QUOTES ON #ಬಾಲ್ಯ

#ಬಾಲ್ಯ quotes

Trending | Latest

Mischievous ಕೃಷ್ಣ

-


22 MAY 2020 AT 14:46

ಭಾವನೆಗಳ
ಜಗಳಾಟವಿಲ್ಲ
ಒಡೆದ ಗಾಜಿನ
ಕನ್ನಡಿಯಂತಹ ಬಿಂಬ
ಕಣ್ಣ ಸೆಳಯಲಿಲ್ಲ
ಕದ್ದು ಬಿದ್ದು
ಓಡೋಡಿ
ಕಣ್ಣಮುಚ್ಚದಂತೆ
ಹೇಳಲಾಗದ
ಕೇಳಲಾಗದ
ಮಾತುಗಳೊಂದೇ
ಉಳಿದಿರುವುದು ಬಾಲ್ಯವೆಂಬ
ಸ್ನೇಹದ ಪುಸ್ತಕದಲ್ಲಿ

-


27 OCT 2020 AT 15:37

ಬದುಕಿನ ಪಯಣದಲಿ
ಬಾಲ್ಯದ ಹೆಜ್ಜೆಗಳು ಪುಟ್ಟದಾದರೂ
ಗಂಭೀರ ಪಥಗಳಾಗಿ ಸಾಗುತ್ತದೆ
ಜೀವನದ ಅರ್ಥ ಪ್ರತಿಕ್ಷಣದಲ್ಲಿ.

-


22 MAY 2020 AT 12:20

ನೆಮ್ಮದಿಯ
ಜೀವನವದು
ಯಾವುದೇ ಕಷ್ಟಗಳ
ಪರಿವಿಲ್ಲದೆ ನಮ್ಮ
ಖುಷಿಗಳು ಮಾತ್ರ
ನಮಗೆ ಅರಿವಾಗುತಿತ್ತು.
ಬಾಲ್ಯದ ನೆನಪುಗಳು
ಎಲ್ಲರಲ್ಲೂ
ಮರೆಯದೆ
ಅಚ್ಚುಳಿಯುವುದು,
ಆ ಕಿರುನಗೆಯನ್ನ
ಬೀರಿ ಎಲ್ಲರನ್ನ
ಪೆದ್ದುಮಾಡುವ
ಸಮಯವದು..

-


20 JUL 2019 AT 17:03

ಅದೇನೊ ಹೊಸತನ,
ಬಾಲ್ಯದ ಜೀವನ.
ಅದ್ಬುತ ಗೆಳೆತನ
ಮೂಡಿಸುವುದು
ಬಾಳಲ್ಲಿ ಹೊಸ
ಆಶಾ ಕಿರಣ.
ಇನ್ನೇಕೆ ಬೇಕು
ಹಗೆತನ. ಸುಮ್ಮನೆ
ಅನುಭವಿಸಿ ನಡೆಸಿ,
ಬಾಳೊಂದು
ಸುಂದರ ಯಾನ...:)

-


12 JUN 2021 AT 22:51

ಮಳೆ ಬಿಸಿಲೆನ್ನದೆ ದಿನವಿಡೀ ಆಟ
ಎಷ್ಟೇ ಕಲಿತರು ಅರ್ಥವಾಗದ ಪಾಠ
ಮೋಟು ಬಳಪ, ಹರಿದ ಚಡ್ಡಿ
ಸ್ಲೇಟು ಮೇಲೆ ಗೀಚೋ ಕಡ್ಡಿ
ಅರ್ಧ ಬರ್ಧ ಕಲಿತ ಪದ್ಯ
ಮೊದಲ ಬೆಂಚಿನ ಹುಡುಗಿ ವಿಧ್ಯಾ.
ಹತ್ತು ಪೈಸೆ ಶುಂಠಿಪೇಪರ್ಮೇಂಟು
ನಾಲ್ಕಣೆ ಕಂಬರ್ಕಟ್ಟು
ತುಂತುರು, ಬಾಲಮಂಗಳ, ಗಿಳಿವಿಂಡು
ಪನ್ನೇರಳ ಮರದಲ್ಲಿ ಹುಡುಗರ ಹಿಂಡು.
ಪಾಸು ಫೇಲು ಎರಡೇ ಫಲಿತಾಂಶ
ಇಪ್ಪತ್ತೈದು ಡಿಗ್ರಿ ಒಳಗಿನ ಉಷ್ಣಾಂಶ!
ಅಂದಿನ ದಿನಗಳೇ ಬಹಳ ಚಂದ
ಇಂದು ನೆನೆದಾಗ ಆಗುವುದು ಆನಂದ!

-



ನಿದ್ದೆ ಬಾಲ್ಯದಲ್ಲಿ
ಬರುತಿತ್ತು ಗಾಲಿಬ್
ಇಂದು ದಣಿವಿನಿಂದ
ಮಲಗುತಿದ್ದೇನೆ ಗಾಲಿಬ್...

-



ಬಡವರ ಜೀವನವು ಎಷ್ಟು ಹಸಿದಿರುತ್ತದೆಯೆಂದರೆ
ಬಡವರ ಮಕ್ಕಳ ಬಾಲ್ಯವನ್ನೂ ಸಹ ಅದು ತಿಂದು ಬಿಡುತ್ತದೆ.

-


13 JUN 2021 AT 14:59

ಆ ಬಾಲ್ಯದ ಜೀವನದ ನೆನಪಿಗೆ ಕೊನೆಯಿಲ್ಲ
ಆದರೆ ಎಂದೂ ಆ ಜೀವನ ನಮ್ಮ ಬಾಳಲ್ಲಿ ಮತ್ತೆ ಮರುಕಳಿಸದು😊

-


28 JUL 2021 AT 7:43

ಬಾಲ್ಯದ ಗೆಳತಿ

ಬಲು ಗಟ್ಟಿಗಿತ್ತಿ ನನ್ನ ಬಾಲ್ಯದ ಗೆಳತಿ
ಅವಳೊಂದಿಗಾಡಿದ್ದೆ ಉಯ್ಯಾಲೆ, ಮರಕೋತಿ
ಮಲಗಿದ್ದೆ ಅವಳ ಮಡಿಲ ಶರತ್ಕಾಲದ ಪುಷ್ಪವೃಷ್ಟಿಯಲಿ
ಅವಳ ಭುಜದ ಮೇಲ ಕೋಗಿಲೆ ಹಾಡಿತ್ತು ವಸಂತಕಾಲದಲಿ...
ಕೊಂದೆವು ಅವಳನು ಅಗಲವಾದ ರಸ್ತೆಗೆಂದು
ತುಂಡು ತುಂಡು ಮಾಡಿದೆವು ನಮ್ಮ ಮನೆಯ ಕುರ್ಚಿಗೆಂದು...

-