ಮುದ್ದು💞ಅಚ್ಚು   (ಮುದ್ದು ಅಚ್ಚು)
210 Followers · 49 Following

read more
Joined 21 May 2020


read more
Joined 21 May 2020

ಹೆಜ್ಜೆ ಗೆಜ್ಜೆಗಳ ನಿನಾದದಲಿ......
[READ CAPTION]

-




💞 ಅಪ್ಪ ಎಂಬ ಅದ್ಭುತ 💞



[Read Caption👇]

-



ಕೆಂಡದಂತೆ
ಸುಡುತಿದ್ದ
ನೋವುಗಳ
ನಡುವೆ ಸಿಲುಕಿ
ಸತ್ತ ಭಾವನೆಗಳ
ಬೂದಿಯನು
ತೇಲಿ ಬಿಡಲು
ಮನವೀಗಷ್ಟೇ
ಹೊರಟಿದೆ
ನೆನಪಿನ
ದೋಣಿಯಲ್ಲಿ..!!

-



ಜೀವನದಲ್ಲಿ ಸೋಲು ಕೂಡ ಒಂದು ಪರೀಕ್ಷೆಯೇ...!!
ನಾವದನ್ನು ಹೇಗೆ ಎದುರಿಸುತ್ತೇವೆ ಎನ್ನುವುದರ ಮೇಲೆ ಅದರ ಫಲಿತಾಂಶವು ನಿಗದಿಯಾಗತ್ತದೆ.

-



ಸೋಲು ಹಾಗೂ ನೋವನ್ನು ಎಂದು ನಾವು ನಗುವಿನೊಂದಿಗೆ ಸ್ವೀಕರಿಸುತ್ತೇವೆಯೋ ಅಂದೇ ನಮ್ಮ ಭವಿಷ್ಯದ ಗೆಲುವಿನ ಮುನ್ನುಡಿಯು ಅಚ್ಚಾಗುತ್ತದೆ.

-



ಆಸೆಯೇ ದುಃಖಕ್ಕೆ ಮೂಲವೆನ್ನುತ್ತ ದುರಾಸೆಯನ್ನೇ ಮನದಿ ತುಂಬಿಕೊಂಡು, ಅಸೂಯೆ ಒಳ್ಳೆಯದಲ್ಲವೆನ್ನುತ್ತಲೇ ಇನ್ನೊಬ್ಬನ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಡುತ್ತಾ, ಇತರರನ್ನು ಎಂದಿಗೂ ನೋಯಿಸಬೇಡವೆನ್ನುತ್ತಲೇ ಮಾನವೀಯತೆಯನ್ನು ಮರೆತವರೆಲ್ಲರೂ ಕೂಡ ಇಲ್ಲಿ ಬುದ್ಧರೇ...!
ಆಧುನಿಕ ಬುದ್ಧರು..!!

-



ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಅತಿಯಾಗಿ ಯೋಚಿಸುತ್ತಾ ಕುಳಿತರೆ ಮನಸ್ಸು ಖಿನ್ನತೆಯತ್ತ ಜಾರುತ್ತದೆಯೇ ಹೊರತು ಸಮಸ್ಯೆಗೆ ಪರಿಹಾರ ದೊರಕುವುದಿಲ್ಲ.

-



ಬದಲಾಗಬಹುದು ನಾನು
ನೀವೂ ಬದಲಾಗುವಿರೇನು..??

[READ CAPTION]

-



ಮನಸ್ಸು ಕಂಡ ಕನಸನ್ನು ನನಸಾಗಿಸಿ
ತನ್ನ ಜೀವನವ ತಾನೇ
ರೂಪಿಸಿಕೊಳ್ಳಬೇಕೆಂದು ಬಯಸಿದವಳ
ಸಾಧನೆಯ ಹಾದಿಗೆ
ಮದುವೆಯೇ ಮುಳ್ಳಾದಾಗ....

-



ಗುರಿಯೆಡೆಗೆ ಸಾಗುವ ದಾರಿಯಲ್ಲೆದುರಾಗುವ ಸೋಲು,ನೋವುಗಳಿಂದಲಿ ಹರಿವ ಕಣ್ಣೀರನ್ನು ಮನದಿ ನೆಟ್ಟಿರುವ ನಿನ್ನ ಕನಸಿಗೆ ಧಾರೆಯೆರೆದು ಬಿಡು. ಸಾಗುವ ದಾರಿಯಲ್ಲಿ ಗೆಲ್ಲಲೇ ಬೇಕೆನ್ನುವ ಛಲ ಇನ್ನಷ್ಟು ಹೆಚ್ಚಾಗುತ್ತದೆ.

-


Fetching ಮುದ್ದು💞ಅಚ್ಚು Quotes