ಟೀ ಜೊತೆ ಬಿಸ್ಕೆಟ್ ಓಕೆ
ಹಾಗೇ ಬ್ರೆಡ್ಡು ಬನ್ನು ಓಕೆ
ತಿಂಡಿನೂ ಓಕೆ ಸರಿ
ಆದ್ರೆ ಟೀ ಜೊತೆ ಸಿಗರೇಟು ಯಾಕೇಂತ
ಇವತ್ತಿನ್ ತನ್ಕ ಗೊತ್ತಾಗದೆ ಇರೋ combination!-
ನಿನ್ನ ಜೊತೆ ಚಹಾ ಕುಡಿಯುವಾಗೆಲ್ಲ,
ಗರಿಕೆ ಹುಲ್ಲಿನ ಮೇಲೆ
ಹೊಳೆವ ಇಬ್ಬನಿಯಂತೆ
ಮೋಡದ ಮರೆಯಲಿ
ನಗುವ ಸೂರ್ಯನಂತೆ
ಚಂದಿರನ ಬೆಳಕಿಗೆ
ಅರಳುವ ನೈದಿಲೆಯಂತೆ ಭಾಸವಾಗುವುದು!!-
ನೀನ ವಿಶೇಷ
ನೀನಂದ್ರನ ಸಂತೋಷ
ನಿನೊಂತರ ತೀರದ ಬಯಕೆ ಇದ್ದಾಂಗ
ನಿನ್ನೊಮ್ಮೆ ಕೈಯಲ್ಲಿ ಹಿಡಿದರೆ ಸಾಕು,
ಸಿಕ್ಕಂತೆ ನೋಡು ಮನ್ಸಿಗೆ ಸಮಾಧಾನದ ಸಂದೇಶ-
ಅವ್ರ್ ಮನೇಲಿ ಯಾವಾಗ್ಲೂ 'ಟೀ' ಮಾಡ್ತಾರೆ ಅಂತ ಅವ್ನ್ಯಾರೊ ಬರ್ಗೆಟ್ಟೌನು,
ನನ್ ಪೋಸ್ಚ್ಗಳನ್ನ 'ಕಾಪಿ' ಮಾಡೌನೆ.-
❤ವಿಶ್ವ ಚಹಾ ದಿನ❤
☕ಚಹಾ ಎಂದರೇ ಸಕ್ಕರೆಯ ಸಿಹಿಪಾಕವಲ್ಲ☕
☕ಕೇವಲ ಕ್ಷೀರರೂಪ ಧರಿಸಿದ ದ್ರವವೂ ಅಲ್ಲ☕
☕ದಿನ ಮುಂಜಾನೆ ಹರ್ಷ ನೀಡೋ ಜೇನಹನಿ☕
☕ಮುಸ್ಸಂಜೆ ಹಿತತರೋ ತಂಗಾಳಿಯ ಮಳೆಹನಿ☕
☕ಪ್ರತಿ ಹೆಜ್ಜೆಯ ಹಿಂಬಾಲಿಸಿ ಸೆಳೆಯೋ ಸ್ನೇಹಬಂಟ☕
☕ಬೇಸರದಿ ಕುಳಿತ ಮನಕ್ಕೆ ಒಂದಾದ ಪ್ರೇಮನಂಟ☕
☕ಏಕಾಂತದಿ ಜಪಿಸೋ ಗುಪ್ತಭಾವನೆಗಳ ಮೆಲುಕು☕
☕ಬಯಸಿದಾಗ ದೊರಕೋ ದಿವ್ಯೌಷಧದ ಸರಕು☕-
ತುಂಬಾ ದಿನದ
ನಂತರ ಅದೇ
ಗುಂಡಿಗೆಯ ಹಳೇ
ಹುಡ್ಗಿ ನೋಡ್ದಗ
ತುಂಬಾ ಹಸಿವಿನಿಂದ
ಇದ್ದಾಗ,
ಟೀ, ಜೊತೆ ಬ್ರೆಡ್ ತಿಂದಷ್ಟೇ
ಖುಷಿಯಾಯ್ತು...-
ಹೀಗೆ ನಗುತ್ತಾ ನೀವು ಸಕ್ಕರೆ
ಹಾಕದೆ ಹೋದರೆ ಟೀ ಗೆ
ಮನೆಗೆ ಬಂದು ಟೀ ಕುಡಿದ
ಅತಿಥಿಗಳ ಮುಖವಾಗುತ್ತೆ ಸಪ್ಪಗೆ-
ಬಿಸಿ ಬಿಸಿ ಟೀ
ಹಸಿ ಹಸಿ ಮನಸನ್ನ
ಖುಷಿ ಖುಷಿ ಪಡಿಸಿದೆ...!
ಬನ್ನಿ ಟೀ ಕುಡಿಯೋಣ😍 😍-