ಸೋಲಿಗೆ ಆ ಕ್ಷಣ ಮಿಡುಕಿದರೂ
ಮತ್ತೆ ಎದ್ದು ನಿಲ್ಲುವೆ!
ಅಭ್ಯಾಸವಾಗಿದೆ ಸೋಲು.
ನನ್ನೊಂದಿಗೆ ಆಟವಾಡುತ್ತಲೇ
ತಾನೇ ಸೋತು ಹೋಗುತ್ತದೆ
ಅಂತ್ಯದಲಿ!
-
ಧರ್ಮದಿಂದ ಸೋತವನು, ಒಂದುದಿನ ಧರ್ಮದಿಂದಲೆ ಎದ್ದು ನಿಂತು ಸಾಧಿಸುವನು.
ಅಧರ್ಮದಿಂದ ಗೆದ್ದು ಬೀಗುವಂತವನು ,
ಒಂದು ದಿನ ಧರ್ಮಕ್ಕೆ ಬಲಿಯಾಗುವನು.
-
ಬಾಳೆಂಬ ಚದುರಂಗದಾಟದಿ ನಿತ್ಯ ಆಪ್ತತೆಯ ವಿಚಾರ
ಸಿಹಿ ಕಹಿಗಳ ನೋವು ನಲಿವುಗಳೊಂದಿಗಿನ ಚಿತ್ತಾರ
ಸೋಲು ಗೆಲುವಿನೊಂದಿಗಿನ ಪಯಣದ ವ್ಯವಹಾರ
ಸಾಹಿತ್ಯ ಲಾಲಿತ್ಯದ ರಸದೌತಣದ ಖುಷಿಯು ಸುಸರ.!
ಜೀವನವೆಂಬ ಮಹಾಘಟ್ಟದ ಗೆಲುವು ಸುಲಭದ ತುತ್ತಲ್ಲ
ಬೆವರರಿಸಬೇಕು ಅನವರತ ಜಗ್ಗದೆ ಕುಗ್ಗದೆ ಸಾಗುಬೇಕು
ಅದು ಸಾಹಸದ ಹರವು ವಿಜಯದ ಚೆಲುವು ಗೊತ್ತಲ್ಲ
ಧೈರ್ಯ ಸ್ಥೈರ್ಯದಿ ಮುನ್ನುಗ್ಗುತ್ತ ನಡೆಯುತ್ತಿರಬೇಕು.!
ಆಸೆಯಿದ್ದರಷ್ಟೆ ಸಾಲದು ಸಾಧಿಸುವ ಮನಸ್ಸು ಛಲ
ಆತ್ಮವಿಶ್ವಾಸದ ಬಲ ಪ್ರಯತ್ನಗಳ ಸಫಲತೆಯು ಅಚಲ
ಕಾರ್ಯತತ್ಪರತೆಯೊಳು ಪರಿಪೂರ್ಣತೆಯು ಸುೃಜಲ
ದಕ್ಕುವುದು ಎಂತಹ ಬಂಡೆಯಾದರು ನಮ್ಮ ಪಾಲಿಗೆ ಫಲ.!
ಬಾಳಲ್ಲಿ ಸೋಲಿದ್ದರಷ್ಟೆ ಗೆಲುವಿಗಾಗಿ ಹೋರಾಟವು ಜೀವಂತ
ಸೋಲು ಅವಮಾನವಲ್ಲ ಗೆಲುವಿಗೆ ಸೋಪಾನದ ಸಂಕೇತ
ಮೆಟ್ಟಿ ನಿಂತು ಗೆಲುವಿನ ಶಿಖರದ ರೂವಾರಿಯು ಕೃತಾಂತ
ಸಾರ್ಥಕತೆಯ ಬಾಳಿಗೆ ಸಾಕ್ಷಾತ್ಕಾರದ ಗೆಲವೊಂದು ಅದ್ಭುತ.!-
ಸೋಲೇ ಅಲ್ಲ ಅಂತ್ಯ ಬದುಕಲಿ
ಗೆಲುವೇ ಅಲ್ಲ ಜೀವನ ನಿರ್ಧರಿಸುವುದಿಲ್ಲಿ
ತೇಲಾಡದಿರು ಗೆದ್ದೆನೆಂಬಹಮ್ಮಿನಲಿ
ಸೋಲು- ಗೆಲುವೆಂಬುದು ಚಕ್ರ ನೆನಪಿರಲಿ-
ಗೆಲ್ಲಲು ಗುರಿ,ಗುರು ಇರಬೇಕೆಂದೆನಿಲ್ಲ
ನೀನು,ನಿನ್ನತನ ಇದ್ದರೆ ಸಾಕು
ಗೆಲುವು ನಿನ್ನದೆ,ಬರೀ ನಿನ್ನದೇ-
ಸೋಲಿಗಿರಲಿ ಸಾಂತ್ವನ
ಸೋಲೆಂಬುದು ಸೋಲುತ್ತಿರಲಿಲ್ಲ ವೆಂದರೆ ಗೆಲುವೆಂಬುದು ಗೆಲ್ಲುತ್ತಿರಲಿಲ್ಲ.-
ನಮಗಾಗಿ ಅಲ್ಲದಿದ್ದರೂ
ನಮ್ಮ ಸೋಲನ್ನು ನೋಡಲು
ಕಾಯುತಿರುವವರಿಗಾದರೂ
ನಾವು ಗೆಲ್ಲಲೇ ಬೇಕು..-
ನಮ್ಮಿಂದ ಸಾಧ್ಯವಾದಷ್ಟನ್ನು ಮಾಡಿ
ಗೆಲ್ಲುವುದು ಗೆಲುವಲ್ಲ..
ನಮ್ಮಿಂದ ಸಾಧ್ಯವಾಗದ ಕೆಲಸವನ್ನು
ಸಾಧಿಸಿ ಗೆಲ್ಲುವುದೇ ನಿಜವಾದ ಗೆಲುವು..!-