ಅವನು ನನ್ನ ನೋವು ನಲಿವಿಗೆ ಸಹಭಾಗಿ.
ನಾನು ಅವನೋಲುಮೆಯ ಅರ್ಧಾಂಗಿ.-
ಹಸಿರು ಚಪ್ಪರದಡಿ
ಹಸೆಮಣೆಯೇರಿ
ನೀ ಕಟ್ಟುವ ಕರಿಮಣಿಗೆ
ನಾ ಕೊರಳೊಡ್ಡುವೆ,
ಬಂಧು ಬಾಂಧವರೆದುರು
ನೀ ನನ್ನ ಸತಿಯಾಗಿ
ಸ್ವೀಕರಿಸುವ ಕ್ಷಣಕ್ಕಾಗಿ
ನಾ ಕಾತರಿಸುತ್ತಿರುವೆ,
ನಿನ್ನ ಸತಿಯಾದ
ಮರುಕ್ಷಣದಿಂದ
ಏಳುಬೀಳುಗಳಿಗೆಲ್ಲ
ನಿನ್ನ ಜೊತೆಯಾಗಿ
ನಡೆಯುವೆ, ನೀ
ಹಗಲಿನಲ್ಲಿ ಅರುಂಧತಿ
ನಕ್ಷತ್ರ ತೋರುವ
ಸುಳ್ಳನ್ನು ಸತ್ಯವೆಂದು
ನಂಬಿ ನಿನ್ನನುಸರಿಸಿ
ಬಾಳುವೆ, ಹೇಳು
ಎಂದಿಗೆ ನೀ ನನ್ನ
ಅರ್ಧಾಂಗಿಯೆಂದು
ಒಪ್ಪಿ, ನನಗೆ ನೀನು,
ನಿನಗೆ ನಾನು ಎಂದು
ಮನಸಾರೆ ನನ್ನ ವರಿಸುವೆ...-
ಹೇ ಹುಡುಗಿ
ನೀ ಒಮ್ಮೆ
ಸಮ್ಮತಿಸು, ನನ್ನ
ಅರ್ಧಾಂಗಿಯಾಗಿ
ಸ್ವೀಕರಿಸಿ,
ಪ್ರತಿದಿನ
ಮುಂಜಾನೆಯಲಿ
ಮುತ್ತುಗಳ
ನೈವೇದ್ಯ ನಾ ನೀಡುವೆ.-
ಹೇ... ಏಕಾಂಗಿ
ಸೀರೆ ಹಿಂದೆ ಬಿದ್ದು
ನೀನಾಗದಿರು ಕೋಡಂಗಿ,
ನಿಂಗೆಂದೆ ತಂದಿರುವೆ
ಮದುವೆಗೆ ಅಂಗಿ,ಲುಂಗಿ,
ತೊಟ್ಟು ಬಾ, ನಾನಾಗುವೆ
ನಿನ್ನ ಬಾಳಿಗೆ ಅರ್ಧಾಂಗಿ.!-
ನಾ ಕೊಟ್ಟ
ಸೀರೆಯುಟ್ಟು
ನೀ ನಿಲ್ಲು ಅರ್ಧಾಂಗಿ,
ನಾ ಕಾಯುವೆ
ಜೀವನಪೂರ್ತಿ ನಿನ್ನ ಬಿಡದಂಗಿ.-
ನೀ ಕೊಟ್ಟ ಗಿಳಿ ಹಸಿರು
ಬಣ್ಣದ ಜರಿ
ಸೀರೆಯುಟ್ಟು
ನಿನಗಿಷ್ಟವೆಂದು ಮಲ್ಲಿಗೆ
ಹೂ ಮುಡಿದು
ನಿನ್ನನ್ನು ಎದುರುಗೊಳ್ಳಲು
ಕಾಯುತಿರುವೆ ನಾನಿಲ್ಲಿ-
ಅವ್ವನಂತೆ ಅಕ್ಕರೆಯಿಂದಲೇ ಕಂಡು
ಸದಾ ನಮ್ಮ ಹೃದಯದರಮನೆಯ
ಪ್ರೀತಿಯ ನಾಯಕಿಯಾಗಿ
ಕನಸುಗಳಿಗೆ ಜೊತೆಗಾರಳಾಗಿ
ನಗುವಿನನೊಡನೆ ಅಳುವಿನೊಡನೆ
ಒಂದಾಗುವ ಮುಗ್ದ ಹೃದಯವೇ ಮಡದಿ.
ನೀನಿಲ್ಲದ ನನ್ನ ಬಾಳು ಅಪೂರ್ಣ.
ಮಹಿಳಾ ದಿನಾಚರಣೆಯ ಶುಭಾಷಯಗಳು
ಅರ್ಧಾಂಗಿ.-
ಮಗಳಾಗಿ ಪಾಲಕರಿಗೆ,
ಹೆಂಡತಿಯಾಗಿ ಗಂಡನಿಗೆ,
ತಾಯಿಯಾಗಿ ಮಕ್ಕಳಿಗೆ,
ಹೊಂದಾಣಿಕೆಯಾಗಿರಬೇಕು ಪ್ರತಿಯೊಬ್ಬರಿಗೂ ಹೆಣ್ಣಾಗಿ,
ಎಲ್ಲದರಲ್ಲಿ ಒಂದನ್ನು ಆರಿಸುವ ಸರದಿ ಬಂದರೆ ಆರಿಸಬೇಕು ಪತಿದೇವನ ಅರ್ಧಾಂಗಿಯಾಗಿ!!-
ಅರ್ಧಂಬರ್ಧ ವಯಸ್ಸಲ್ಲಿ
ಅರ್ಧಾoಗಿಯಾಗಿ ಬಂದಳು
ಬರಗೆಟ್ಟ ಬದುಕಲ್ಲಿ
ಬೆಳಕು ಚೆಲ್ಲಲು ಬಂದಳು
ನಾವ್ ಎಡಗಡೆ ಎಡವಟ್ಟು
ಬಿಟ್ಟೋದ್ಲು ತಲೆಕೆಟ್ಟು..!!-