HIT MAN   (ನಾಗರಾಜು ಎ.ಎಂ ✍️)
409 Followers · 70 Following

read more
Joined 4 April 2020


read more
Joined 4 April 2020
15 AUG 2022 AT 12:52

ಅವಳ ನೆನಪುಗಳಿಂದಲೇ ಮನಸು ಮರುಗುತಿಹುದು
ಉತ್ತರ ಸಿಗದ ಪ್ರಶ್ನೆಗಳಿಂದ ಸದಾ ಕೊರಗುತಿಹುದು..!

-


16 JUN 2022 AT 6:44

ಒಂಟಿಯಾದಗಲೇ ಎಲ್ಲಾ ಜವಾಬ್ದಾರಿಗಳು,
ಎಲ್ಲರೂ ಏನೆಂದು ಅರ್ಥವಾಗುವುದು...!!

-


14 JUN 2022 AT 7:36

ಎಲ್ಲಾ ಆಸೆಗಳಿಗೂ ಸಹ ಮಿತಿಯಿದೆ
ಆದ್ರೆ ಮನಸ್ಸಿಗೆ ಅದು ಅರ್ಥವಾಗದು
ತಿರಸ್ಕರಿಸದೇ ಅದು ಸುಮ್ಮನಾಗದು
ಸಿಗದ ಬೆಳ್ಳಿಚುಕ್ಕೆಯನ್ನೇ ಪ್ರೀತಿಸುತ್ತದೆ..!!

-


12 JUN 2022 AT 22:05

ಅವಳೆಂದರೇ.....❤️
ಮಾತಾಡುತ ನಗುವಿಂದಲೇ ಮನಗೆದ್ದ ಕೊಳಲು
ದುಃಖದಲಿ ರೇಗಿಸಿ ಮೌನವಾಗಿ ಬಿಡೋ ಅಳಿಲು
ಭಾವನೆಗಳಿಗೆ ಭಾವ ಸೇರ್ಪಡಿಸುವ ಬೆಡಗಿ
ಹೆಜ್ಜೆ ಹೆಜ್ಜೆಗೂ ಕೈ ಹಿಡಿದು ಸಾಗಿಸುವ ಹುಡುಗಿ
ಎಷ್ಟೇ ಹೇಳಿದರು ಸಾಲದು ಅವಳ ಸೌಂದರ್ಯವ
ಯಾರಿಗೂ ಹೋಲಿಸಲಾಗದು ಅವಳ ಆಂತರ್ಯವ
ಅರಳೋ ಹೂವಿಗೂ ಹೊಟ್ಟೆಕಿಚ್ಚು ಅವಳ ಕಂಡರೆ
ಹೊಳೆವ ಶಶಿಗೂ ಭಯ ಅವಳು ನೆಡೆದು ಬಂದರೆ❤️

-


27 MAY 2022 AT 6:07

ಕಾಳಜಿ, ಪ್ರೀತಿ ತೋರಿಸುವ ಮನಸಿಗೆ
ಕೆಲವೊಂದು ಮಾತುಗಳಿಂದ ಆಗುವ
ಪರಿಣಾಮ ಅತಿಯಾದ ನೋವೆಯಾಗಿರುತ್ತದೆ
ಚುಚ್ಚು ನುಡಿಗಳು ಮನದ ಆಳಕ್ಕೆ
ಹೋದರೆ ಮಾತಾಗಲಿ, ಸ್ನೇಹವಾಗಲಿ
ಮೊದಲಿನ ಹಾಗೇ ಎಂದಿಗೂ ಇರುವುದಿಲ್ಲ..!

-


22 MAY 2022 AT 20:31

ಮಾತನಾಡದೆ ಸುಮ್ಮನಾದೆ ನೀನು
ಮೌನದಲ್ಲಿ ಏಕಾಂಗಿಯಾದೆ ನಾನು
ಕಾದು ಕಾದು ಸಾಕಾಯಿತು ಪ್ರತಿಕ್ಷಣ
ಮನಸೇ ಅಳುತ ಮೌನವಾಯಿತು ಪ್ರತಿದಿನ😍

ದಿನದಾರಂಭವೇ ನೀನೀಡುವೆ ಅದ್ಭುತ ಕಾಣಿಕೆ
ಪ್ರತಿ ಕನಸಲ್ಲಿ ನಿನ್ನೊಲವಿನದೊಂದೇ ವೇದಿಕೆ
ಪ್ರೀತಿಸೋ ಹೃದಯವೇ ಪ್ರೀತಿಯ ಮರೆಯಿತು
ಜೊತೆಯಾದ ಮನಸನ್ನೇ ಬಹುದೂರ ನೂಕಿತು😍

-


15 MAY 2022 AT 20:05

ಮೂರು ನಾಲ್ಕು ಬಾರಿ ಬರುವ
ಸೋಲು ಸದಾ ಕುಗ್ಗುವಂತೆ ಮಾಡಿದರೆ,
ಒಂದೇ ಒಂದು ಗೆಲುವು ಇಡೀ
ಬದುಕನ್ನೇ ಮಂದಸ್ಮಿತಗೊಳಿಸುತ್ತೆ..!!

-


15 MAY 2022 AT 18:59

ಅವಳೆಂದರೆ ಹಾಗೇ💗
ಮುಂಗುರುಳ ಗಾಳಿಗೆ ಸೋಕಿಸಿ
ಚಂದಿರನನ್ನೇ ನಾಜೂಕು ಗೊಳಿಸುವ ಚೆಲುವೆ
ತನ್ಮುಖದ ಹೊಂದಾವರೆಯ ಬಣ್ಣದಲಿ
ಬಾನಿಗೆ ಕಾಮನಬಿಲ್ಲ ಎರಚುವ ಒಲವೆ❤️

ಮಾತಿನ ತುಂತುರು ಮಳೆಯ ಜಳಕದಲಿ
ಮನದ ಬೇಗೆಯ ಜರುಗಿಸಿದ ಮುಂಗಾರು
ಒಲವ ಜೇನಹನಿಯ ಕೈ ಬೊಗಸೆಯಲಿ
ಪ್ರತಿನಿತ್ಯವೂ ಉಣಬಡಿಸುವ ಪ್ರೇಮಬೇರು❤️

-


21 APR 2022 AT 6:58

ಅವಳು
ಕಣ್ಣಿಗೆ ಹತ್ತಿರವಾದವಳಲ್ಲ
ಹೃದಯವ ಜಯಿಸಿದವಳು💗

ಅವಳು
ಪ್ರೇಮಕ್ಕೆ ಮನ ಸೋತವಳಲ್ಲ
ಸ್ನೇಹಕ್ಕೆ ಹೃದಯವ ಅರ್ಪಿಸಿದವಳು💗

ಅವಳು
ಕಲ್ಪನೆಗೂ ಸಿಗದಿರುವ ಭಾವಮಂಜರಿ
ಕನಸಿಗೂ ಬಾರದಿರುವ ಪ್ರೇಮಮಯೂರಿ💗

ಅವಳು
ನಿತ್ಯ ಮಾತಿನ ಮಳೆ ಸುರಿಸುವ ಕಾವ್ಯಲಹರಿ
ಸೌಂದರ್ಯ ತುಂಬಿದ ಚಂದ್ರನ ಸಹೋದರಿ💗

-


21 APR 2022 AT 6:38

ಗೆಲುವೆಂಬ ದೊಡ್ಡ ಬೆಟ್ಟವ ಏರಬೇಕೆಂದರೇ
ಗುರಿ ಮುಟ್ಟಲು ಮನದಿ ಬಿಗಿಯಾದ ಛಲವಿರಬೇಕು
ಆತ್ಮವಿಶ್ವಾಸದಿಂದ ಮುನ್ನುಗ್ಗಲು ಆಯುಧಗಳಿರಬೇಕು
ಸಮಸ್ಯೆಗಳೆಂಬ ಕಲ್ಲು ಮುಳ್ಳುಗಳನ್ನು ಮೆಟ್ಟಿ ನೆಡೆಯಬೇಕು
ಪ್ರಯತ್ನಗಳೆಂಬ ಮೆಟ್ಟಿಲುಗಳ ಸದಾ ಹತ್ತುತ್ತ ಸಾಗಬೇಕು..!!

-


Fetching HIT MAN Quotes