ಕೆಲ ಸಂಬಂಧಗಳು ಹೇಗೆ ಅಂದರೆ ....
ಬಿಸಿ ಅನ್ನದ ತುತ್ತನ್ನು ಬಾಯಿಗೆ ಹಾಕಿದ ಹಾಗೆ
ನುಂಗಕ್ಕೂ ಬಾರದೆ ಉಗಳಕ್ಕು ಬಾರದ ಹಾಗೆ...-
ದೇವರ ಹೆಸರಲ್ಲಿ ಉಪವಾಸ
ಮಾಡುವುದು ಸಾಧನೆ ಅಲ್ಲ
ತಂದೆ-ತಾಯಿ ಉಪವಾಸ
ಇರದಂತೆ ನೋಡಿಕೊಳ್ಳುವುದು
" ಮಹಾಸಾಧನೆ "
' ಇದು ಮಕ್ಕಳ ಕರ್ತವ್ಯ '
-
ಪ್ರೀತಿ ಮಾಡಿ ಮೋಸ ಮಾಡದಿರಿ
ಸ್ನೇಹ ಮಾಡಿ ಬೆನ್ನಿಗೆ ಚೂರಿ ಹಾಕದಿರಿ
ಖುಷಿಯಾಗಿರಿ ಆ ನಿಮ್ಮ ಖುಷಿ
ಇನ್ನೊಬ್ಬರಿಗೆ ನೋವು ತರದಿರಲಿ
ಜೀವನದಲ್ಲಿ ಚೆನ್ನಾಗಿ ಚಿಂತೆ ಮಾಡದಿರಿ-
ಕರೆಯದೆ ಬರುವ ಅತಿಥಿ ಎಂದರೆ " ಸಾವು "ಮಾತ್ರ
ಅದು ಯಾವಾಗ ಬರುತ್ತೆ ಬಿಡುತ್ತೆ ಅಂತ ಯಾರಿಗೆ ಗೋತ್ತು ಇರುವಷ್ಟು ದಿನ ಖುಷಿ ಖುಷಿಯಾಗಿರಿ ..😊
ಏನ್ ಅಂತೀರಾ ..?-
ಜೀವನದಲ್ಲಿ ....
ಸೋಲಿನಿಂದ ಕಲಿತ ಪಾಠಕ್ಕಿಂತ !!!
ನೋವಿನಿಂದ ಕಲಿತ ಪಾಠವೇ ಹೆಚ್ಚು !!!
ಸೋಲು ಹೇಗೆ ಗೆಲ್ಲಬೇಕು ಎಂಬುದನ್ನು ಕಲಿಸಿದರೆ!!!
ನೋವು ಹೇಗೆ ಬದುಕಬೇಕೆಂಬುದನ್ನು ಕಲಿಸಿದೆ !!!-
ದಿನಕ್ಕೊಂದು, ಕ್ಷಣಕ್ಕೊಂದು, ಬಣ್ಣ
ಹಚ್ಚಿಕೊಂಡು ಅಭಿನಯ ಮಾಡುವ
ಕಲಾವಿದರನ್ನು ನಂಬಬಹುದು ...
ಆದರೆ
ನಂಬಿಕೆ ಅನ್ನೋ ಬಣ್ಣ ಬಡ್ಕೊಂಡು ನಾಟಕ
ಮಾಡೋರ್ನ ನಂಬೇಡ .....-
ಹೃದಯಕ್ಕೆ ಹತ್ತಿರವಾಗಿರೋದು
ಮನಸಿಗೆ ಹತ್ತಿರವಾಗುತ್ತೆ ....
ಮನಸ್ಸಿಗೆ ಹತ್ತಿರವಾಗಿರೋದು
ಜೀವಕ್ಕೆ ಹತ್ತಿರವಾಗುತ್ತೆ ....
ಜೀವಕ್ಕೆ ಹತ್ತಿರವಾಗಿರೋದು
...................... ?
-
ಮೌನವಾಗಿರುವುದು ...
ಎಷ್ಟು ಒಳ್ಳೆಯದೋ..!!ಅಷ್ಟೇ ಕೆಟ್ಟದ್ದು ..!!
ಕೆಲ ಸಂದರ್ಭಗಳಲ್ಲಿ ನಾವು ತಪ್ಪೇ ಮಾಡದೇ ಇರುವಾಗ ಮಾತಾಡುವ ಅವಕಾಶ ಸಿಕ್ಕರು
ನಾವು ಮಾತಾಡದೇ ಇರುವುದು
ಆ " ಮೌನ " ಕೂಡಾ ನಮ್ಮನ್ನು
ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ ..-