ಎಲ್ಲರೂ ಹೇಳುವರಲ್ಲ...
"ಅಂದು ನಿನ್ನ ಪ್ರತಿ ಮೌನವೂ ನನ್ನ ಕೊಂದಿತ್ತು"
ಎಂದು, ಹಾಗಾದರೆ ಅವರಿಗೇನಾದರೂ ಸತ್ತ
ಮೇಲೂ ಮತ್ತೆ ಮತ್ತೆ ಬದುಕುವ ಸೂಪರ್
ಪವರ್ ಇದೆಯಾ?🤔-
ಮಳೆಗಾಲ...!!
ಕೆಲವರಿಗೆ ತೂಗುಯ್ಯಾಲೆಯಲ್ಲಿ ಕುಳಿತು ಬಿಸಿ
ಕಾಫಿ ಹೀರುತ್ತಾ ಮಳೆಹನಿಗಳ ಸುದ್ದಿಗೆ
ಕಳೆದೋಗಿಸುವ ಬೆಚ್ಚಗಿನ ಕಾಲ..!!
ಇನ್ನೂ ಕೆಲವರಿಗೆ ಅಲ್ಲಲ್ಲಿ ಸೋರುವ
ಹರುಕು ಮುರುಕು ಚಾವಣಿಗೆ ಸೀಟಿನ
ಅಲಂಕಾರ ಮಾಡುವ ಬಿಡುವಿಲ್ಲದ ಕಾಲ..!!-
ಸತ್ಯ ಮಿಥ್ಯಗಳ ಜಗದೊಳಗೆ
ಸತ್ಯವೆಂಬುವುದು ಅವನೊಬ್ಬನೆ,
ಆದಿ,ಅಂತ್ಯದ ನಡುವೆ ಕಾಲ್ಜಾರಿದಾಗ
ಕೈ ಹಿಡಿವವನು ಅವನೊಬ್ಬನೆ,
ಅತ್ತು ಬತ್ತಿದ ಕಣ್ಣಾಲಿಯಲಿ ನಗುವ
ಭರವಸೆ ಬಿತ್ತುವವನು ಅವನೊಬ್ಬನೆ,
ನಶ್ವರದ ಜಗದೊಳಗಿನ ಶಾಶ್ವತ
ಜೀವದ ಸಂಗಾತಿ ಅವನೊಬ್ಬನೆ.-
ನಮ್ಮಿಂದ ನೊಂದವರ ಶಾಪ
ನಮಗೆ ತಟ್ಟುತ್ತದಂತೆ..!!
ಹಾಗಾದರೆ ನನಗೂ ಒಂದಿಷ್ಟು ಶಾಪ
ತಟ್ಟಿರಬೇಕು, ಸುಮ್ಮನೆ ಹುಟ್ಟಿಸಿ
ಕಾರಣವಿಲ್ಲದೇ ಕೊಂದಿದ್ದ
ಒಂದಿಷ್ಟು ಕನಸುಗಳಿಂದ..!!-
ಅವನು ತಿಳಿ ನೀಲಿ ಬಣ್ಣದ ಆಗಸ
ಇವಳು ಗಾಢ ನೀಲಿಯ ಸಾಗರ
ನೋಟದಲ್ಲೆ ಪ್ರೀತಿಯ ವಿನಿಮಯ
ಅವರಿಬ್ಬರು ಒಂದಾಗದಿದ್ದರೇನಂತೆ
ಅವರ ಆ ನೀಲಿ ಬಣ್ಣದ ಪ್ರೀತಿ
ಒಂದಾಗಿಯೇ ಇರುವುದಲ್ಲವೆ?-
ಹುಟ್ಟು ಹಬ್ಬದ ಶುಭಾಶಯಗಳು ಮಹಿ 🤩🤩💙
ಪದಗಳು ಇವನೊಳಗೊ....
ಇವನೇ ಪದಗಳೊಳಗೊ...!!
ಅದೆಲ್ಲೆಲ್ಲಿಂದಲೋ ಅಕ್ಷರಗಳ ಹೆಕ್ಕಿ
ಮೊಗ್ಗಿನಂತೆ ಹೊಸ ಪದವ ಹಣೆದು
ಕಣ್ಸರಿಸದೆ ಕವನದಲಿ ಕಳೆದೋಗುವಂತೆ
ಮಾಡುವ ಜಾದುಗಾರ...!!
ಮಾತಿನಲ್ಲೇ ಮನದಂಗಳದಿ ಸ್ನೇಹದ
ಪರಿಧಿಯ ಹೆಣೆದು ಮನ ಕದಿವ ಕಳ್ಳ ಕಿಸ್ನ...!!
ನಿನ್ನೀ ಬಾಳಲ್ಲಿ ಹೊಸತೊಂತು ಚೈತ್ರದ
ಆಗಮನವಂತೆ, ವರುಷವೆಲ್ಲ ನಗುವ
ಹೊನಲು ತುಂಬಿರಲಿ, ರಾಶಿ ರಾಶಿ ಕವಿತೆಯ
ಸಾಲುಗಳು ಜೋಳಿಗೆಯ ತುಂಬಲಿ
ಅದೇ ತುಂಟಾಟ ಅದೇ ಮುದ್ದು ಮುದ್ದು
ಮಾತುಗಳು ಅದೇ ಗೆಳೆತನ ಸದಾ ಜೊತೆಗಿರಲಿ-
"ಜೀವನಪೂರ್ತಿ ಜೊತೆಗಿರುವೆ" ಎಂದಿದ್ದ
ಮಾತು ಬದಲಿಸ ಬೇಕಾಗಿದೆ ಹುಡುಗ...
"ಜೀವವಿದ್ದರೆ ಜೊತೆಗಿರುವೆ.."
ಮಾತು ಕೊಡಲೂ ಜೀವ ನಡುಗುತ್ತಿದೆ
ನೋಡು ಈ ಸಾವಿನ ವಸಂತದಲ್ಲಿ..!!-