- : ಬಾಳ ಪಯಣ : -
ನೀನು ನಾನು ಕೂಡಿಕೊಂಡು.....
ಬಾಳ ಪಯಣ ಹೊರಟೆವು.
ನಮ್ಮ ನಗುವ ನಾವೆ ಕಂಡು.....
ದಣಿವನೆಲ್ಲ ಮರೆತೆವು.
ಹಲವು ಕನಸು, ಕೆಲವು ಮುನಿಸು
ಮತ್ತೆ ಮೆತ್ತಗಾಗುವ ಮನಸು.
ಏನೇ ಬರಲಿ ನಮಗೆ ನಾವೇ.....
ಅಂದುಕೊಂಡೆವು
ಜೊತೆಯಲಿ ಹೆಜ್ಜೆಹಾಕಿ......
ಹೊಂದಿಕೊಂಡೆವು.
ಸಣ್ಣ ಪುಟ್ಟ ತಪ್ಪುಮಾಡಿ......
ಕಿರಿಯರಾದೆವು.
ನಮಗೆ ನಾವೇ ಕ್ಷಮಿಸಿಕೊಂಡು...
ಹಿರಿಯರಾದೆವು.
ಆಡುವ ಮಾತು ನೂರಿದ್ದರು.....
ಮೂಕರಾದೆವು.
ಕಂಠ ಬಿಗಿದರೂ ಸಹಿಸಿ.....
ನುಡಿದು ನಡೆದೆವು.
ಒಳಿತು-ಕೆಡುಕು ಏನೇ ಬರಲಿ....
ಮುಂದೆ ನೋಡುವ.
ಗುಟ್ಟು ಬಿಡದೆ ಗಟ್ಟಿಯಾಗಿ....
ಮೆಟ್ಟಿನಿಲ್ಲುವ.
- 🖋 ಸುನಿಲ್ ಕುಮಾರ್ ಕೆ-
SUNIL KUMAR K
0 Followers · 2 Following
Joined 19 April 2022
19 APR 2022 AT 18:25
19 APR 2022 AT 14:59
ಬಾಳ ಪಯಣ
ನೀನು ನಾನು ಕೂಡಿಕೊಂಡು...
ಬಾಳ ಪಯಣ ಹೊರಟೆವು.
ನಮ್ಮ ನಗುವ ನಾವೆ ಕಂಡು...
ದಣಿವನೆಲ್ಲ ಮರೆತೆವು.
ಹಲವು ಕನಸು, ಕೆಲವು ಮುನಿಸು
ಮತ್ತೆ ಮೆತ್ತಗಾಗುವ ಮನಸು.
ಏನೇ ಬರಲಿ ನಮಗೆ ನಾವೇ......
ಅಂದುಕೊಂಡೆವು.
ಜೊತೆಯಲಿ ಹೆಜ್ಜೆಹಾಕಿ.....
ಹೊಂದಿಕೊಂಡೆವು.
ಸಣ್ಣ ಪುಟ್ಟ ತಪ್ಪುಮಾಡಿ......
ಕಿರಿಯರಾದೆವು.
ನಮಗೆ ನಾವೇ ಕ್ಷಮಿಸಿಕೊಂಡು..
ಹಿರಿಯರಾದೆವು.
ಆಡುವ ಮಾತು ನೂರಿದ್ದರು.....
ಮೂಕರಾದೆವು.
ಕಂಠ ಬಿಗಿದರೂ ಸಹಿಸಿ.....
ನುಡಿದು ನಡೆದೆವು.
ಒಳಿತು-ಕೆಡುಕು ಏನೇ ಬರಲಿ....
ಮುಂದೆ ನೋಡುವ.
ಗುಟ್ಟು ಬಿಡದೆ ಗಟ್ಟಿಯಾಗಿ....
ಮೆಟ್ಟಿನಿಲ್ಲುವ.
- 🖋 ಸುನಿಲ್ ಕುಮಾರ್. ಕೆ.-