ಬಾ ಚಂದಿರ ಆಡೋಣ,
ನಾ ಕರೆಯುವ ನಮ್ಮ ಕನಸಲಿ
ಮಳೆ ಬರಲಿ ಚಳಿ ಇರಲಿ
ಪುಟ್ಟ ತಾರೆಗಳ ಬೆಳಕಿಂಡಿಯ ಕಟ್ಟುವ
ಬಾನಲ್ಲಿ ಮೋಡಗಳ ಮನೆ ಮಾಡುವ;
ರಾತ್ರಿ ಮಿಕಿಮಿಕಿ ನೋಡುವ ಕತ್ತಲ ಜತೆ
ಓಲಾಡುತ ಹಾರಾಡುತ ಗಾಳಿಗೆ
ಇಡೀ ಲೋಕವ ಸನಿಹ ಸೆಳೆದು
ನಾವಾಡುವ ಬೆಳದಿಂಗಳ ಎಸೆದು
ನಾವ್ಹಾಡುವ ಹೊಸಕಾವ್ಯದ ಕೈ ಹಿಡಿದು.— % &-
ಹಾಲಿನಂತ ಬೆಳದಿಂಗಳ ಚಲ್ಲಿ
ಹಾರಾಡುತ್ತಿದ್ದ ಚಂದಮಾಮ
ಮೋಡದ ಮರೆಯಲ್ಲೇ ನಿಂತನಲ್ಲ
ಕಾರಣ...ಮಲ್ಲಿಗೆಯಂತವಳ
ಚೆಂದದ ನಗು ಕಂಡು
ನಾಚಿಕೊಂಡನಲ್ಲ-
ಇರುಳೆಂದರೆ ಪ್ರೀತಿ ಹೆಚ್ಚು,
ಚಂದಿರನಂತೂ ನನಗಚ್ಚುಮೆಚ್ಚು.
ಹುಣ್ಣಿಮೆಯ ಬೆಳಕಲಿ,
ತಂಗಾಳಿಯ ನವಿರು ಸ್ಪರ್ಶದಲಿ,
ಒಂಟಿತನವೂ ಬಲು ಹಿತವು.
ಅಮವಾಸ್ಯೆಯ ರಾತ್ರಿಯಲಿ,
ತಾರೆಗಳ ಹೊಳಪಿನಲೀ,
ಕಾಲಹರಣವೂ ಸಂತಸವೂ.
ಹಳೆಯ ನೆನಪನು ಮೆಲಕು ಹಾಕಲು,
ಹೊಸ ಬದುಕಿನ ಬಗೆಗೆ ಯೋಚಿಸಲು,
ಕಳೆದುಹೋದ ಪ್ರೀತಿ ನೆನೆಯಲು,
ಹೊಸಾರಂಭವ ನಿರೀಕ್ಷಿಸಲು,
ರಾತ್ರಿಗಿಂತಾ ಸಮಯ ಬೇಕೇ ಆಲೋಚಿಸಲು!
ಕಲ್ಪನೆಗಳ ಬಡಿದೆಬ್ಬಿಸಲು!-
ತಾಳೆಗರಿಯಲಿ ಓಲೆಯನು ಬರೆಯುವೆ,
ನೀಲಿ ಕಡಲಿನ ಶಾಯಿ ಬಳಸುವೆ,
ಬಾನ ಬೆಳಗಿಸೋ ಸೂರ್ಯನಾಗಿ ನಾ
ನಿನ್ನ ಚಂದಕೆ ಬೆಳಕ ಹಂಚುವೆ..-
ಇದ್ದೂ ಇರದಂತಿರುವ ಚಂದಿರ.,
ಹಗಲು ಮುಗಿಲಲಿ ನಿನ್ನಂತೆಯೇ.!
ಭ್ರಮೆಯ ಬಿಂಬವ ನೆಚ್ಚಿ ನಗುವ,
ಧರಣಿಯೋ ಹುಚ್ಚಿ ನನ್ನಂತೆಯೇ.!
-
ಕವಿಯ ಸಾಲಿಗೆ ಕಾದ ಚಂದಿರ
ಜೋಡಲಿಲ್ಲ ಪದಗಳು ಅಂದು,
ಅರಿಯ ಬಯಸುವೆ ಏಕೆಂದು,
ಹೇಳದಿರಲು ನೀನು ಮಾಯವಾದೆ ನಾನು
ಕಪ್ಪು ತೊಟ್ಟು ಕತ್ತಲೆಯ ಇರುಳಿಗೆ.
ಯಾರು ಬಲ್ಲರು ನಿನ್ನ ಮನದ ಮಾಯೆ,
ಮೈಲಿಗಳು ನಡೆದರೂ ಸಿಗಲಾರದು ಆರಂಭ,
ಪುಟಗಳು ಓದಿದರೂ ತಿಳಿಯದು ಕೊನೆ,
ಕತ್ತಲಲ್ಲಿ ಕಾಯುವುದೊಂದೆ ಕಾಯಮ್ಮು.
ನಕ್ಷತ್ರಗಳ ಬನದಿ, ಮೋಡಗಳ ಅಂಚಿನಲಿ,
ಸೂರ್ಯನು ತೆರಳಿರಲು, ಜಗವಿಡಿ ಮಲಗಿರಲು
ಹುಣ್ಣಿಮೆಯ ಬೆಳಕು, ಹಾಳೆಯ ಬಿಳುಪು,
ಕಾದವು ಕವಿಯ ಕುಂಚದ ಕಪ್ಪಿಗೆ.-
ಬಾರೋ ಮನೆಗೆ ಅಂತ ತುಂಬಾ ಸರ್ತಿ ಕರ್ದಿದ್ದೆ.
ಬರಲ್ಲ ಕಣೇ..ನಿಮ್ಮಮ್ಮ ಇರ್ತಾರೆ.
ಮೊನ್ನೆ ಆಕಾಶನೋಡ್ಕೊಂಡ್ ಬೈತಿದ್ರು..ಅಂದಿದ್ದ.
ಯಾಕೋ ನಿನ್ನೆ ತುಂಬಾ ಲವ್ವಾಗಿ ಹೋಯ್ತು.
ಬಾರೋ ಅಂದೆ. ಬರಲ್ಲ ಅಂದ.
ಎತ್ತಾಕ್ಕೊಂಡ್ ಬರ್ತಾ ಇದ್ದೆ.
ಅಮ್ಮನಿಗೆ ಕಾಣದಂತೆ ಬಾಲ್ಕನಿಯಲ್ಲಿ..
ಕದ್ದು ಮುಚ್ಚಿ......💞💞💞💞
-
ಅವರಿವರ ಕಥೆ ಯಾಕೋ?
ರಮಿಸುವಾ ಕಥೆ ಹೇಳು.
ಒಂದಲ್ಲ ಒಂದು ದಿನ..
ಪ್ರಪಂಚದ ಎಲ್ಲಾ ಸಂಬಂಧಗಳ
ಬಿಟ್ಟು ಬರುವೆ.
ಇಬ್ಬರೇ ಕೂತು ಮನಸು ಬಿಚ್ಚಿ
ಮಾತನಾಡುವ.-