Hhhhಥಡ
-
ಯಾವ ನೆನಪು ಎಸೆಯಲಿ
ಈ ಸಂಜೆ ಪ್ರಕೃತಿಯಲಿ
ಯಾವ ರೀತಿ ಸೋಲಲಿ
ಪಡೆಯಲು ನಿನ್ನ ಪ್ರೀತಿ!
ಕೊಟ್ಟ ಕಾಣಿಕೆ ನೆನಪು
ಉಳಿಯಲಿ ನಿನ್ನ ಮನದಲಿ
ಇಬ್ಬರು ಜೊತೆಗೂಡಿ ಆಡಿದ್ದು
ಮರೆತೆಯಾ ಜೋಕಾಲಿ!
ಮತ್ತೆ ತಿರುಗಿ ಬಂದಿದೆ ನೋಡು
ನಾಗರ ಪಂಚಮಿ ಮತ್ತೊಮ್ಮೆ
ಜೊತೆಗೂಡಿ ಆಡೋಣ
ಬಾರೇ ಜೋಕಾಲಿ!-
ಬಂದಿತು ಶ್ರಾವಣ ಮಾಸದ
ಮೊದಲ ಹಬ್ಬ ಅದುವೇ
ಶುಕ್ಲ ಪಂಚಮಿಯಂದು ನಾಗ
ದೇವನಿಗೆ ಹಾಲೆರೆವ ಹಬ್ಬ
ಅಣ್ಣ ತಂಗಿಯ ಅನುಬಂಧವ
ಮತ್ತಷ್ಟು ಬಿಗಿಗೊಳಿಸಿ ಭಕ್ತಿಯಲ್ಲಿ
ಕೈಜೊಡಿಸಿ ಹೂವಿಟ್ಟು ಪೂಜಿಸುವ
ರಕ್ಷೆಯ ಇತ್ತು ಕಾಪಾಡುವ ದೇವನಿಗೆ
ಅರಿಶಿಣ,ರಕ್ತ ಚಂದನದಿ ಮಣೆಯ
ಮೇಲೆ ನವನಾಗಗಳ ಚಿತ್ತಾರವ
ಚಿತ್ರಿಸಿ ಒಂದಾಗಿ ನಮಿಸುವ
ಸರ್ವರನ್ನೂ ರಕ್ಷಿಸೆಂದು
ಎಳೆನೀರು,ಹಾಲಿನ ಅಭಿಷೇಕ
ಮಾಡಿ ಬಣ್ಣ ಬಣ್ಣದ ಹೂವ
ಸುತ್ತೆಲ್ಲ ಹಾಕಿ ಸಿಂಗಾರವ ಹೆಡೆ
ಮೇಲೆ ಇಟ್ಟು ಕರಮುಗಿವ-
ಕಷ್ಟಗಳ ಪರಿಹರಿಸೋ
ಭಗವಂತನ ಶಕ್ತಿಯಿವನು..
ಶುದ್ಧ ಕ್ಷೀರಧಾರೆಗೆ ಒಲಿದು
ಬರೋ ದೇವಾಂಶನಿವನು..
ದೋಷಗಳ ನಿವಾರಿಸೋ
ದೋಷನಿವಾರಕನಿವನು..
ಹುತ್ತದಲಿ ನೆಲೆಸಿ ನಮ್ಮ
ಕಾಪಾಡೋ ನಾಗಪ್ಪನು..!🙏
✍️ಧನ್ಯ ನಾಯಕ್
-
🌺ನಾಗರ ಪಂಚಮಿ ಹಬ್ಬದ ಶುಭಾಶಯಗಳು🌺
🐍 ಶಿವನ ಕೊರಳಲಿ ಮೆರೆಯುವ ನಾಗರ 🐍
🤗ಹಾಲುಂಡ ಹರಸೆನ್ನ ತವರ🤗
ಅಡಿ ಬರಹದತ್ತ ನಿಮ್ಮ ಚಿತ್ತ
👇🏻👇🏻👇🏻-
ಬನ್ನಿರಿ ಗೆಳತಿಯರೇ
ಜೋಕಾಲಿ ಆಡೋಣ
ಆಡುತ್ತಾ ಹಾಡೋಣ
ಹಾಡುತ್ತಾ ಕುಣಿಯೋಣ..
ಬನ್ನಿರಿ ಗೆಳತಿಯರೇ
ನಾಗಕಟ್ಟೆಯ ಸುತ್ತೋಣ
ಹಾಲನ್ನು ಎರೆಯೋಣ
ಸಡಗರದಿ ನಲಿಯೋಣ..
ಬನ್ನಿರಿ ಗೆಳತಿಯರೇ
ಸಿಹಿಯನ್ನು ಮಾಡೋಣ
ಸಂತಸದಿ ಸವಿಯೋಣ
ಜೋಕಾಲಿ ಜೀಕೋಣ..-
*ನಾಗರ ಪಂಚಮಿ*
ಶ್ರಾವಣ ಮಾಸದ ಮೊದಲ ಹಬ್ಬ
ಮನೆಮಂದಿಯೆಲ್ಲಾ ನಾಗಕುಲವನ್ನು
ನೆನೆದು ಪಾಪಪುಣ್ಯದ ಫಲಾಪೇಕ್ಷೆಯಲ್ಲಿ
ತೆನೆಯೆರಿಯುತಾ ಮನೆಮಂದಿಯರೆಲ್ಲರು
ಪೂಜಾರಾಧನೆಯಲ್ಲಿ ಸಂಭ್ರಮಿಸುವ ಹಬ್ಬ
ಈ ನಾಗಪಂಚಮಿ/
ಶ್ರಾವಣದ ಸಿರಿಯ ಜೋಕಾಲಿ ಹಬ್ಬ
ಸೋದರಿಯರು ಸೋದರರಿಗೆ ರಕ್ಷೆಯ
ತಿಲಕವಿಟ್ಟು ಮಂಗಳಕರವನ್ನು ಹರಸುತಾ
ರಕ್ತಸಂಬಂಧವನ್ನು ಮತ್ತಷ್ಟು ಬೆಸೆದು ಸವಿ
ಸಿಹಿಯನ್ನು ಹಂಚುವ ಸ್ನೇಹದ ಹಬ್ಬ
ಈ ನಾಗಪಂಚಮಿ/
ಎಲ್ಲರಿಗೂ ನಾಗರ ಪಂಚಮಿ ಹಬ್ಬದ
ಶುಭಾಶಯಗಳು
- ಸುಧೆ ಸಂಪದೆ🍁
-
ಶಂಕರ
ನಿನ್ನ ಕೊರಳ ಹಾರ
ವಿಷನಾಗರ
ನೋಡಲು
ಅತಿ ಭಯಂಕರ
ಆದರೂ
ನಿನ್ನ ನೋಡಲು
ಭಕ್ತಿಯ ಜನಸಾಗರ
ನಿನಗೆ ಹಾಲೆರೆಯಲು
ಏನೋ
ಸಂಭ್ರಮ-ಸಡಗರ
-
ಶ್ರಾವಣ ಮಾಸದ ಮೊದಲ ಹಬ್ಬ
ಶುಕ್ಲ ಪಂಚಮಿಯಂದು ನಾಗದೇವರಿಗೆ ಹಾಲೇರುವ ಹಬ್ಬ
ಅಣ್ಣ ತಂಗಿಯ ಸಂಬಂಧವ ಬಿಗಿಗೊಳಿಸಲು ಆಚರಿಸುವ ಹಬ್ಬ
ಹೂವನ್ನ ಇಟ್ಟು ಭಕ್ತಿಯಿಂದ ಪೂಜಿಸಿ ಸೀಯಾಳ ಹಾಲು ನೈವಿಧ್ಯ ಇಟ್ಟು ರಕ್ಷೆಯ ನೀಡು ಎಂದು ನಾಗದೇವರ ಬೇಡುವ ಹಬ್ಬ
ಅರಸಿನದ ಚಿತ್ತಾರ ಅರಸಿನವೇ ಎಲ್ಲ ಕಡೆಯೂ ಅರಶಿನದ ಘಮ ಎಲ್ಲೆಡೆ ಘಮಿಸುವ ಹಬ್ಬ.
ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು-