ಹೆಣ್ಣಿನ ಮನಕೆ ಅಣ್ಣನ ಪ್ರೀತಿಯೇ ಸದಾ ಶ್ರೀರಕ್ಷೆ
ಒಡ ಹುಟ್ಟದಿದ್ದರೂ ನೀಯೆನಗೆ ದೇವರಿತ್ತ ಭಿಕ್ಷೆ..
-
ಬರವಣಿಗೆಯಲ್ಲಿ ನಾನಿನ್ನೂ ಪುಟ್ಟ ಕೂಸು...
ಭಾವನೆಗಳು ಅಕ್... read more
ಕವಿತೆಯೊಡಲಲಿ ಕವಿತೆಯಾಗ ಹೊರಟೆ
ನಾನು ಕವಿತೆಯಾಗಲೇ ಇಲ್ಲ..
ಭಾವದೊಡಲ ಭಾವವೆಲ್ಲಾ ಒಂದುಗೂಡಿ
ಪದಪುಂಜವಾಯಿತು..
ಓದಿದೆ..ಮತ್ತೆ ಮತ್ತೆ ಗೀಚಿದೆ..
ಹೃದಯದೊಳಗೆ ಹುಚ್ಚೆದ್ದು ಕುಣಿದು
ಗೀಚಿದೆ..ಪದಗಳ ಬಾಚಿ ತಬ್ಬಿದೆ..
ಕೊನೆಗೂ ನಾ ಕವಿತೆಯಾಗಲೇ ಇಲ್ಲ..!!
ಪದಕ್ಕೊಂದು ರೂಪ ಕೊಟ್ಟೆ..
ಶಿಲೆಯೊಳಗಿನ ಕಲೆಯಾದೆ..
ಎಂದೂ ಮರೆಯದ ಕವಿಯಾದೆ..
ಪದದೊಳಗೆ ಹೊಮ್ಮುವ ಕೋಗಿಲೆ ದನಿಯಾದೆ..
ನಾ ಕವಿಯಾದೆ..!!
ಕವಿಯಾದೆ..ಹೌದು..
ಕವಿತೆಯೆಂದೂ ಕುವೆಂಪುರಂತೆ ಕಂಪ ಸೂಸೀತೋ
ನಾನರಿಯೆ..
ನನ್ನೊಡಲ ಭಾವದಿಂಪು ಅದರೊಳಡಗಿ
ಓದುಗನೆದೆಗೆ ಮೃದುಲ ತಂಪನಿತ್ತು
ಕಣ್ಣಂಚಲೊಂದು ಕಾವ್ಯಭಾಷ್ಪವ ಸುರಿಸಿ
ಕವಿಯೆಂಬ ಪಟ್ಟ ಕೊಟ್ಟಿತ್ತು..
ಕೊನೆಗೂ ನಾ ಕವಿತೆಯಾಗಲೇ ಇಲ್ಲ..
ಓದುಗನ ಮನದಿ ಕವಿಯಾಗಿ ಉಳಿದೆ..!!
-
ಭಾವಜೀವಿಗಳ ಅಂತರಂಗವನ್ನು ಭಾವಜೀವಿಗಳಷ್ಟೇ ಅರ್ಥೈಸಿಕೊಳ್ಳಲು ಸಾಧ್ಯ.
ಅವರ ಭಾವನೆ, ಮಾತುಗಳು ಮೌನವಾಗಿದ್ದರೂ ಸುತ್ತಲಿನ ಪರಿಸರ, ಅವರು ಒಂಟಿಯಾಗಿ ಕಳೆಯುವ ಜಾಗಗಳಿಗೆ ಅವರಾತ್ಮದ ಪ್ರತೀ ಮಾತುಗಳೂ ಕೇಳಿಸುತ್ತಲೇ ಇರುತ್ತದೆ. ಅವರ ಕಣ್ಣೀರು ರಾತ್ರಿ ಮಲಗುವ ತಲೆದಿಂಬಿಗಷ್ಟೇ ಕಾಣಿಸುತ್ತಿರುತ್ತದೆ. ಭಾವಜೀವಿಗಳು ಎಂದಿಗೂ ಕಟುಕರಲ್ಲ. ಎಲ್ಲವನ್ನೂ ಎದುರಿಸಿ ಗಟ್ಟಿಯಾದ ಸದೃಢ ಮನಸ್ಸುಳ್ಳವರಾಗಿರುತ್ತಾರೆ.-
ಹೇಳಲಾಗದ ಭಾವನೆ
ಮಡುಗಟ್ಟಿದೆ ಕಲ್ಲಾಗಿ ಎದೆಯೊಳಗೆ
ಬತ್ತಿದ ಭಾವ ಮತ್ತೆಂದು ಹಸಿರಾಗುವುದೋ
ಆಶಾಭಾವದಿ ಕಳೆಯುತ್ತಿದೆ ದಿನ..
-
ಖಾಸಗಿ ವಿಷಯಗಳು ಸಾರ್ವಜನಿಕವಾದಂತೆ ಜೀವನದುದ್ದಕ್ಕೂ ನಂಬಿಕೆ ಎಂಬುದು ನೆಲ ಕಚ್ಚಲ್ಪಡುತ್ತದೆ.
-
ಮೌನವಾಗಿ ಕುಳಿತ ನನ್ನೆದೆಯಲ್ಲಿ
ಅವನು ಮೌನವಾಗಿಯೇ ಗೀಚಿದ
ಸುಂದರ ಕವಿತೆ "ಪ್ರೀತಿ.."-
ಹಾತೊರೆಯುವ ಮನದ ಹಂಬಲಕ್ಕೆ
ಆಗೊಮ್ಮೆ ಈಗೊಮ್ಮೆ ಬಂದೆರಗುವ
ಸಿಡಿಲಬ್ಬರದ ಪೆಟ್ಟು ಶಾಶ್ವತ ಕಡಿವಾಣ.
-
ಮನಗಳೆರಡು ಬಂಧಿಯಾಗಿತ್ತಂದು ಅಗ್ನಿಸಾಕ್ಷಿಯಾಗಿ..
ಒಲವು ಮತ್ತೆ ಮತ್ತೆ ಸ್ಫುರಿಸಿ ಇಮ್ಮಡಿಯಾಗಿತ್ತು ಆತ್ಮಸಾಕ್ಷಿಯಾಗಿ..
ಉಸಿರೊಂದು ಗರ್ಭಗುಡಿಯ ಬೆಳಗಿತ್ತು ಮದುವೆಯ ಬಂಧಕೆ ಒಲವ ಹಣತೆಯಾಗಿ..
ತಾಯ್ತನದ ಮಡಿಲಲಿ ನಗುತಿಹಲಿಂದು ಭಾಗ್ಯಲಕ್ಷಿಯು ಜಗ ಮರೆಸೋ ಒಲವಾಗಿ...-
ಪ್ರೀತಿ ಅಂದ್ರೆ ಮನಸ್ಸು ಕೊಟ್ಟ ಮೇಲೆ
ಸಾವಿನಲ್ಲೂ ಜೊತೆಯಾಗಿ ಬರುವೆ ಎಂಬ ದೃಢ ಭಾವ.
-