ಅಜ್ಞಾನದ ಕತ್ತಲೆ ಕಳೆದು
ಜ್ಞಾನದ ದೀಪ ಎಲ್ಲರ ಮನ ಮನೆಗಳಲ್ಲಿ ಬೆಳಗಲಿ!
ಸುಜ್ಞಾನದ ಹೊಳೆ ಎಲ್ಲೆಡೆ ಹರಿಯಲಿ
ಎಲ್ಲರ ಬಾಳಲ್ಲೂ ಈ ದೀಪಾವಳಿ ಬೆಳಕ ನೀಡಲಿ!
ಕಷ್ಟದ ಕಗ್ಗತ್ತಲೆ ಕಳೆದು
ಸುಖ, ಸಂತೋಷ, ಶಾಂತಿ, ನೆಮ್ಮದಿ ತರಲಿ!
ಎಲ್ಲರಿಗೂ ಬೆಳಕಿನ ಹಬ್ಬ 🪔🪔🪔
ದೀಪಾವಳಿಯ ಶುಭಾಶಯಗಳು💐🚩
-
ಮನದ ಮಾತಿಗಿಲ್ಲಿ ಬೆಲೆ ಇಲ್ಲ
ಹಣದ ಹಿಂದೆ ಓಡುವವರೆ ಎಲ್ಲಾ
ಸಮಯಕ್ಕೆ ಗುಲಾಮರೆಲ್ಲ
ಅದನರಿಯದ್ದಿದ್ದರೆ ನಿನಗಿಲ್ಲಿ ಬೆಲೆಯಿಲ್ಲ!
"ಬದಲಾವಣೆ ಜಗದ ನಿಯಮ"
-
"ಅನು"ವಿನ ಅನುದಿನದ ಮಾತು.......!!
ಮನುಷ್ಯ ಹುಟ್ಟೋವಾಗಲೇ ಎಲ್ಲಾನೂ ತಿಳ್ಕೊಂಡು ಕಲಿತುಕೊಂಡು ಬಂದಿರುವುದಿಲ್ಲ....
ಕಾಲಕ್ಕೆ, ಸಮಯಕ್ಕೆ, ಪರಿಸ್ಥಿತಿಗೆ, ನಮ್ಮವರ ಬೇಕು ಬೇಡಗಳಿಗೆ ಅನುಗುಣವಾಗಿ ನಮ್ಮನ್ನು ನಾವು ಕೊಂಚವಾದರು ಬದಲಾಯಿಸಿಕೊಳ್ಳಬೇಕು....!
-
ಕಾಯುತಿದೆ ಮನ ಕಾತುರದಿ
ನೋಡುತ್ತಾ ನೀ ಬರುವ ಹಾದಿ!
ತವಕಿಸುತಿದೆ ಮನ ತನ್ಮನದ ಮಾತು ತಿಳಿಸಲು
ಕರಗಳು ಕಾಯಿತಿವೆ ನಿನ್ನ ಆಲಂಗಿಸಲು!
ಒಮ್ಮೆ ಬಂದು ನೋಡು ನನ್ನ ಚಡಪಡಿಕೆ
ನೀನೆ ಒಡೆಯ ನನ್ನ ಪ್ರೀತಿಯ ಹಂದರಕೆ!
ನೀನಿಲ್ಲದೆ ಬೇಡ ನನಗ್ಯಾವ ಸೂರು
ನೀ ಬಂದರೆ ಬಾಳೆಲ್ಲ ಹಚ್ಚ ಹಸಿರು!-
ಶುಭರಾತ್ರಿ......
ಕೆಲವೊಮ್ಮೆ ನಮ್ಮ ಮೌನವೇ
ಹೆಚ್ಚು ಅರ್ಥಪೂರ್ಣವಾಗಿರತ್ತೆ
ನಮ್ಮ ಮೌನವನ್ನು ಅರ್ಥ ಮಾಡಿಕೊಳ್ಳುವ
ಮನಸ್ಸು ನಮ್ಮದಾಗಿರಬೇಕು ಅಷ್ಟೆ!-
"ಅನು"ವಿನ ಅನುದಿನದ ಮಾತು....!!
ಕನಸಿರುವುದು ನನಸು ಮಾಡಲಿಕ್ಕೆ
ಎಂದಮೇಲೆ ಅದರೊಂದಿಗೆ ರಾಜಿ ಏತಕ್ಕೆ...!?
-
"ಅನು"ವಿನ ಅನುದಿನದ ಮಾತು....!!
ಕನಸು ಕಾಣುವುದರಲ್ಲೇ ಸಮಯ ಕಳೆದು ಹೋಗದಿರಲಿ
ಕನಸನ್ನು ನನಸು ಮಾಡುವ ಬಗೆ ತಿಳಿದಿರಲಿ!-
"ಅನು"ವಿನ ಅನುದಿನದ ಮಾತು......!!
ಸಾವನ್ನು ಗೆಲ್ಲಲು ಯಾರಿಂದನು ಸಾಧ್ಯವಿಲ್ಲ, ಸಾವನ್ನು ಗೆಲ್ಲುವ ಆಸೆ ಎಲ್ಲರಲ್ಲೂ ಇದ್ದೆ ಇರುತ್ತದೆ.
ಆದರೆ ಸಾವಿನ ನಂತರವೂ ಬದುಕಬೇಕೆಂದರೆ ಮಾಡಬೇಕಾದ್ದು ಇಷ್ಟೆ ಸತ್ಕಾರ್ಯಗಳನ್ನೂ ಮಾಡುತ್ತಾ ಹೋಗುವುದು....!!-
ನಮ್ ಜನ ಹೆಂಗೆ ಗೊತ್ತಾ....?!
ಬಡವರ ಮನೆ ಹೆಣ್ಣು ಮಕ್ಳು ಬಂಗಾರದ ಅಭರಣನೆ ಹಾಕ್ಕೊಂಡಿದ್ರು
ವಾವ್..... ಚನಾಗಿದೇ ಕಣೆ
ಎಲ್ ತಗೊಂಡೆ...?
ಎಷ್ಟ್ ಕೊಟ್ಟೆ....?
ಸೇಮ್ ಗೋಲ್ಡ್ ಇದ್ದಂಗೆ ಇದೆ ಕಣೆ ಅಂತಾರೆ😒😒
ಅದೇ ಶ್ರೀಮಂತರ ಮನೆ ಹೆಣ್ಣು ಮಕ್ಳು ರೂಲ್ಡ್ ಗೋಲ್ಡ್ ಅಭರಣನೆ ಹಾಕ್ಕೊಂಡಿದ್ರು
ವಾವ್.... ಚನಾಗಿದೇ ಇದೆ ಕಣೇ
ನ್ಯೂ ಡಿಸೈನ್ ಹಾ....?
ಎಷ್ಟ್ ಗ್ರಾಮ್ ಇದೆ....?
ನಂಗ್ ತುಂಬಾ ಇಷ್ಟ ಆಯ್ತಾ ಕಣೆ ಅಂತಾರೆ😏😏
-
"ಅನು"ವಿನ ಅನುದಿನದ ಮಾತು.......!!
ನಮ್ಮ ಒಳ್ಳೆತನ ಬಳಕೆ ಆಗೋದು ಸಮಯ ಸಾಧಕರ (ದುರ್ಜನರ) ಕೆಟ್ಟ ಕೆಲಸಗಳಿಗೆ...
(ನಮ್ಮ ಮುಗ್ಧತೆಯೇ ನಮ್ಮ ದೌರ್ಬಲ್ಯದಂತೆ ಕಾಣುತ್ತದೆ)-