒಂಟಿಯಾಗಿ

-


22 MAY 2020 AT 11:36

ಬದುಕಲಾಗದ
ಬದುಕಿದು
ಬದುಕಲೇಬೇಕು
ಬಯಸುವ ಆ
ಬಯಕೆಗಳ
ಬದುಕಿಗೆ
ಬೆಳದಿಂಗಳ
ಬೆಳಗುವ
ಬಾಳ ಶಶಿಯಾಗಿ...

- Sukrthi Poojary




-


11 NOV 2020 AT 17:57

ನನ್ನೆದೆಯ ಬೀದಿಯಲ್ಲಿ
ನಡೆದು ಬರುತ್ತಿರುವ
ನಿನ್ನ ಕಾಲ್ಗೆಜ್ಜೆಯ ಸಪ್ಪಳ
ಕೇಳುತ್ತಿದೆ ಕರ್ಣಗಳಿಗೆ
ಇಂಪಾದ ಸವಿಗಾನ
ನೋಡಲು ಬಯಸುತ್ತಿದೆ
ತಾವರೆಯಂತ ಸುಂದರ ವದನ
ಸೆಳೆಯುತ್ತಿದೆ ಮನವ ನಿನ್ನ
ಕಾಡಿಗೆ ಹಚ್ಚಿದ ನಯನ
ಬರುವೆಯಾ ನನ್ನೀ ಹೃದಯಕ್ಕೆ
ಸಾಗೋಣ ಜೊತೆಯಾಗಿ ಬಾಳಯಾನ.
_ಶೃತಿ ಶೈವ






-



ಒಲವ ಸಾಗರದಿ ತಿಳಿಯದದರ ಆಳ
ತೇಲಿ ಮುಳುಗೇಳುವುದಷ್ಟೇ ಈ ಬಾಳ.

-


18 OCT 2021 AT 19:07

ಪದ ಹೆಚ್ಚಿಸಿ ಬರೆಯುವ ಕವನ

ಶೀರ್ಷಿಕೆ: ಬಾಳ ಜ್ಯೋತಿ

ನಾನು
ನಿನ್ನ ಚಂದ
ಕಂಡು ಮಾತು ಆಡಿ
ಗುಣ ನೋಡಿ ಮೋಡಿ ಮಾಡಿ
ನೆಪ ಹೂಡಿ ಬಳಿ ಬಂದು ನಿಂತೆ
ಕೇಳು ಚಿನ್ನ ಬಾಳ ಜ್ಯೋತಿ ಆಗು ಎಂದು
ಹೂವ ಮಾಣೆ ಹಾಕಿ ಕಾದು ಪ್ರೇಮ ಪ್ರೀತಿ ಗೀತೆ
ರಾಗ ಶ್ರುತಿ ಲಯ ಹಾಡಿ ಜೀವ ಧ್ವನಿ ಭಾಷೆ ಕೊಟ್ಟೆ

-


19 APR 2022 AT 14:59

ಬಾಳ ಪಯಣ

ನೀನು ನಾನು ಕೂಡಿಕೊಂಡು...
ಬಾಳ ಪಯಣ ಹೊರಟೆವು.
ನಮ್ಮ ನಗುವ ನಾವೆ ಕಂಡು...
ದಣಿವನೆಲ್ಲ ಮರೆತೆವು.

ಹಲವು ಕನಸು, ಕೆಲವು ಮುನಿಸು
ಮತ್ತೆ ಮೆತ್ತಗಾಗುವ ಮನಸು.
ಏನೇ ಬರಲಿ ನಮಗೆ ನಾವೇ......
ಅಂದುಕೊಂಡೆವು.
ಜೊತೆಯಲಿ ಹೆಜ್ಜೆಹಾಕಿ.....
ಹೊಂದಿಕೊಂಡೆವು.

ಸಣ್ಣ ಪುಟ್ಟ ತಪ್ಪುಮಾಡಿ......
ಕಿರಿಯರಾದೆವು.
ನಮಗೆ ನಾವೇ ಕ್ಷಮಿಸಿಕೊಂಡು..
ಹಿರಿಯರಾದೆವು.
ಆಡುವ ಮಾತು ನೂರಿದ್ದರು.....
ಮೂಕರಾದೆವು.
ಕಂಠ ಬಿಗಿದರೂ ಸಹಿಸಿ.....
ನುಡಿದು ನಡೆದೆವು.

ಒಳಿತು-ಕೆಡುಕು ಏನೇ ಬರಲಿ....
ಮುಂದೆ ನೋಡುವ.
ಗುಟ್ಟು ಬಿಡದೆ ಗಟ್ಟಿಯಾಗಿ....
ಮೆಟ್ಟಿನಿಲ್ಲುವ.

- 🖋 ಸುನಿಲ್ ಕುಮಾರ್. ಕೆ.

-




ನಮ್ಮ ಜೀವನದ ದಾರಿಯಲ್ಲಿ
ಸಾಗುವಾಗ, ನಾವು ಸ್ವಲ್ಪ
ಹಳೆಯದಾದ ಬಟ್ಟೆಗಳನ್ನು
ಬೇರೆಯವರಿಗೆ ಕೊಡುವ
ಹಾಗೆ, ನಮ್ಮ ಬಾಳ ಪಯಣದಲ್ಲಿ
ಹಳೆನೆನಪುಗಳನ್ನು ಬೇರೆಯವರಿಗೆ
ರವಾನಿಸಿ, ಮುಂದೆ ಸಾಗುವಂತಿರಬೇಕಿತ್ತು
ಅಲ್ಲವೇ?..😊

-