ಅವನೊಬ್ಬ ಮಾತುಗಾರ, ಮಾತಿಗೆ
ನಿಂತರೆ ಧ್ವನಿವರ್ಧಕಗಳ ಅವಶ್ಯಕತೆ ಬಾರದು;
ಪ್ರೀತಿಯನ್ನು ಮಾತ್ರ ಕಿರುಧ್ವನಿಯಲ್ಲಿ ಪಿಸುಗುಟ್ಟಿದ.-
ಕುಂದಾಪ್ರ.....❤️
ಹೌದೂ...
ನಿನ್ನ್ ಪ್ರೀತಿಯಲಿ ಸ್ವಾರ್ಥಿ ನಾ....
ಪೂರ್ತಿ ಪ್ರೀತಿ ನಂಗೇ ಬೇಕು,
ಹನಿಯಷ್ಟೂ ಆಚೀಚೆ ಆಗಬಾರದು.-
ನೀ ನನ್ನ ಕನ್ನಡಿಯಂತೆ...
ಹೆಸರಿಟ್ಟ ಕತೆಯಿಂದ ಹಿಡಿದು ಉಸಿರುಗಟ್ಟಿಸಿದ ವ್ಯಥೆಗಳೊರೆಗೆ ಬಲ್ಲ,
ನಿನ್ನೆ ಮೊನ್ನೆಯ ಎಡವಟ್ಟುಗಳಿಂದ ಹಿಡಿದು ನಾ ಕಟ್ಟಿದ ಕನಸುಗಳೊರೆಗೆ ಬಲ್ಲ,
ನೀ ನನ್ನ ಕನ್ನಡಿಯಂತೆ,
ನೀ ನನ್ನ ನಿಲುವುಗನ್ನಡಿಯಂತೆ.....-
ಒಲವೊಂದು ಅತಿಯಾಗಿ,
ನಡುರಾತ್ರಿಯಲಿ ನೀ ನೆನಪಾದಾಗ,
ಅರೆ ಮುಚ್ಚುತ್ತಿದ್ದ ಕಂಗಳಲಿ....
ಜೊತೆ ಕಳೆದ ದಿನಗಳು,
ನೀನಾಡಿದ ಮಾತುಗಳು,
ಕಾಳಜಿಯ ಕಣ್ಣೀರು,
ತಡರಾತ್ರಿಯ ತುಂಟ ಜಗಳ,
ಸಾಲು ಚಿತ್ರಗಳಿಗೆ ಕೊನೆಯಿಲ್ಲ ಹುಡುಗಾ......-
ಅವನು ಒಲವ ಬೇಲಿ ಹಾಕಿದ್ದಾನೆ!!
ಯಾರ ಕಣ್ಣ ದೃಷ್ಟಿಯೂ ಬೀಳದಂತೆ,
ಮತ್ಯಾರ ಕಡೆಗೂ ಹೃದಯ ವಾಲದಂತೆ,
ಇನ್ಯಾವುದರ ಯೋಚನೆಯೂ ಬಾರದಂತೆ,
ಆಕರ್ಷಣೆಗಳತ್ತ ಮನಸ್ಸು ಜಾರದಂತೆ,
ಬೇರಾವ ಕನಸೂ ಕಾಣದಂತೆ,
ನೆನೆದು ನೆನೆದು ನಾಚುವಂತೆ,
ಭೇಟಿಗಾಗಿ ಹಾತೊರೆಯುವಂತೆ,
ಮಾತಿಗಾಗಿ ಕಾಯುವಂತೆ,
ಅವನೊಲವ ಬೇಲಿ ಹಾಕಿದ್ದಾನೆ!!.-
ಅವ್ರ್ಗೆಲ್ಲಾ ನಿಯತ್ತು ಅನ್ನೋ ಪದದ್ ಅರ್ಥನೇ ಗೊತ್ತಿಲ್ಲ,
ನಾಲಕ್ಕ್ ದಿನ ಅವ್ರ್ ಜೊತೆ, ನಾಲಕ್ಕ್ ದಿನ ಇವ್ರ್ ಜೊತೆ,
ನಿನ್ನೆ ಮೊನ್ನೆ ಹಂಗಲ್ಲ ಆಡ್ಕೋಬಾರ್ದು ಅಂದ್ರು ಅವ್ರಿರ ಬಗ್ಗೆ ಆಡ್ಕೊಂಡು ನಮ್ಮ್ ಜೊತೆ ಇದ್ದೋರು,
ಇವತ್ತು ಅವ್ರಿರ ಜೊತೆ ಇದ್ಕೊಂಡು ನಮ್ಮ್ ಬಗ್ಗೆ ಆಡ್ಕೊಳ್ಳೋದು. ಎಂಥ ಜನ್ಮ!!👏👏-