Jyoti Patil   (ಬೆಳಕು)
1.1k Followers · 20 Following

read more
Joined 1 March 2018


read more
Joined 1 March 2018
7 MAY 2021 AT 0:22

ಸಪ್ತಸಾಗರದಾಚೆಯೆಲ್ಲೋ ಕಳೆದೋಗುವಾಸೆ
ಅನಾಮಿಕನಂತೆ

-


3 APR 2021 AT 9:49

ಹಚ್ಚುವುದಾದರೆ ದೀಪವೇ ಹಚ್ಚು
ಮನೆಗೆ ಬೆಂಕಿಯನ್ನಲ್ಲ
ಆರಿಸುವುದಾದರೆ ಬೆಂಕಿಯನೇ ಆರಿಸು
ಮನೆಯ ಜ್ಯೋತಿಯನ್ನಲ್ಲ

-


30 MAR 2021 AT 2:27

ನಿಲ್ಲದೇ ಓಡುವ ಜಗತ್ತಿನಲಿ
ನಿಂತು ಅರಿಯುವ ಭಾವ
ಕೊಂಚ ಮೌನದಲಿ ಹುಡುಕುತ
ಅಲೆದಾಡಿತು ನೆಮ್ಮದಿಯ

-


29 MAR 2021 AT 23:52


ನಿಲುವಿರದ ಪಯಣದಲಿ
ಕನಸುಗಳ ಬೆನ್ನೇರಿ
ಮನಬಿಚ್ಚಿ ಹಾರುವ ಪಕ್ಕಿಯಾದೆ ನಾ

-


14 SEP 2020 AT 9:56

ಗುಳಿಕೆನ್ನೆಯ ಕನ್ಯೆಯೆ
ಮಾದಪ್ಪನ ದಾಸಿಯೆ
ಜಗವನೆ ಸೋಜುಗದತ್ತ
ಸೆಳೆದ ಸುಂದರಿಗೆ
ಹುಟ್ಟಿದಬ್ಬದ ಶುಭಾಶಯ

-


7 JAN 2020 AT 0:12

Either light or dark. It's your own path😊
Feel, face and make the worth of it🌼

-


5 DEC 2019 AT 19:34

ಮನದ ಭಾರವು ಅಲೆಗಳ ಸಪ್ಪಳದಿ ಮಿಂದಾಗ
ಏನೋ ನೆಮ್ಮದಿ

-


18 NOV 2019 AT 18:30

ತುದಿಗಾಲಲಿ ನಿಂತಿತ್ತು ತಟ್ಟೆಂದು
ಇಳಿಯಲು ವೇಗದಿ ಕಣ್ಣೀರಾಗಿ
ಕ್ಷಣಮಾತ್ರದಿ ಕಂಡಿತು ಹಡೆದಾಕೆಯ
ನೊಂದ ಮನ ಸಂತೈಸಲು
ಯಾರಿಹರಾಕೆಯ ನನ್ನ ಹೊರತು
ಅಂದು ಧೈರ್ಯವ ತೊರೆದು
ಅಬಲೆಯಾಗಿದ್ದರೆ ನೋವು
ಅಮರವಿತ್ತಾಕೆಗೆ ಅಪ್ಪನೆಲ್ಲೂ
ಹೋಗಿಲ್ಲೆನ್ನೊಡನಿರುವನು ನನ್ನ
ಶಕ್ತಿ-ಯುಕ್ತಿಯಾಗಿರುವನು ಅಂಜಬೇಡ
ವೆಂಬ ಛಲವ ತೊಟ್ಟು ಅಡಗಿಸಿದೆ ದುಃಖವ
ಅತ್ತು ಬಿಡಲೆಂಬ ನೋವ ಕಾಡುವಾಗ
ಜವಾಬ್ದಾರಿಯೆಂಬ ಮೆಟ್ಟಿಲು ತಳ್ಳುತಿತ್ತು
ಸಾಧನೆಯೆಡಗೆ

-


6 NOV 2019 AT 9:35

ಎಷ್ಟೋ ಜನರು ಹೇಳೋದನ್ನ ಕೇಳಿದ್ದೆ
ಎಷ್ಟೋ ಸೆಲೆಬ್ರಿಟಿಗಳು ಯಾವ್ದೋ
ಫಂಕ್ಷನ್ ಅಲ್ಲಿ ಅವಾರ್ಡ್ ಗೆದ್ದಾಗ ಹೇಳಿದ್ ಮಾತು ಕೇಳಿದ್ದೆ
ಎಷ್ಟೋ ಅಸಹಾಯಕರು ನೋವಲ್ಲಿ ಹೇಳಿದ್ದನ್ನ ಕೇಳಿದ್ದೆ
ಅಪ್ಪಾ ಇಲ್ದೆ ಈ ಸಮಾಜದಲ್ಲಿ ಬದುಕೋದು ಕಷ್ಟ
ಅಪ್ಪ ಇಲ್ದೆ ಇರೋದು ಅಷ್ಟು ಸುಲಭದ ಮಾತಲ್ಲ ಅಂತ
ಅಂದು ಆ ಮಾತು ಅಷ್ಟು ತೂಕ ಅನ್ಸಿರ್ಲಿಲ್ಲ
ಅನುಭವಿಸಿದಾಗಲೇ ಅಲ್ವಾ ಭಾವನೆ ಅರ್ಥ ಆಗೋದು
ಅಷ್ಟು ಸುಲಭವಿಲ್ಲ ಅಪ್ಪನಿಲ್ಲದ ಈ ಜೀವನ
ಕಳೆದುಕೊಂಡಾಗ ಗೊತ್ತಾಗೋದು ಕವಚದ ಬೆಲೆ

-


11 SEP 2019 AT 22:59

ನಿನ್ನ ನಿಸ್ವಾರ್ಥದ ನಾದ
ಕಲ್ಕರಗಿಸುವಂಥಹ ನುಡಿ
ಪ್ರೀತಿಯ ಪಲ್ಲವಿ
ಮಮತೆಯ ಚರಣ
ಕರುಣೆಯ ಸ್ವರ
ಅಪ್ಪಾಜಿ ನೀನೇ ಸದಾ ನನ್ನ ಮನದಿ
ಮೊಳಗುವ ಸರ್ವನಾದ

-


Fetching Jyoti Patil Quotes