ಶೀರ್ಷಿಕೆ: ಪ್ರಜಾಪ್ರಭುತ್ವದ ಕನಸುಗಾರ.
*************************
ನಾಯಕನವನು ರಾಜ್ಯದ ನಾಯಕ
ಜನರ ಒಗ್ಗೂಡಿಸುವುದವನ ಕಾಯಕ
ನಿಷ್ಠೆಯಿಂದ ಆಡಳಿತವ ನೀಡುವಾತ
ಛಲ,ಬಲದಿಂದ ಆಳ್ವಿಕೆ ನಡೆಸುವಾತ/
ಚಿಂತೆ ಕಳವಳವಿಲ್ಲದೆ ಅವ ಸಾಗುವನು
ಸಮಸ್ಯೆಯ ಪರಿಹರಿಸಲು ಹೊರಟನು
ಶಾಂತಿಯನ್ನು ಕಾಪಾಡಲು ಪಣತೊಟ್ಟ
ರಾಜ್ಯವನ್ನು ಉಳಿಸಲವ ಏರಿದ ಪಟ್ಟ/
ಅವನ ಆತ್ಮಸ್ಥೈರ್ಯದಿಂದ ಬಂದಿದೆ ಶಕ್ತಿ
ಜನರಿಗೆಲ್ಲಾ ಕೊಟ್ಟ ಸಮಸ್ಯೆಯಿಂದ ಮುಕ್ತಿ
ಉತ್ತಮ ಪ್ರಜಾಪ್ರಭುತ್ವ ನಾಯಕನಾದನವ
ಯಾರಿಗೂ ಕೆಡುಕನ್ನೆಂದಿಗೂ ಬಯಸದವ/
ಅತ್ಯುತ್ತಮ ಪ್ರಜಾಪ್ರಭುತ್ವದ ಕನಸುಗಾರ
ಜನರಿಗೆ ನೀಡುತ್ತಾ ಬಂದ ಒಳ್ಳೆ ಸಹಕಾರ
ಬಣ್ಣದ ಮುಖವಾಡವನ್ನವನು ತೊಡಲಿಲ್ಲ
ಜನರ ವಿಭಜನೆಯನ್ನು ಅವ ಬಯಸಲಿಲ್ಲ/
ಜನರ ಸೇವೆಯಲ್ಲಿ ನೆಮ್ಮದಿಯನ್ನೇ ಕಂಡ
ರಾಜ್ಯದ ಅಭಿವೃದ್ಧಿಗೆ ಅವನೆಂದೂ ಪ್ರಚಂಡ
ನಿಜವಾದ, ಧೀಮಂತ ನಾಯಕ ಅವನಾದ
ರಾಜ್ಯದ ಜನರಿಗೆಲ್ಲಾ ಅವನೇ ದೇವರಾದ/
— % &-
ಫಲಭೂತ
{View caption 🙏}
ಸುಡುಗಾಡ ಕಿಡಿತಂದು ಮನೆಯೋಲೆಯ
ನುರಿಸಿ ತಾ ತುತ್ತನ್ನವುಂಡನೆ ಹರಿಶ್ಚಂದ್ರ?
ಸುತಸತಿಯ ಮಾರಿ ತಾ ತನ್ನನ್ನೇ ಬೆಲೆಗೊಂಡು
ಸತ್ಯವದು ಸವಿಯೇಂದನೇ ಹರಿಶ್ಚಂದ್ರ.?-
ಅರಿವಿಲ್ಲದ ಆಯ್ಕೆಯೇ
ಅತಂತ್ರ ಆಡಳಿತಕ್ಕೆ ಅಡಿಪಾಯವಲ್ಲದೇ
ಅನಾಚಾರ ಅಕ್ಷಮ್ಯ ಅಪರಾಧಗಳ
ಒಪ್ಪುವಿಕೆಯ ಹಿಂದಪ್ಪುಗೆಯಾಗಿರುತ್ತದೆ..!
ಅಸಹನೆಯ ಆಳ್ವಿಕೆಯೇ
ಅಸಹಾಯಕ ಆಡಳಿತಾಗಾರರ
ಅವಶ್ಯಕ ಆಮಂತ್ರಣವಾಗಿರುತ್ತದೆ..!
ಅಂಧಕಾರಯುಕ್ತ ಪ್ರಗತಿಯೇ
ಆರಂಭಿಕ ಆನಂದಗಳ
ಆಡಂಬರೋಚಿತ ಜೂಟಾಟಿಕಾಧಿಪತ್ಯದ
ಅಧಿಕಾರದೊಳಗಣ ಆಂತರ್ಯವಾಗಿರುತ್ತದೆ..!!-
ಓ ಪ್ರೀತಿಯೇ...
ಎಲ್ಲರೂ ನಿನ್ ಮುಂದೆ
ಸೋಲ್ತಾರಂತ ಕೇಳಿನಿ...
ನೀ ಯಾಕ್ ಒಮ್ಮಿ
ಚುನಾವಣೆಗೆ ನಿಲ್ಬಾರ್ದು.?-
& ಬೀದಿದೀಪ &
ರಾಜನಾದವನು ತನ್ನ ರಾಜ್ಯವನ್ನು,
ರಾಜ್ಯದ ಪ್ರಜೆಗಳನ್ನು ಸುಭೀಕ್ಷೆಯಿಂದ
ಇರುವಂತೆ ನೋಡಿಕೊಳ್ಳಲು
ಅವಿರತ ಪ್ರಯತ್ನ ಮಾಡುತ್ತಿರುತ್ತಾನೆ.-
ರಾಜಕೀಯವು ಬಂಡವಾಳ ಹೂಡಿಕೆಯ ವ್ಯವಹಾರವಾಗುತಿದೆ ಇಂದು
ಮಾಲೀಕ-ಕಾರ್ಮಿಕರ ನಡೆಯು
ಪ್ರಜಾಪ್ರಭುತ್ವದ ಎದೆಯನ್ನೇ ಸೀಳುತ್ತಿದೆ-
ಎಷ್ಟೋ(ಎಲ್ಲ) ಜನರು ಎನೋನೋ ಬಯಸುತ್ತಿದ್ದಾರೆ ಆದರೆ ಅದೇ ಪ್ರಜಾಕೀಯಾ ಅನ್ನೋದು ಅವರಿಗೆ ಅರಿವಿಗೆ ಬರ್ತಿಲ್ಲ.
-