QUOTES ON #ಎದೆಯಾಳ

#ಎದೆಯಾಳ quotes

Trending | Latest

ಹ್ಹಾss,, ಪಾಪ ಎದೆ ನೆಲವದು
ವಸಂತ ಮಾಸದಲಿ ಮೈನೆರೆದು
ಮರುಘಳಿಗೆಯಲ್ಲೇ
ಸುಡುವ ಕಾಂಕ್ರೀಟ್ ಕಾಡಾಗಿದ್ದು!!..

-


29 MAY 2018 AT 0:02

ನಿನಗಾಗಿ ಬರೆದಿರುವ ಕವನ,
ಹೇಳದೇಯಿರುವಂತೆ ಕಾಡುತಿರುವುದು
ಮನದ ಸ್ವಾಭಿಮಾನ.

-


28 MAY 2018 AT 17:51

ಎದೆಯಾಳದಲ್ಲೇ ಇರಲಿ

ಬಿಡು ಜೋಗಿ!

ತಣ್ಣಗೆ ತಿಳಿ ಬಾವಿಯೊಳ್ ಶುಭ್ರ

ಬಿಳಿ ಕಲ್ಲಿನಂತೆ ಮಲಗಿ!

-


28 MAY 2018 AT 17:25

ಅನಂತ ಸಾಗರದ
ಮರಳೆಣಕೆಯಷ್ಟಿರುವ ಮುದ್ದು ಅಣ್ಣನ ಪ್ರೀತಿಯೆಂಬ ನೆನಪುಗಳ ಬುತ್ತಿ

-



"ಬಿದ್ದಾಗ ತುಳಿದು, ಗೆದ್ದಾಗ ಬರುವುದು ಬಂಧುಮಿತ್ರರರ ಪ್ರೀತಿ!!"

ನೋಡಿ!! ಈ ವೈಕ್ಯೂನಲ್ಲೇ ಯಾರೋ ಬರೆದ ಸಾಲು..!! ನಂಗೆ ನೆನಪಿಲ್ಲ ಯಾರು ಅಂತ!! ಆದ್ರೆ,ಎಷ್ಟು ಸತ್ಯ ನೋಡಿ!! ಸಂಬಂಧಿಕರಲ್ಲಿ ಸ್ನೇಹ ಇದೇ ತರ!! ಬಿದ್ದಾಗ ಕಾಲು ಎಳೆಯೋದೇ..!!! ಗೆದ್ದಾಗ ಇರೋ ಚೂರು ಪಾರು ಸಂಬಂಧ ಹೇಳ್ಕೊಂಡು ಹತ್ರ ಆಗೋದು..!! ಯಾವತ್ತೂ ನಮ್ಮವರು ನಮ್ಗೆ ಸಪೋರ್ಟ್ ಮಾಡಲ್ಲ! ಕರೋನ ಬಂದ ಸ್ಟಾರ್ಟಿಂಗ್...ಎಲ್ಲರೂ ಟೆನ್ಶನಲ್ಲಿ ದಿನ ಕಳೀತಿದ್ರು..ಅವಾಗ ನನ್ ತಲೇಗೊಂದು ಯೋಚನೆ ಬಂತು! ....continued. ..

-


3 JAN 2022 AT 19:18

ಟಂಕಾ ರಚನೆ
ದತ್ತಪದ : ಎದೆಯಾಳ
57577 Poem

ಹದವಾಗಿದೆ
ಮನಸ್ಸೀಗ ನನ್ನದು
ಎದೆಯಾಳದ
ಭಾವನೆಗಳೆಲ್ಲವೂ
ನಿನ್ನದೇನೆ ಎಂದಾಗ

-


28 DEC 2020 AT 20:23

ಸಂಗೀತ ವೀಣೆಯ ನುಡಿಸುತ್ತಿಹಳು
ಸಪ್ತಸ್ವರಗಳ ಮಾಧುರ್ಯವ ಚೆಲ್ಲುತ್ತಿಹಳು
ನನ್ನ ಹೃದಯ ವೀಣೆಯ ನುಡಿಸುತ್ತಿಹಳು
ನನ್ನೊಲವಿಗೆ ಹೊಸ ಅನುರಾಗವ ಹೆಣೆಯುತ್ತಿಹಳು.. ♥️

-


14 FEB 2020 AT 17:53

ಕಣ್ಣಳತೆಗೆ ಕಾಣುವುದು ಎದೆಯಳತೆಯ ಪ್ರೀತಿಯೆ!?
ಹೊರತು, ಎದೆಯಾಳದ ಒಲವಲ್ಲ.

-


28 MAY 2018 AT 18:54

ಅವಳ ನವಿರಾದ ನೆನಪೋಲೆಗಳ ಸಾಲು.. ಸೋನೆ ಮಳೆಯಲಿ ನೆನೆಯುತ ಪಡೆದ ಮುತ್ತುಗಳ ಮತ್ತಿನ ಮಾಸದ ನೆನಪುಗಳು..

-


7 JUL 2020 AT 21:11

ನಿನ್ನ ತೋಳಿನ ಬೆಚ್ಚುಗೆ ನನ್ನ ಸುತ್ತಲಿರಲು,
ನಿನ್ನ ಹಿತವಾದ ಬಿಸಿಯುಸಿರು ನನ ತಾಕುತಿರಲು,
ನನ್ನ ಎದೆಯಾಳದ ತವಕಗಳು ತಳಸೇರುವುದು...
ನೀನಿಲ್ಲದ ದಿನಗಳೂ ಇದೇ ಕಲ್ಪನೆಯಲಿ ಕಣ್ಮುಚ್ಚುವೆ...

-