"To be 'CUNNING' with bad intention is neither knowledgeable
nor an intelligence,,,
But some 'IDIOTS' think so....."-
FAILURE IS AN ORPHAN"
ಸಣ್ಣ ಸಣ್ಣ ಕಾರಣಗಳಿಗೂ
ಖುಷಿಯಾಗಿರೋಣ..
ಕಾರಣ ಇಲ್ಲದೆಯೇ
ಖುಷಿಯಾಗಿರುವುದಕ್ಕೆ ಕಲಿಯೋಣ...
ನಮ್ಮ ಖುಷಿಗೆ ಕಾರಣ ಆಗುವರ ಜೊತೆ ಒಳ್ಳೆಯ
ಸಂಬಂಧ ಬೆಳೆಸೋಣ ....
ಆದರೆ, ನಮ್ಮ ದುಃಖಕ್ಕೆ ಕಾರಣವಾಗುವಷ್ಟು 'ಬಳಸುವ ಶಕ್ತಿ ಸಾಮರ್ಥ್ಯ' ಮತ್ಯಾರಿಗೊ ಧಾರೆ ಎರೆಯದಿರೋಣ .....-
"ಎಚ್ಚರಿರಬೇಕು ತುಚ್ಛ ನೀಚರ
ಬಚ್ಚಲು ಮನಸ್ಸನ್ನರಿತು,,,
ಎಮ್ಮ ಮನವ ನುಚ್ಚು ನೂರಾಗದಿರಲು..."-
"ಎಲ್ಲರ ಜೀವನದ ಮೇಣದ ಬತ್ತಿ ದಿನಾಲು ಕರಗಿ ಹೋಗುತ್ತದೆ..
ಕೆಲವರದು ಹನಿ ಹನಿಯಾಗಿ,
ಮತ್ತೆ ಕೆಲವರದು ರಭಸವಾಗಿ..."
ಕರಗುವುದು ಮಾತ್ರ ನಿಶ್ಚಿತ
ಎಂದು ತಿಳಿದು ಬಾಳಬೇಕು ಕೊರಗದೆ....-
ನಾ ಅನ್ನ ಹುಡುಕುತ,
ಜನ ನನ್ನ ಕೆಣಕುತ...
ಹೊಟ್ಟೆ ತುಂಬಾ ತಿನ್ನುವ
ಯೋಗ ನನಗಿಲ್ಲ,,,
ಅನ್ನ ಹಾಕುವ ಯೋಗ್ಯತೆ
ಮನುಷ್ಯನಿಗಿಲ್ಲ.....-
"ಸುಳ್ಳು ಮಾತು ಆಡುವವನೇ ಎಲ್ಲರಿಗಿಂತ ಬೆಸ್ಟು....
ಸಮಾಜವನ್ನು ಕೊಳ್ಳೆ ಹೊಡೆಯುವವನೇ ನಮ್ಮ ಕಾರ್ಯಕ್ರಮದ ಚೀಫ್ ಗೆಸ್ಟು...." ಏನಂತೀರಾ?? ಹೊಡಿರಿ ಚಪ್ಪಾಳೆ 😊😊-
"ಒಬ್ಬೊಬ್ಬರಿಗೆ ಒಂದೊಂದೇ ಸಾವು".... ಆದರೆ,,
ಈ ಸಾವಿಗಿಂತ ಮೊದಲಿನ ಎಲ್ಲಾ ದಿನಗಳು ನಮ್ಮ ಮರು ಹುಟ್ಟುಗಳಾಗಿರುತ್ತವೆ.. ಆದರೂ ಮೂರ್ಖರಾದ ನಾವು ಇಲ್ಲಸಲ್ಲದ ಚಿಂತೆ, ಕಷ್ಟಗಳನ್ನು ಸೃಷ್ಟಿಸಿಕೊಂಡು ದಿನಾಲು ಸಾಯುತ್ತೇವೆ.
ಅಹುದಲ್ಲವೇ ? 😊🙂-
"ಮರ್ಯಾದೆ ಇರದ ಕಡೆಗೆ ನಮ್ಮ ಪಾದವೂ ಇಡಬಾರದು. ಅದು ಇರುವ ಕಡೆಗೆ ಪದೇ ಪದೇ ಹೋಗಬಾರದು"
-
"ಕೆಲವು ಸಲ ನಮ್ಮ ವಿಷಯದಲ್ಲಿ ಜನ ಮಾಡುವ 'ಟಾಕ್ಸಿಕ್ ' ಲೆಕ್ಕಾಚಾರದಿಂದ, ನಾವು ಬೇಗ ಜಾಣರಾಗಬೇಕು, ಬೇಗ ಜಾಗೃತರಾಗಬೇಕು...."
-