ನೇತ್ರಾವತಿ ಸೊಗಲದ   (ನೇತ್ರಾವತಿ ಸೊಗಲದ)
543 Followers · 113 Following

Joined 3 August 2019


Joined 3 August 2019

ಅಳುವಿನ
ಅಂತ್ಯವಾಗಿ..
ಆನಂದದ
ಆರಂಭವಾಗಲಿ..
ಅನುದಿನವನ್ನು ಆರಾಧಿಸುತ್ತಾ ಸಾಗೋಣ ..
ನೋವು ಕೂಡ ಮಾಯವಾಗಿ ನಗು ಮೂಡುವ ಹಾಗೆ....
ಬದುಕೋಣ ಕಂಡ ಕನಸುಗಳೆಲ್ಲ ಈ ಹೊಸ ವರುಷದಲ್ಲಿ ನನಸಾಗುವ ಹಾಗೆ...
ಹೊಸ ಭರವಸೆಯೊಂದಿಗೆ ಸಾಗಲಿ ಬದುಕು
ಹೊಸ ವಷ೯ ತರಲಿ ಎಲ್ಲರ ಬಾಳಲ್ಲಿ ಬೆಳಕು

ಹೊಸ ವರ್ಷದ ಶುಭಾಶಯಗಳು
💐💐💐💐💐💐💐💐💐

-



ನಿಷ್ಕಲ್ಮಶ ಮನದ ಮಗುವಿನಂತೆ
ಮುಗ್ಧತೆ ತುಂಬಿದ ನಗುವಿನಂತೆ
ಕಷ್ಟದಲ್ಲಿಯೂ ನಲಿವು ಮೂಡಿಸುವಂತೆ
ಪ್ರೀತಿಯಿಂದಲೇ ದ್ವೇಷ ಮರೆಯಾಗುವಂತೆ
ಏನೇ ಆದರೂ ಛಲ ಬಿಡದೇ ಗುರಿ ತಲುಪುವಂತೆ
ಬಾಳ ಕತ್ತಲೆ ಕಳೆದು ಬೆಳಕು ಪಸರಿಸುವಂತೆ
ಮನೆ ಮನಗಳಲ್ಲಿ ನಲ್ಮೆಯ ದೀಪ ಬೆಳಗಿ
ಈ ದೀಪಾವಳಿ ಬದುಕಲಿ ಹೊಸ ಮೆರಗು ತರಲಿ

ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು

-



ಬಂಧಗಳೆಂಬ ಮಣ್ಣಿನಿಂದ
ಸಂಬಂಧಗಳ ಹಣತೆ ಮಾಡಿ
ವಾತ್ಸಲ್ಯ ಮಮಕಾರದ ಬತ್ತಿ ಹೊಸೆದು
ಅಂಧಕಾರ ಕೋಪ ತಾಪಗಳೆಂಬ ಕತ್ತಲೆಯ
ಹೋಡೆದೊಡಿಸಲು ಪ್ರೀತಿಯೆಂಬ
ದೀಪವನ್ನು ಮನೆ ಮನಗಳಲ್ಲಿ
ಬೆಳೆಗಿಸಿ ದೀಪಾವಳಿಯ ದೀಪಬೆಳಗಿ
ಬರುವ ಬದುಕನ್ನು ಬೆಳಕಾಗಿಸಿ
ಇನ್ನೊಬ್ಬರ ಜೀವನಕ್ಕೆ ಬೆಳಕು ನೀಡುವ
ಭರವಸೆಯ ದೀಪವಾಗಿ

ದೀಪಾವಳಿ ಹಬ್ಬದ ಶುಭಾಶಯಗಳು

-



ಬದುಕಲ್ಲಿ ಏನ ಇದೆ....

ಬದುಕಲ್ಲಿ ಏನೇಲ್ಲಾ ಇದೆ‌....

ಇವು ಎರಡರಲ್ಲಿ ಒಂದು ಅಥ೯ ಆದ್ರೂ
ಸಾಕು ಸಂತೋಷದ ನೆಮ್ಮದಿಯ
ಬದುಕು ಬದುಕಲು

ಶುಭರಾತ್ರಿ

-



ಬರೆಯಲೇಬೇಕೆಂದು
ಶಪಥ
ಮಾಡಿಕೊಂಡಿದ್ದೆ
ನಿಮಗಾಗಿ
ದಿನಕ್ಕೊಂದು
ಒಲವಿನ
ಕವಿತೆ....
ಪದಗಳಿಗೂ
ವಣಿ೯ಸಲು
ಅಸಾಧ್ಯವಾದ
ನಿಮ್ಮ ಒಲವಿಗೆ
ನಾ ಸೋತು
ಬರೆಯುವುದನ್ನೇ
ಮರೆತೆ....

-



ಏನೇ ಬಂದರೂ ಸದಾ
ನಗು ಮೊಗದಿ ಎಲ್ಲವನ್ನೂ
ಸ್ವೀಕರಿಸಿ ಸೋಲು ಕೂಡ
ಸೋಲನ್ನು ಒಪ್ಪಿಕೊಳ್ಳುವಂತೆ
ಮಾಡುವ ಛಲಗಾರ....

ಇರುವುದೊಂದೇ ಬದುಕು
ಇರುವಷ್ಟರಲ್ಲಿಯ ಸಂತೋಷ
ಕಾಣಬೇಕೆನ್ನುವ ಮಾತನ್ನು
ತಪ್ಪದೇ ಪಾಲಿಸಿ ಪ್ರತಿ ಕ್ಷಣವನ್ನೂ
ಪ್ರೀತಿಸಿ ಆರಾಧಿಸುವಂತ
ನಲ್ಮೆಯ ಸೋದರ....

ನಿನ್ನ ಆಸೆ ಕನಸುಗಳೆಲ್ಲಾ
ಆದಷ್ಟು ಬೇಗ ನನಸಾಗಲೆಂದು
ಹಾರೈಸುವೆ ಹ್ಯಾಪಿ ಬರ್ತಡೇ
ಡಿಯರ್ ಬ್ರದರ್ ರೋಹಿತ್
Be Happy forever
💟💟💟💟💟💟💟💟

-



ನಲ್ಮೆಯ ಸ್ನೇಹಜೀವಿ ಗೀತಾ
ಮಾತು ಕೇಳಿದಂತೆ ಸಂಗೀತ
ಸಹಾಯ ಮಾಡುದ್ರಲ್ಲಿ ಮುಂದು
ನಿನ್ನ ಸ್ನೇಹ ಶಾಶ್ವತ ಎಂದೆಂದೂ

Happy Friendship Day dear
Be Happy forever 💟💟

-



ಅಕ್ಕಾ ಎನ್ನಲಾ
ಇಲ್ಲಾ
ಅಮ್ಮ ಎನ್ನಲಾ
ಅಥವಾ
ಅತ್ತೆ ಎನ್ನಲಾ
ಇಲ್ಲಾ
ಸ್ನೇಹಿತೆ ಎನ್ನಲಾ
ಇವೆಲ್ಲವೂ ನೀನೇ ಆದ ನನಗೆ
ನನ್ನ ಅಂಧಕಾರ ತುಂಬಿದ
ಮನವ ಬೆಳಗುವ "ದೀಪಾ"
ಏನೆ ಆದರೂ ಸದಾ ಜೊತೆಗೆ ಇರುವ
ನೀನೇ ಸ್ನೇಹದ ಪ್ರತಿರೂಪ
💟💟💟💟💞💞💞💟💟💟💟

-



ಮಿನುಗುತ್ತಿವೆ ಮೂಗಿನ ನತ್ತು
ಮೊಗದಲ್ಲಿದೆ ಒಂದು ಗತ್ತು
ಇವರ ಪ್ರೀತಿಯೇ ನಮಗೆ ಸ್ವತ್ತು
ಇವರೇ ನಮ್ಮನೆಯ ಮುತ್ತು

ಮಾಡ್ತಾರೆ ಇಬ್ಬರು ಆಗಾಗ ಡವ್
ಆದರೂ ಇವ್ರ ಮೇಲೆ ಜಾಸ್ತಿ ಲವ್

ಮುದ್ದು ಪೆದ್ದು ಸೊಸೆ ರಾಣಿಯರು
💟💟💟💟💞💞💞💞💟💟💟💟
ಅಕ್ಕಾ ಸಮನ್ವಿ ತಂಗಿ ಸ್ವಪ್ನಾ ❤❤

-



ಬಂಧಗಳಲ್ಲಿ seriousness ಇಲ್ಲದ ಕಾರಣ
ಭಾವನೆಗಳೆಲ್ಲ Business ಗಳಿಗೆ ಸೀಮಿತವಾಗಿ
ಮೂಡುತ್ತಿದ್ದ Happiness ಮಾಯವಾಗಿ
ಬದುಕು tension ನಿಂದಾಗಿ Loss ಆಗ್ತಿದೆ

-


Fetching ನೇತ್ರಾವತಿ ಸೊಗಲದ Quotes