QUOTES ON #ಓದು

#ಓದು quotes

Trending | Latest
14 DEC 2019 AT 23:16

ರುಬಾಯಿ:—

ಓದುತಿರುವೆ ನಿನ್ನದೆ ಭಾವಕೋಶ
ಇದರಲ್ಲಿಹುದು ಇಡೀ ವಿಶ್ವಕೋಶ
ಪ್ರತಿಪುಟದ ಸಾಲಿನಲ್ಲಿರುವ ನೀ
ಓದ ವಿಮರ್ಶೆಯಲ್ಲಿನ ಜ್ಞಾನಕೋಶ

-



ಓದಬೇಕು ಎಂದು ಕೂತರೆ
ಒಲ್ಲದ ಮನಸು
ನೆಪ ಒಡ್ಡಿ ದೂರ ಸರಿಯುವುದು
ಕುಂಚದ ಸಂಚು ತಿಳಿಯದ
ಮನಸು ಕಲ್ಪನಾ ಲೋಕದಲಿ
ವಿಹರಿಸಿ ಭಾವನೆಯ ಗಾಳದಲಿ
ಸಿಲುಕಿ ಮೀನಿನಂತೆ ಒದ್ದಾಡಿ
ಬರವಣಿಗೆಯ ದಾಹಕೆ ಆಹಾರವಾಗಿ
ಮರೆತಂತಿಹುದು ಸಮಯದ ಸಂಪತ್ತು...

-


16 APR 2021 AT 22:26

ಓದುವವರೆಲ್ಲ ಜ್ಞಾನಿಗಳಲ್ಲ
ಜ್ಞಾನಿಗಳಷ್ಟೇ ಓದುತಾರ...

-



ಅರ್ಥೈಸಿಕೊಂಡು ಆರಂಭಿಸಿದರೆ ಸಮಯ ಕಳೆವ ಪರಿವೆ ಅರಿವಿಗೆಬಾರದು, ಆದರೆ ಅರ್ಥೈಸಿಕೊಳ್ಳುವ ಗಳಿಗೆ ಬರುವಷ್ಟರಲ್ಲಿ ಸಮಯವದು ಪ್ರತಿಬಾರಿ ಮೀರಿಹೋಗುತಿಹುದು!

-


18 MAY 2020 AT 11:42

ಕೆಲವು ಪದಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರಕುತ್ತದೆ ಮತ್ತು ಜ್ಞಾನ ವೃದ್ಧಿಯಾಗುತ್ತಾ ಹೋಗುತ್ತದೆ ....

-


29 JAN 2022 AT 7:28

ತನ್ನ ಎದೆಯ ಭೂಪಟದಲ್ಲಿ ಅಕ್ಷರಗಳ
ಗಡಿರೇಖೆಗಳನ್ನು ಹಾಕಿಕೊಂಡವ,
ತನ್ನ ಹಣೆಬರಹವನ್ನು ವಿಧಿಗೆ ಸವಾಲೊಡ್ಡಿ
ತಾನೆ ಬರೆದುಕೊಳ್ಳವವ.... — % &

-



ಸಾಕಿ ನೀ ಇನ್ಯಾರೋ ಗೀಚಿಟ್ಟ ಕಾವ್ಯವಾಗಿದ್ದರೆ
ನಾನೊಮ್ಮೆ ಓದಿ ಮರೆತು ಬಿಡುತ್ತಿದ್ದೆ..
ಆದರೆ ನೀನು ನಾನೇ ಹಚ್ಚಿಟ್ಟ ಜೀವಂತ ಪ್ರೀತಿಯ ಹಣತೆ ಕಣೇ

-


11 MAY 2019 AT 8:08

ನಿನ್ನಂತರಂಗದಲ್ಲಿನ
ಬರಹಗಳ
ಭಾವದಲೆಗಳ
ತಿರುಳು ಅರಿಯದೆ
ಭಾವಾನುವಾದಲಿ
ತೊಡಗಿದೆ

ಅದರಲ್ಲಿರುವ
ಹೃದಯಾಂತರಾಳದ
ವಿಷಯಾನುಭವಗಳ
ಒಳವೊಕ್ಕಲಾಗದೆ
ವಿಷಾದದಿಂದ
ಹೊರಗುಳಿದೆ!


-


8 APR 2020 AT 22:12

"ರಕ್ತಾಕ್ಷಿ"
ಕುವೆಂಪು ಅವರು ಸೃಷ್ಟಿಸಿದ ಅದ್ಭುತ ಮಾಯಾಜಾಲ. ಹೆಣ್ಣೊಬ್ಬಳೊಳಗಡಗಿದ ನಾನಾ ರೂಪಗಳ ಸಮಯಾನುಸಾರ ಅನಾವರಣ. ಕಥೆಯಂಚಿನಲ್ಲಿ, ಓದುಗರ ಕಣ್ಣಂಚನ್ನು ತೇವ ಮಾಡುವ ರಕ್ತಾಕ್ಷಿಯೆಂಬ ರುದ್ರಾಂಬೆಯ ಯಶಸ್ವೀ ಪಾತ್ರ ಒಂದಿಡೀ ಹೊತ್ತಿಗೆಯ ಹಿಡಿದಿಡುವ ಜೀವಾಳದ ಪಾತ್ರ...

-


24 DEC 2019 AT 17:27

Degree ಓದುವಾಗ Lab ಚಿಂತೆ.
Degree ಆದ್ಮೇಲೆ Job ಚಿಂತೆ.

-