ನಂಬಿಕೆಗೆ ಬಿದ್ದ ಪೆಟ್ಟು ಬಹಳ
ಯಾರನ್ನು ನಂಬಲಿ ಗಾಲಿಬ್
ಸ್ನೇಹದ ಹೆಸರಲಿ ವಂಚಿಸಿರಲು
ಎಲ್ಲರನ್ನೂ ಅನುಮಾನಿಸಿದೆ ಗಾಲಿಬ್-
ನಂಬಿಕೆಗಳೇ ಹೀಗೆ
ಆತ್ಮೀಯರಿಂದಲೇ ಹುಸಿಯಾಗುತ್ತವೆ...
ಹತ್ತಿರದವರಿಂದಲೇ
ಮನಸಿಗೆ ಮೋಸವಾಗುತಿದೆ...
ಬಯಸಿದ ಬಯಕೆಗಳೇ
ಒಡೆದು ಭ್ರಮೆಯಾಗಿ ಕಾಡುತ್ತವೆ...
-
ಸುಳ್ಳು,
ಮನಸ್ಸಿನ ಪರದೆಯ ಮೇಲೆ ಅಡ್ಡ ಗೆರೆಗಳನ್ನು
ಎಳೆದುಕೊಂಡು ಉಸಿರುಗಟ್ಟಿ ನಿಲ್ಲುವ ಹುಚ್ಚುತನ....-
ತನ್ನನ್ನು ತಾನು ಉತ್ತಮನೆಂದು
ಬಿಂಬಿಸಿಕೊಳ್ಳುತ್ತ ಪ್ರತಿ ಹೆಜ್ಜೆಯಲ್ಲೂ
ಮೋಸ ಮಾಡುತ್ತಿದ್ದರೂ ಅರಿವಾಗಲೇ ಇಲ್ಲ
ನನಗೆ.... ಅಷ್ಟೊಂದು ನಂಬಿಕೆಯಿಟ್ಟಿದ್ದೆ
ಆ ನಂಬಿಕೆದ್ರೋಹಿಯ ಮೇಲೆ-
ಕೊನೆಗೂ ಒಂದೊಂತೂ
ಅರ್ಥ ಆಯಿತು
ಕೊನೆವರೆಗೂ ಯಾರೂ
ನಮ್ಮ ಜೊತೆ ಇರಲ್ಲ ಅಂತ ...-
ಯಾರೋ ಪ್ರೀತಿಸಿ ನಂಬಿಕೆ ದ್ರೋಹ
ಮಾಡಿದರೆಂದು ದೂಷಿಸಿ
ಸಾವಿಗೆ ಶರಣಾಗುವ ಯುವ ಪೀಳಿಗೆ
ತಿಳಿಯುವುದಿಲ್ಲವೇಕೆ ಅವರಿಗೆ
ಅವರೂ ಅದೇ ನಂಬಿಕೆ ದ್ರೋಹ
ಮಾಡಿದರೆಂದು ತಮ್ಮ ಪೋಷಕರಿಗೆ.-
ಹಿಂದೊಮ್ಮೆ ನಿನ್ನ ಪ್ರೀತಿಯೆಂಬ ವೈರಸ್ ತಾಗಿ ಭಾವನೆಗಳಿಗೆ ಜ್ವರ ಬಂದಿತ್ತು,
ಈಗ ನೀ ಮರಳಿಬಂದು ಕಾಡಿ ಬೇಡಿದರೂ ಭಾವನೆಗಳು ಪ್ರತಿಕ್ರಿಯಿಸದು.
ಯಾಕೆ ಗೊತ್ತಾ...
ನಂಬಿಕೆಗೆ ಮಾಸ್ಕ್ ಹಾಕಿದ್ದೇನೆ;
ನಂಬಿ ಮೋಸ ಹೋಗಬಾರದೆಂಬ ವ್ಯಾಕ್ಸಿನ್ ಅನ್ನೂ ಹಾಕಿಸಿಕೊಂಡಿದ್ದೇನೆ;
ಹೃದಯಕ್ಕೆ ನೀ ತಾಗಬಾರದೆಂದು ಪ್ರತಿದಿನವೂ ಸ್ಯಾನಿಟೈಸರ್ ಕಡ್ಡಾಯವಾಗಿದೆ.-