ಜಗತ್ತಿನ ಆರಂಭವು ನೀನೇ,
ಅಂತ್ಯವೂ ನೀನೇ
ಲೋಕೋದ್ಧಾರಕ ನೀನೇ,
ಜಗತ್ತ ಕಾಯುವವನು ನೀನೇ
ನೋವ ನೀಡುವವನು ನೀನೇ ,
ಮಗುವಂತೆ ಸಲಹುವವನು ನೀನೇ
ಪ್ರೀತಿಗೆ ಗುರುವೇ ಶಿವ ನೀನೇ,
ಸಂಗಾತಿಯ ಸಾಂಗತ್ಯದೊಂದಿಗೆ
ಇಡೀ ಜಗತ್ತ ಕಾಯುವವನು ನೀನೇ
ಜಗತ್ತಿನ ಆರಂಭವು ನೀನೇ,
ಅಂತ್ಯವೂ ನೀನೇ!!
ಇನ್ನೇನಿದೆ ಶಿವ 🙏-
😍 "ತುಳುನಾಡ ಪೊನ್ನು" 😍
ಸ್ವಾಮಿ ಕೊರಗಜ್ಜ ದೈವ ಮತ್ತು ಚಾಮುಂಡೇಶ್ವರಿ ದೇವ... read more
ಚಂದ್ರನು ಪ್ರಜ್ವಲಿಸುತಿರುವನು ಹುಣ್ಣಿಮೆಯೆಂದು
ಚಂದ್ರನ,ಕೈ ಬೊಗಸೆಲಿ ಹಿಡಿಯಲು ಮನ ಹಾತೊರೆಯುವುದು ಇಂದು 🌝-
ಶ್ರಾವಣ ಮಾಸದ ಮೊದಲ ಹಬ್ಬ
ಶುಕ್ಲ ಪಂಚಮಿಯಂದು ನಾಗದೇವರಿಗೆ ಹಾಲೇರುವ ಹಬ್ಬ
ಅಣ್ಣ ತಂಗಿಯ ಸಂಬಂಧವ ಬಿಗಿಗೊಳಿಸಲು ಆಚರಿಸುವ ಹಬ್ಬ
ಹೂವನ್ನ ಇಟ್ಟು ಭಕ್ತಿಯಿಂದ ಪೂಜಿಸಿ ಸೀಯಾಳ ಹಾಲು ನೈವಿಧ್ಯ ಇಟ್ಟು ರಕ್ಷೆಯ ನೀಡು ಎಂದು ನಾಗದೇವರ ಬೇಡುವ ಹಬ್ಬ
ಅರಸಿನದ ಚಿತ್ತಾರ ಅರಸಿನವೇ ಎಲ್ಲ ಕಡೆಯೂ ಅರಶಿನದ ಘಮ ಎಲ್ಲೆಡೆ ಘಮಿಸುವ ಹಬ್ಬ.
ನಾಗರ ಪಂಚಮಿ ಹಬ್ಬದ ಹಾರ್ದಿಕ ಶುಭಾಶಯಗಳು-
ಎಷ್ಟೇ ಬೆಲೆ ಬಾಳುವ ಚಪ್ಪಲಿಯಾದರು ಅದರ ಸರಿಯಾದ ಜೋಡಿ ಇಲ್ಲದಿದ್ದರೆ ಅದು ಕಸದ ಬುಟ್ಟಿಯ ಪಾಲಾಗುವುದು, ಹಾಗೆಯೇ ಜೀವನದಲ್ಲಿ ಕೂಡ ಅರ್ಥೈಸಿ ಕೊಂಡು ಹೋಗುವ ಸರಿಯಾದ ಜೋಡಿ ಮುಖ್ಯ.
-
ತುಂಬಾನೇ ಖುಷಿಯ ಕೊಡುವ ವಿಷಯಗಳು ಕೂಡಾ ತುಂಬಾನೇ ದುಃಖ ನೀಡುತ್ತವೆ ಕೆಲವು ಸಂದರ್ಭಕ್ಕೆ ಅನುಗುಣವಾಗಿ.
ಕೆಲವು ಸಲ ಕೆಲವು ದುಃಖಗಳ ಸಂದರ್ಭ ಕೂಡಾ ಅತೀವ ನೋವು ನೀಡಿದರು ಮತ್ತೆ ನೆನಪಿಸಿಕೊಂಡಾಗ ಒಳ್ಳೇದೇ ನಡೆದಿದೆ ಎನಿಸುತ್ತದೆ ಸಂದರ್ಭಕ್ಕೆ ಅನುಗುಣವಾಗಿ.-
ಸಮಯ ಬಂದಾಗ ಅರ್ಥ ಮಾಡಿಕೊಳ್ಳುವ ಸಂಬಂಧಕ್ಕಿಂತ, ಸಮಯ ಕೊಟ್ಟು ಅರ್ಥ ಮಾಡಿಕೊಳ್ಳುವ ಸಂಬಂಧಗಳೇ ಅತಿ ಮುಖ್ಯವೆನಿಸಿಕೊಳ್ಳುತ್ತದೆ.
-
ಎಲ್ಲರೂ ಅವರ ಪರಿಸ್ಥಿತಿಗೆ ಅನುಗುಣವಾಗಿ ಯೋಚಿಸುತ್ತಾರೆ ವಿನಃ, ಇನ್ನೊಬ್ಬರು ಎಷ್ಟೆಲ್ಲಾ ನೋವು, ದುಃಖ ಅನುಭವಿಸಿದ್ದಾರೆ ಎಂದು ಯೋಚಿಸುವುದಿಲ್ಲ. ಅವರಿಗೆ ಆದ ಆಘಾತ ಯಾರಿಗೂ ಅರಿವಾಗುವುದಿಲ್ಲ ಇದು ವಿಪರ್ಯಾಸ.
-
ಜೀವನದಲ್ಲಿ ದೇವರ ಇಚ್ಛೆಯಂತೆ ಎಲ್ಲವೂ ಮೊದಲೇ ನಿರ್ಧಾರವಾಗಿರುವಾಗ ಪ್ರಶ್ನಿಸಲು ನಾವು ಯಾರು? ನೀವು
ಯಾರು?.
ಚಿಂತೆ ರಹಿತವಾಗಿ ,ಇನ್ನೊಬ್ಬರ ಬಗ್ಗೆ ಯೋಚಿಸದೆ ನಮ್ಮ ವಿಚಾರ ಅಷ್ಟೇ ನೋಡಿಕೊಂಡರೆ ಒಳಿತು, ಅಷ್ಟು ಇದ್ದರೆ ಕೆಡುಕು ಬಯಸುವುದಿಲ್ಲ ಯಾರು.
ಅಲ್ಲವೇ??-
ದೇವರಿಚ್ಛೆಯಂತೆ ನಡೆಯುತ್ತಿರುವುದು ಬದುಕು
ಏನೇ ಇರಲಿ,ಹೇಗೆ ಇರಲಿ ನೆಮ್ಮದಿ ಇದ್ದರೆ ಸಾಕು ಅಲ್ಲವೇ!!
ಬದುಕು ಸಾಗಲಿ ದೇವರ ಇಚ್ಛೆಗೆ ತಕ್ಕಂತೆ ಇನ್ನೊಬ್ಬರ ಬದುಕಿಗೆ ಭಾರವಾಗದೆ ನೆಮ್ಮದಿ ಕೆಡಿಸದೆ ಇದ್ದರೆ ಸಾಕಲ್ಲವೇ!!-
ನಮಗೆ ಒಳ್ಳೆ ಸಮಯ ಬಂದಾಗ ನಮ್ಮ ಹಿತಶತ್ರುಗಳು ಕಾಯುತ್ತಾ ಇರುತ್ತಾರೆ ಯಾವಾಗ ಖೆಡ್ಡಾಕ್ಕೆ ಬೀಳಿಸೋದು ಅಂತ , ಒಂದು ಬಾರಿ ಬಿದ್ದ ಹೊಂಡಕ್ಕೆ ತಿಳಿದು-ತಿಳಿದು ಮತ್ತೆ ಬೀಳಕ್ಕೆ ನಮಗೆ ಮತಿಭ್ರಮಣೆ ಆಗಿರಲ್ಲ ಅಲ್ವಾ.
-