ಆತ್ಮತೃಪ್ತಿಯನ್ನು ನೀಡುತ್ತದೆ
ಪ್ರಾಮಾಣಿಕತೆ ಸುಖಗಳಿಸದಿದ್ದರೂ,
ಕಷ್ಟ ಎದುರಿಸುವ ಶಕ್ತಿ ಕೊಡುತ್ತದೆ
ಪ್ರಾಮಾಣಿಕತೆ ಆಡಂಬರಗಳಿಸದಿದ್ದರೂ,
ಸರಳ ಜೀವನದ ಮಹತ್ವ ತಿಳಿಸುತ್ತದೆ
ಪ್ರಾಮಾಣಿಕತೆ ಹೆಸರುಗಳಿಸದಿದ್ದರೂ,
ಹೆಸರಿಗೆ ನಿಜ ಅರ್ಥವನ್ನು ನೀಡುತ್ತದೆ
ಪ್ರಾಮಾಣಿಕತೆ ಕೀರ್ತಿಗಳಿಸದಿದ್ದರೂ,
ಯಶಸ್ಸಿಗೆ ಸ್ಫೂರ್ತಿಯನ್ನು ತುಂಬುತ್ತದೆ
ಪ್ರಾಮಾಣಿಕತೆ ಬೆಲೆಗಳಿಸದಿದ್ದರೂ,
ಮನುಷ್ಯತ್ವವನ್ನು ಅಮೂಲ್ಯನನ್ನಾಗಿಸುತ್ತದೆ.-
ತಪ್ಪು ನನ್ನ ಪ್ರಾಮಾಣಿಕ ಪ್ರೀತಿಯದ್ದೆ...
ಆಕರ್ಷಿಶಿದ್ದು ನಿನ್ನ ಸುಳ್ಳಿನ ಪ್ರೀತಿನೆ...-
ಸುಳ್ಳುಗಳ ನೋಡಿ ನೋಡಿ
ಲೋಕದಾ ಸಹವಾಸ ಸಾಕೆನಿಸುವುದು.
ಎಲ್ಲಿ ತಾಗಿದರೆ ಅಲ್ಲಿ ತುರಿಯನೆಬ್ಬಿಸುವ..
ತುರುಚಿ ಗಿಡದಂತೆ.
ಕೆರೆದರೆ ಹುಣ್ಣು.
ಕೆರೆಯದಿರೆ ಒಳಗೊಳಗೇ ಅಪಹಾಸ್ಯ.
ಪ್ರಾಮಾಣಿಕತೆ ಹಳಸಿ, ಕೊಳಚೆಯಾ ತೆರದಿ,
ಇರುವಾಗ..
ಕುಟಿಲತೆಗೇನು ಮದ್ದು?
ಗಾಯತ್ರಿ⚘ಕಣೋ
-
ಒಮ್ಮೆ ಸತ್ಯ ಸುಳ್ಳು ಎರಡು ವಾಕಿಂಗ್ ಹೋಗಿದ್ವು ಹಾದಿಯಲ್ಲಿ ಒಂದು ಸುಂದರ ನದಿ ಕಂಡಿತು ಸರಿ .ಎರಡೂ ತಮ್ಮ ವಸ್ತ್ರಗಳನ್ನು ತೆಗೆದು ಸ್ಥಾನಕ್ಕೆ ಇಳಿದವು. ಸುಂದರ ಸಂಜೆಯಲ್ಲಿ ತಂಪಾದ ನದಿಯಲ್ಲಿ ಈಜುತ್ತಾ ಮೈ ಮರೆತವು .
ಒಂದಿಷ್ಟು ಹೊತ್ತಾದಮೇಲೆ ಸುಳ್ಳು ಮೇಲೆದ್ದು ಬಂತು ಸತ್ಯ ಇನ್ನೂ ಮೈ ಮರೆತು ಈಜುತ್ತಾ ಇತ್ತು. ಸುಳ್ಳು ಅತ್ತಿತ್ತ ನೋಡಿ ಸತ್ಯದ ಬಟ್ಟೆಗಳನ್ನು ಧರಿಸಿ ಹೊರಟು ಬಿಟ್ಟಿತ್ತು .ಸಾಕಷ್ಟು ಸಮಯದ ನಂತರ ಸತ್ಯ ಮೇಲೆದ್ದು ಬಂದಾಗ ಅದರ ವಸ್ತ್ರಗಳೇ ಇರಲಿಲ್ಲ .
ಸತ್ಯಕ್ಕೆ ಸುಳ್ಳಿನ ವಸ್ತ್ರಗಳನ್ನು ಧರಿಸಲು ಹಿಂಸೆ ಎನಿಸಿತು .ಅಸಹ್ಯ ಎನಿಸಿತು .ಅಂದಿನಿಂದ ಸತ್ಯ ಬೆತ್ತಲಾಗೆ ತೆರೆಮರೆಯಲ್ಲೇ ಓಡಾಡಲು ಶುರು ಮಾಡಿತು. ಸುಳ್ಳು ಸತ್ಯದ ಹೊದಿಕೆ ಹೊದ್ದು ತಿರುಗುತ್ತಲೇ ಇದೆ . ರಾಜಾರೋಷವಾಗಿ .....
-
ಖಂಡಿತವಾಗಿಯೂ ತಪ್ಪಲ್ಲ,
ನಿನ್ನಲ್ಲಿ ಪ್ರಾಮಾಣಿಕತನ ಒಂದಿದ್ದರೆ ನಿನ್ನ ವೈರಿಯು ಕೂಡ ನಿನ್ನ ಕೈ ಹಿಡಿಯುತ್ತಾನೆ,-
ನಾವು ದೇವರನ್ನು
ಸದಾ ನಿಷ್ಕಲ್ಮಶವಾದ
ಭಕ್ತಿ ಭಾವದಿಂದ
ಪೂಜಿಸಿ ನಿಷ್ಠೆ,
ಪ್ರಾಮಾಣಿಕತೆಯಿಂದಿದ್ದರೆ
ಸಾಕು ಆಗ ಆ ದೇವರೇ
ನಮಗೆ ಸದಾ
ಶ್ರೀ ರಕ್ಷೆಯಾಗಿರುತ್ತಾರೆ .-
ಖಂಡಿತ ತಪ್ಪಲ್ಲ....! ಆದರೆ, ನಮ್ಮಂತೆಯೇ ಬೇರೆಯವರೂ ಒಳ್ಳೆಯವರು ಎಂದು ತಿಳಿದುಕೊಳ್ಳುವುದು ತಪ್ಪು
-
ಪ್ರೀತಿ,ಗೌರವ,ಆತ್ಮಾಭಿಮಾನ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ.
ಹುಟ್ಟು ಸಾರ್ಥಕವೆನಿಸುವಂತೆ ಮಾಡುತ್ತದೆ.
-