ಕೇಳದೆ ಮೌನವಾದ ಹೃದಯ
ಅದೇಕೋ ನಿನ್ನ ಪಿಸುಮಾತನ್ನ ಕೇಳಲು
ಬಯಸುತಿದೆ.
ಅಂತರಂಗದ ಮಿಲನ ನೆನಪುಗಳನ್ನ ಕೆದುಕಿ
ಅದೇ ಭಾವನೆಗಳೊಂದಿಗೆ
ಹೊಸ ಪಯಣ ನೆಡೆಸಿದೆ ಏಕಾಂಗಿಯಾಗಿ.
ಹೇಳೆ ಒಲವೆ ನಿನ್ನೊಲವಿನ
ಆ ಕನಸಿನ ಭಾಷೆಯನ್ನ
ಕಲಿಯುವ ಹಂಬಲ ಶುರುವಾಗಿದೆ ನನಗೀಗ.
ಮನದ ಹೊಸ ಬಯಕೆಗಳು
ನಿನ್ನಿಂದಲೇ ಶುರುವಾಗಿದೆ
ನನ್ನೆಲ್ಲಾ ಹಳೆ ಬಯಕೆಗಳು ಮಾಸುತಿದೆ
ಪ್ರೀತಿಯ ಈ ಪರಿಯಲ್ಲಿ..!-
ಈ ನನ್ನ ಕರುನಾಡಿಗೆ ನಾ ಏನಾದರು ಕೊಡುಗೆ ನೀಡಬೇಕು ಎನ್ನು... read more
ಅವಳೆಂದರೆ ನನ್ನೀ ನೆನಪುಗಳಿಗು ಸತಾಯಿಸಿ
ನೆನಪಾಗುವ ಮನಸಿನ
ಕಾದಂಬರಿ..!!
ಅವಳೆಂದರೆ ನನ್ನೀ ಕನಸುಗಳಿಗು ನಿದ್ದೆ ಕೆಡಿಸಿ
ಕನಸಾಗುವ ಪ್ರೀತಿಯ
ನೀಲಾಂಬರಿ..!!
ಅವಳೆಂದರೆ ನನ್ನೀ ಒಲವುಗಳಿಗು ಕಾಯಿಸಿ
ಒಲವಾಗುವ ನೆನಪಿನ
ಕನಕಾಂಬರಿ..!!-
ಹೇಳೆ ಒಲವೆ ನಿನ್ನಂತರಂಗದ
ಖಜಾನೆಯಲ್ಲಿ ಅದೆಷ್ಷು ಪ್ರೀತಿಯನ್ನ
ತುಂಬಿಸಿಟ್ಟಿರುವೆ ನೀ ನನಗಾಗಿ
ರೇಶಿಮೆಯಂಥಾ ಆ ನಿನ್ನ ಕಣ್ಣು
ಬರಸೆಳೆದು ಕೂಡಿ ಹಾಕಿದೆ
ನನ್ನ ನಿನ್ನೊಲವ ಭಂದಿಖಾನೆಯಲ್ಲಿ
ಈ ಬಡಪಾಯಿ ಹೃದಯಕ್ಕೆ
ಒಂಚೂರು ಜಾಮೀನು ಕೊಡಿಸುವೆಯ
ಬದುಕಿ ಬಿಡುವೆ ನಿನ್ನ ನೆನಪಲ್ಲೆ
ಉಸಿರು ಹೋಗೊ ಆ ಘಳಿಗೆಯಲ್ಲು
ನಿನ್ನ ಮಡಿಲೆ ಬೇಕೆಂದು
ಹವಣಿಸುತಿದೆ ಈ ಪಾಪಿ ಹೃದಯ.!-
ಸಾಗರದ ಸಂಜೆಯಲಿ ಏಕಾಂತದ ತಂಗಾಳಿ ಬೀಸಲು ಅದೇ ನೆನಪುಗಳೂಟ್ಟಿಗೆ ಈ ಮನಸ್ಸು ಸಾಗಿದೆ ದಡದ ಮೇಲೆ..!!
-
ಮುಸ್ಸಂಜೆಯ ಮಳೆಯಲ್ಲಿ ಸವಿ ನೆನಪುಗಳು ಜಾರಿ ಬೀಳುವಾಗ ಈ ಮನಸ್ಸು ಹಠಮಾಡಿದೆ ಅಂಗೈಯ ಬೊಗಸೆಯಲ್ಲಿ ಹಿಡಿಯಲು..!!
-
ಎಲ್ಲಿಂದ ಶುರುವಾಯಿತೋ ಈ ಪ್ರೀತಿ
ವಿವರಿಸಲು ಆಗದು ಈ ರೀತಿ.
ಏನೋ ಒಂದು ಕಾರಣ ಬೇಕಾಗಿದೆ
ನೀನೆ ಈ ಹೃದಯವ ಕದ್ದಿರುವೆ ಎಂದು.
ರಮಿಸುವ ಆ ಒಲವಿಗು
ಕುಣಿಸುವ ಈ ಮನಸಿಗು
ಏನೋ ಒಂತರ ಮಿಲನಾಬಂಧ.
ಕನಸೆಂಬ ಖಜಾನೆಯಲ್ಲಿ
ಅಡಗಿಸಿಟ್ಟಿರುವೆ ಈ ಪ್ರೀತಿಯನ್ನ
ಕನಸು ಕಾಣೋಣ ಬಾರೆ
ಈ ಪ್ರೀತಿ ನಿದಿರೆಯ ಕಣ್ಣಿನೊಳಗೆ.
ಯಾರೊಂದಿಗೂ ಹೇಳಬೇಡ
ನಾನೆ ನಿನ್ನವನೆಂದು
ಬರಿ ಕಣ್ಣಲ್ಲೆ ಹೇಳೆ ನೀನೆ ನನ್ನವನೆಂದು.!-
ಅತಿಯಾಯಿತು ನನ್ನೀ ಪ್ರೀತಿ
ಅವಳ ನೆನಪಿನ ಆ ಕರೆಯೋಲೆಗೆ
ಮನಸಾಯಿತು ಈ ರೀತಿ
ಅವಳ ಹೃದಯದ ಹೊಸ ಪ್ರೀತಿಗೆ.
ಕೇಳಿಸದ ಪಿಸುಮಾತಿಗೆ
ಎದೆಯ ಬಾಗಿಲೊಂದು ತೆರೆದಾಗಿದೆ
ಒಳಬಂದು ಹೇಳೆ ನಿನ್ನೆಲ್ಲ ಆ ಪಿಸುಮಾತುಗಳನ್ನ.
ನಂಬು ನಲ್ಲೆ ನಾ ನಿನ್ನ ಪ್ರೇಮಿ
ಅನುಮಾನ ದೂರ ಮಾಡೆ ನೀ ನಿನ್ನ ಪ್ರೇಮಿ.
ಒಲಿದ ಪ್ರೇಮದ ಭಾಷೆಗೆ
ತೆರೆಯುವೆನು ನಾನೊಂದು ಶಾಲೆ
ಕಲಿಯೋಣ ಬಾರೆ ಉಸಿರಾಗಲಿ
ನಮ್ಮಿಬ್ಬರ ಒಲವಿನ ಆ ಪ್ರೇಮದ ಭಾಷೆ..!-
ಆಕಾಶದಿಂದ ಹನಿಯೊಂದು ಜಾರಿ ಭುವಿ ಸೇರಲು ಮೋಡಗಳೆಲ್ಲವು ಒಂದಾದವು ಈ ಏಕಾಂತ ಸಂಜೆಯಲಿ
-