ಅರಳುತಿದೆ ಹೊಸ ಕನಸು
ಹರ್ಷಿಸುತ್ತಿದೆ ನಿತ್ಯವೂ ಈ ಹೆಣ್ಮನಸ್ಸು...-
ಸಮಯದ ಜೊತೆ ಜೊತೆಗೆ ಭಗವಂತ
ಕೃಷ್ಣ... read more
ನಿನ್ನ ತೋಳುಗಳೆನಗೆ ಕೋಟೆ;
ಒಮ್ಮೆ ಬಾಚಿ ತಬ್ಬಿಬಿಡೋ
ನಾನಲ್ಲಿ ಭದ್ರವಾಗಿ ಇದ್ದು ಬಿಡುತ್ತೇನೆ.-
ತಾರಾಗಣದ ಮೆಲ್ದನಿಯಲಿ
ಹೂಗಳು ಪಸರಿಸಿದ
ಸುಗಂಧದಲಿ ರಟ್ಟಾಯಿತು
ನನ್ನ-ನಿನ್ನ ಒಲವು.
ಅದ ಕಣ್ಣಾರೆ ಕಂಡು
ಆನಂದಿಸುವ ಇಚ್ಛೆಯಿಂದಲೇ ಏನೋ
ಇಂದು ಬಿಡುವಿರದೆ
ಬುವಿಗಿಳಿಯುತ್ತಿದೆ ಮಳೆಯು....
ನಿವೀ-
ಮುಂಗಾರಿನ ಸೂರ್ಯ
ಕಿರಣಗಳ ದಳವರಳಿಸಿಕೊಂಡು
ಭೂರಮೆಯ ಹೆಚ್ಚೇ ಸುಡುತ್ತಿದ್ದ...
ಬೀಸುಗಾಳಿಗೆ ಸಿಕ್ಕು, ಹೆರಳಾಗಿತ್ತು ನವಿಲು
ಬಂಡೆಗಪ್ಪಳಿಸಿ ಭೋರ್ಗರೆಯುತ್ತಿತ್ತು ಕಡಲು
ಒರಗಿಕೊಳ್ಳಲು ನನ್ನವನ ಹೆಗಲು...
ನೆತ್ತಿ ಬೇಯಿಸಿದರೇನಂತೆ ಬಿಸಿಲು?
ತಂಪನ್ನೀಯುತ್ತಿರಲು ಅವನೊಲವ ನೆಳಲು
ಕೂಡದಿರಲೆನ್ನುವ ಸ್ವಾರ್ಥ, ಆ ಹೊತ್ತು ಮುಗಿಲು..
ಪ್ರೀತಿಯೇ, ಮಳೆಗರೆದು ತೋಯ್ಯಿಸುತ್ತಿರಲು,
ನುಡಿಯುತ್ತಿತ್ತು ನವಭಾವಗಳ ಕೊಳಲು
ನನ್ನೊಳು ಮತ್ತು ಅವನಲ್ಲೂ....-
ವರ್ಷಗಳ ಗಾಲಿ ಮುಂದೊಡುತಿರಲು,
ಬೆರಗಿನ ಬಾಲ್ಯ ಚೂರು ಹೆಚ್ಚೇ
ಬೇಕೆನಿಸುತ್ತದೆ.....
ಅಲ್ಲಿ ಆಯ್ಕೆಗಳ ಗೊಂದಲವಿರಲಿಲ್ಲ,
ಒತ್ತಡಗಳ ಮೂಟೆಯದು ಕಂಡಿರಲಿಲ್ಲ....
ಬರೀ ಕನಸುಗಳು,
ಮಣ್ಣುಮೆತ್ತಿದ ಕೈಗಳು!
ಅಪ್ಪ ಕೊಡಿಸಿದ ಬಣ್ಣದ ಗೊಂಬೆ,
ಹತ್ತಿ, ತೂಗಾಡಿದ ಮಾವಿನ ರೆಂಬೆ!
ಚಿಂದಿ ಬಟ್ಟೆಯ ಕುಲಾವಿ,
ಅಮ್ಮನೆದುರು ಮುಗ್ಧ ಮನವಿ...
ಇವಿಷ್ಟೇ ಸಾಕಿತ್ತು.
'ನೆಮ್ಮದಿ'ಯೆಂದು ಕರೆಯುವುದಕ್ಕೆ
ಮುಕ್ತವಾಗಿ ನಗುವುದಕ್ಕೆ....-
ಸೂರ್ಯ ದೇವನ
ಹೆಜ್ಜೆಯಿನ್ನು ಮೇಷನತ್ತ!
ನವೊಲ್ಲಾಸದ ಛಾಯೆ
ಪಸರಿಸಿದೆ ಸುತ್ತಮುತ್ತ...
ಸೃಷ್ಟಿಯನ್ನು ಮುದ್ದಿಸಲು
ಹವಣಿಸುವನಿನ್ನು ವಸಂತ;
ಖಗ-ಮೃಗ, ಜಗಕ್ಕೆಲ್ಲವಿದು
ಹೊಸವರ್ಷ, 'ಶೋಭಕೃತ'...-
ಇರುಳ ಕಪ್ಪು,
ಹಡೆದ ಜ್ಯೋತಿ ಚಂದ್ರ;
ಕಾರ್ತಿಕದಲಿ
ಸ್ವತಃ ತಾನೇ ಕೃಷ್ಣಗೆ
ಆರತಿಯಾದ!-
ಹೊಸ ಆಕಾಂಕ್ಷೆಗಳ ಜನನಕ್ಕೆ
ಸೂಕ್ತ ರೂವಾರಿ....
ಸಹಜ ನೋವುಗಳ ನಡುವೆ
ಸಾಧನೆಗೊಂದು ಗರಿ...-