ಸದಾ ನಗುವವರನ್ನು ನಗಣ್ಯವೆಂದು ಪರಿಗಣಿಸಬೇಡಿ;
ಹೆಚ್ಚು ನಗುವವರೇ ಆರೋಗ್ಯವಾಗಿರುವರು ಮರೆಯಬೇಡಿ!-
IN LIFE
even if we have nothing at all and if there is always a smile on our face it means that we are the richest and strongest persons in this world...
ಜೀವನದಲ್ಲಿ ನಮ್ಮ ಹತ್ತಿರ ಏನೂ ಇಲ್ಲದಿದ್ದರೂ ಮುಖದ ಮೇಲೆ ನಗುವೊಂದಿದ್ದರೆ ನಾವೇ ಈ ಜಗತ್ತಿನ ಅತಿ ಶಕ್ತಿಶಾಲಿ ವ್ಯಕ್ತಿಗಳು..ಅಲ್ವಾ ?-
**ಹೆಣ್ಣು**
ಅವಳೇ ಒಂದು ಗೊಂಬೆ
ಅವಳಿಗೊಂದು ಮರಿ ಗೊಂಬೆಯಂತೆ
ನಗುವೇ ಅವಳ ಒಡವೆಯಂತೆ ....-
ಹೆಸರಿನ ಜೊತೆ ಜೀವನದಲ್ಲಿ
ನನ್ನೊಡನಿರುವ ಆಸ್ತಿಯೆಂದರೆ
ನಗುವೊಂದೇ!
ಈ ನನ್ನ ನಗು ಹೇಗಿರಬೇಕೆಂದರೆ
ನೋವಿನಲ್ಲಿ ನರಳುತ್ತಿರುವವರು
ಸಹ ನನ್ನ ನೋಡಿ ನಗುವಂತೆ!
ದ್ವೇಷವೂ ನನ್ನ ನಗುವ ಕಂಡು
ಸೋತು ಶರಣಾಗುವಂತೆ!
ನನ್ನವರ ನೋವನ್ನು ಮರೆಸುವಂತೆ!
ಪ್ರತಿಯೊಬ್ಬರಲ್ಲೂ ನವ
ಉಲ್ಲಾಸವ ಚಿಮ್ಮಿಸುವಂತೆ!
ಗೊಂದಲಗಳ ನಡುವೆಯೂ
ಮಂದಹಾಸವ ಬೀರುವಂತೆ..!!-
ಯಾರ ಬದುಕು ಯಾರ ಕೈಯ್ಯೊಳು
ವಿಧಿಯು ಬರೆದ ಹಣೆಯ ಬರಹದಿ
ಇರುವ ಸಿರಿಯ ದೂರಸರಿಸುತ
ಬಾರದ ಭಾಗ್ಯವ ನೆನೆದು ಕನಲುತ
ಅನುಭವಿಸದಿರು ಗೋಳು
ನಗುತ ಎಲ್ಲರ ಜೊತೆ ನೀ ಬಾಳು...-
ನಿನ್ನ ನಗಿಸುವವರ ಮುಂದೆ
ಜೋಕರ್ ಆಗಿರು.😁
ನಿನ್ನ ಅಳಿಸುವವರ ಮುಂದೆ
ಸೂಪರ್ ಆಗಿರು.🥰
ಈ ಪಾಪಿ ಸಮಾಜದಲ್ಲಿ ಯಾವಾಗ್ಲು
ಟಾಪರ್ ಆಗಿರು.😎-
ಮಮತೆಯ ಮಡಿಲಲ್ಲಿ ಮಗು
ಅವಳ ಮೊಗದಲ್ಲಿ ತುಂಬಿತು ನಗು
ಪ್ರೀತಿಯ ನಿಸ್ವಾರ್ಥ ಭಾವ ತಾಯಿ
ದೇವರು ಕರುಣಿಸಿರುವ ಕರುಣಾಮಯಿ
ಇವಳಿಂದಲೇ ಮಕ್ಕಳೆಲ್ಲರೂ ಸುಖಮಯಿ.-
ಜೀವನದಲ್ಲಿ ನಗುವೇ ಮನುಷ್ಯನಿಗೆ ದೊರೆತ ಅದ್ಭುತವಾದ ಕಲೆ ಹಾಗಂತ
ಬೇರೆಯವರ ನೋವುಗಳನ್ನು ನೋಡಿ ಅವರನ್ನು ಹಿಯ್ಯಾಳಿಸಿ ನಗುವುದು ಅಲ್ಲಾ
ಯಾರಾದರೂ ಬೇಜಾರಲ್ಲಿ ಇದ್ದಾಗ ಅವರನ್ನು ನಗಿಸುವ ಕಲೆ ಗೊತ್ತಿರಬೇಕು-
Gd ಸಂಜೆ..
ನಿನ್ನ ನಗುವೇ ಯಾಕೋ ಇಂದು
ನನ್ನ ಮೌನಕೆ ತಳ್ಳಿದೆಯಲ್ಲ..
ಕಾರಣ ನನಗೆ ತಿಳಿಯಬೇಕೆಂದೇನಿಸಿದೆ
ಮತ್ತೊಮ್ಮೆ ನಾ ನಿನ್ನ ಈ ನಗುವ ಜೊತೆಗೂಡಲು...😍-