#ಅಮ್ಮ
ಸೆರಗಿನ ಗಂಟಲ್ಲೆ ಸೊರಗಿದ ಕನಸುಗಳ ಕಟ್ಟಿ ಕಾಪಿಟ್ಟು
ನನಸಾಗಿಸಲು ನೆಮ್ಮದಿಯ ಮೂಟೆಯ ಕಣ್ಣಿನ ಕಪಾಟಿನಲಿ
ಕಾಣದಂತೆ ಬಚ್ಚಿಟ್ಟವಳು
ಕರುಳ ಕುಡಿಗಳ ಕಷ್ಟಗಳಿಗೆ
ತನ್ನೊಳಗೆ ಕಂಬನಿಯ ಕುಯಿಲಿದ್ದರು
ನಸು ನಕ್ಕು ನಾನಿರುವೆ ಎನ್ನುವ
ಮಹಾ ಮಾಂತ್ರಿಕಳವಳು..-
ಸಖಿಯೇ..
ನಿನ್ನೀ ಅಧೀರ ನಯನಗಳ ಅನ್ವೇಷಣೆಗೆ ಸಿಕ್ಕೀತೇ ಅಂತರ್ಧಾನವಾದ ಆಗಂತುಕನಾ ಬಿಂಬವ
ಶೋಧಿಸದಿರು ನಿನ್ನೊಳಗೊಳಗೆ ಸಂಧಿಸದಿರು
ನೆನಪುಗಳ ಕುರುಹಿನ ಪ್ರಪಾತದೊಳಗಿನ ಪ್ರತಿಬಿಂಬವ..-
ಇವಳೇ..
ನೀನೆಷ್ಟೇ ಹುಡುಕಿದರೂ ಈ ಖಾಲಿ
ಫಕೀರನ ಜೋಳಿಗೆಯಲ್ಲಿ ಬೊಗಸೆ ಪ್ರೀತಿ
ಹಬೆಯಾಡುತ್ತಿರುವ ನೂರು ಕನಸಿನ
ಪೊಟ್ಟಣಗಳಷ್ಟೇ ನಿನ್ನೀ ನುಣುಪು
ಕೈಗಳಿಗೆ ಸಲೀಸಾಗಿ ಸಿಗೋದು
ಇಷ್ಟೇ ಥತ್ ಇಷ್ಟೇ ಹರುಕು ಜೋಳಿಗೆಯಿದು
ಏಷ್ಟು ಕಾಪಿಟ್ಟರು ಕಂಬನಿ ಝರಿಯಾಗಿ
ಎದೆಯ ಇಕ್ಕಲುಗಳ ಬಳಸಿ ನೆಲವನಪ್ಪುತಿಹುದು..-
ಒಮ್ಮೊಮ್ಮೆ ಬದುಕು ತೀರಾ ಶೋಚನೀಯ
ಇನ್ನೊಮ್ಮೆ ಮಲ್ಲಿಗೆ ಮೊಗ್ಗು ಬಿರಿದ ಘಮಲು
ಹೆಚ್ಚಾನೆಚ್ಚು ಗಡಿಯಾರದ ಮೊನಚಾದ ಮುಳ್ಳುಗಳು
ಸಮಯ ಗೋಚರಿಸಿದಕ್ಕಿಂತ ಚುಚ್ಚಿದ್ದೆ ಗುರುತು-
ಹುಂಬು ಮನದ ನಿರ್ವಿಕಾರ ಭಾವಗಳ ಬಲೆಯೊಳಗೆ
ಹೊನ್ನ ಸ್ವಪ್ನಗಳು ಕೂಡಾ ಬಂಧಿಯಾದ ಮತ್ಸ್ಯಗಳು
ಬೆಸ್ತನ್ಯಾರಿಲ್ಲಿ ಮನದಂಡಲೆಯ ಮುನ್ನೀರಿನಲಿ??-
ಕತ್ತಲೆತ್ತೆತ್ತಲು ಕಣ್ಣರಳಿಸಿರಲು ಛೇ ಇದೆಂಥಾ ಕನಸು!
ಈ ಇರುಳ ಬಾಳಿಗೆ ಬೆಳದಿಂಗಳ ಬೆಳಕೆ ಜೊತೆಗೂಡಿರಲು ಇನ್ನೇಲ್ಲಿ ಕತ್ತಲೆ; ಸುತ್ತಲೂ ಅವಳೊಲವ ಪ್ರಭೆಯ ಪ್ರಖರತೆಯಿರಲು..-
ಅನಧಿಕೃತ ಭಾವಗಳಿಂದಾಗಿದೆ ಹಾರ್ಟು ಎಕ್ಸ್ಟ್ರಾ ಸೈಜು
ಆನಂದವಾಗಿಡೋಕೆ ಅದ್ಕೂ ಮಾಡ್ಬೇಕೀಗಾ ಎಕ್ಸರ್ಸೈಜು-