Career:
It was not easy to survive after many failures.
Love:
It was not easy to convey people after many fights.
Life:
Just goes on.-
ಪ್ರೀತಿಯ ಹನ್ನೆರೆಡು ಮುಖಗಳಲ್ಲಿ,
ಒಂದು ನನ್ನದು ಇನ್ನೊಂದು ನಿನ್ನದು.
ಉಳಿದ ಹತ್ತು ಮುಖಗಳು ನಾವಂದುಕೊಂಡಿದ್ದು.
In the twelve faces of love,
One is mine and one is yours,
The rest ten are we just imagined.-
ಅಲ್ಲೊಬ್ಬ ಹೇಳ್ತಿದ್ದ:
ಅವಳನ್ನ ಪ್ರಾಣಕ್ಕಿಂಥ ಹೆಚ್ಚಿಗಿ ಪ್ರೀತಿಸಿದ್ದು ನಿಜ,
ಆದರೆ ಅವಳ ಪ್ರೀತಿ ಸಿಗಬೇಕಿದ್ದರೆ ನಾನು ಬಿಕ್ಷುಕನೇ ಆಗಬೇಕಿತ್ತು..
ಸ್ವಾಭಿಮಾನಕ್ಕಿಂತ ಪ್ರೀತಿ ದೊಡ್ಡದು ಎನಿಸಲಿಲ್ಲ,
ನನ್ನ ಸ್ವಚ್ಚಂದ ಪ್ರೀತಿಗೆ ಬೇಡಿ ಸಿಗುವ ಬಿಕ್ಷೆಯೂ ಬೇಕಿರಲಿಲ್ಲ..
ಒಂಟಿಯಾಗೇ ಇರುವೆ ಅಂದನು ಅವನು,
ಅವಳ ನೆನಪಲ್ಲಿ ಅಥವಾ ಮರೆತು ಮರೆಯಲ್ಲಿ.-
ಹೆಣ್ಣು ಹೆಣ್ಣಾಗಿದ್ದರೆ ಸಾಕು,
ಮಾರಿ ಕಾಳಿ ದುರ್ಗಿ ಎಲ್ಲವೂ ಸಮಯಕ್ಕೆ ತಾಳಿದ ಅವತಾರಗಳೇ ಹೊರತು,
ಬದುಕಲ್ಲ..-
ದೇಹವೇ ದೇಗುಲ, ಮನಸೇ ದೇವರು,
ತಿನ್ನುವ ಊಟವೇ ಪ್ರಸಾದ,
ಆಡುವ ಮಾತೆ ಮಂತ್ರ ಪಠಣ,
ಮಾಡುವ ಕೆಲಸವೇ ಕರ್ಮ,
ಸಹಾಯವೇ ಹರಕೆ ಸೇವೆ,
ದುಡಿಯುವ ಹಣವೇ ಕಾಣಿಕೆ,
ಸ್ವಚ್ಚತೆಯೇ ಮಡಿ ಮೈಲಿಗೆ,
ನಿದ್ರೆಯೇ ಧ್ಯಾನ ಮತ್ತು ಆರೋಗ್ಯವೇ ಕರ್ಮಫಲ..-
ದೇವರ ಹೆಸರಲ್ಲಿ ದೇಹಕ್ಕೆ ಹಾನಿಮಾಡಿಕೊಳ್ಳುವುದು ಹೇಗೆಂದರೆ ಒಂದಿನ ದೇವರು ಕಣ್ಣೆದುರೇ ಬಂದರೆ ಭಕ್ತಿಯಿಂದ ಅವನ ಪಾದಕ್ಕೆ ಕರ್ಪೂರ ಹಚ್ಚಿದಂತೆ..
-
ನಿನ್ನ ಸ್ವಂತ ಬುದ್ಧಿಯೇ ನಿನ್ನನ್ನು ಕ್ಷೀಣಿಸುತ್ತಿರುವಾಗ, ಶಿಕ್ಷಿಸಿ ಪಾಪಿಯಾಗುವ ಅವಶ್ಯಕತೆ ನನಗಿಲ್ಲ.
ಸುಮ್ಮನೆ ಕಾಯುವೆ ನಿನ್ನ ಕೊನೆಯುಸಿರಿರುವವರೆಗು ಕ್ಷಮಿಸದೆ ಮತ್ತು ಶಿಕ್ಷಿಸದೆ..
ಅವನ ಮಾತಿನಂತೆ "ಕಾಲವೇ ಉತ್ತರ"-
ಮನುಜನೊಬ್ಬ ನವಿಲೊಂದ ಸಾಕಿದನಂತೆ,
ತಮಾಷೆಗಾಗಿ ಅದನು ಕಾಗೆ ಎಂದು ಕರೆದನಂತೆ,
ಅದೊಂದು ದಿನ ನವಿಲಿಗೆ ಇವನು ಮನುಜನೆಂದು
ತಿಳಿದು ದೂರ ಹಾರಿ ಹೋಯಿತಂತೆ..
ಮನುಜನ ಕಾಲಿ ತೆಕ್ಕೆಯಲಿ ಕೋಗಿಲೆಯೊಂದು
ಬಂದು ಕುಳಿತು ಹಾಡಿತಂತೆ,
ಮೊದಲಾದ ತಪ್ಪು ಮತ್ತಾಗಬಾರದೆಂದು ಮನುಜ
ಕೋಗಿಲೆಯನ್ನು ಕೋಗಿಲೆ ಎಂದೇ ಕರೆದು ಪ್ರೀತಿಸಿದನಂತೆ,
ಅದೊಂದು ದಿನ ಕೋಗಿಲೆಗೆ ಇವನು ಮನುಜನೆಂದು
ತಿಳಿದು ದೂರ ಹಾರಿ ಹೋಯಿತಂತೆ..
ನೀನೆಷ್ಟೇ ಒಳ್ಳೆಯವನಾಗಿರು ಅಥವಾ ಕೆಟ್ಟವನೇ ಆಗಿರು,
ನೀ ಮನುಜನಾಗಿ ಪ್ರಕೃತಿಗೆ ವಿರುದ್ಧವೇ,
ನಿನ್ನ ಮಾನವತೆ ಮಾನವೀಯತೆ ಆಗದು,
ನಿನ್ನ ಪ್ರೀತಿಯ ತೆಕ್ಕೆ ಎಂದೆಂದೂ ಕಾಲಿಯೇ..-
Just remember your past..
If you are laughing, then you moved on.. chill..-
ಪ್ರೀತಿ ಎಲ್ಲವನ್ನೂ ಮರೆಸಿಬಿಡುವುದು,
ತನ್ನ ಸ್ವಂತಿಕೆಯನ್ನೂ..
ವಾಸ್ತವವನ್ನೂ...-