Your put effort
-
ಭಾವನೆಗಳಿಗೆ ಜೀವ ನೀಡುವಾಸೆ❤️
ಹೇಳಲಾಗದ ಮಾತುಗಳಿಗೆ ಅಕ್ಷರವನ್ನು ಪೋಣಿಸುವಾಸೆ ❤️
ಕತ್ತ... read more
ಸಾಧಿಸಿ ತೋರಿಸುವತನಕ ನಿಲ್ಲದು ಶ್ರಮವೂ
ತುಚ್ಚವಾಗಿ ಕಂಡ ಜನರಿಗೆ ನನ್ನ ಸಾಧನೆಯೇ ಉತ್ತರ...
-
ಇಂದು ಸತ್ಯ ಸೋತಿರಬಹುದು
ನೀ ಸತ್ಯವನ್ನು ಮುಚ್ಚಿಡಲು ಎಷ್ಟೇ ಸುಳ್ಳನ್ನು ಪೋಣಿಸಿದರು
ಆ ಸುಳ್ಳಿನ ಸುಳಿಯೊಳಗೆ ಸಿಲುಕಿ ನಲುಗುವುದು ಉಚಿತ
ಆದರೆ, ಇಂದಲ್ಲ ನಾಳೆ ಸತ್ಯಕ್ಕೆ ಗೆಲುವು ಖಚಿತ...
-
ಸರಿ ತಪ್ಪುಗಳ ವಿಮರ್ಶಿಸದೆ,ತನ್ನವರ ಮೇಲಿರುವ ಅತಿಯಾದ ನಂಬಿಕೆಯಿಂದ,ಆಪಾದನೆ ಹೊತ್ತು ನಿಂತಿರುವವರ ಮಾತಿಗೆ ಅಸ್ವಾದ ನೀಡದೆ ಅವರೇ ಅಪರಾಧಿಯೆಂದು ಕಾಣುವುದು ಸಮ್ಮತವೇ?
ಸಂಬಂಧಕ್ಕೆ ಬೆಲೆ ನೀಡುವುದೆಂದರೆ ಮಾತಿಗೆ ಸೌಖ್ಯವೆಂದು ಕೇಳಿ, ನಗು ನಗುತಾ ಮಾತಾಡಿ ಬೆನ್ನಹಿಂದೆ ಹೀಯಾಳಿಸುವುದೇ?
ಸಂಬಂಧ ಉಳಿಸಲು ತಾನೊಬ್ಬಳೇ ಅನುಸರಿಸುತ್ತಾ,ತಾಳ್ಮೆವಹಿಸುತ್ತಾ ಹೋದರೆ ಆ ಸಂಭಂದ ಉಳಿಯುವುದೇ?
ಸ್ವಾಭಿಮಾನವೆಂಬುದು ಹಿರಿಯರು ಕಿರಿಯರೆಂದು ಬೇಧವುಂಟೆ! ಅಥವಾ ಶ್ರೀಮಂತನಿಗೆ, ಹಿರಿಯರಿಗೆ, ಪುರುಷರಿಗೆ ಮಾತ್ರ ಸ್ವಾಭಿಮಾನವೆಂಬುದು ಇರಬೇಕೆ?
ಕಿರಿಯರೆಂದರೆ ತಪ್ಪು ಮಾಡುವವರೆಂದೆ?
ಹಿರಿಯರೆಂದರೆ ತಪ್ಪೇ ಮಾಡದವರೇ?
ಹಲವಾರು ಪ್ರಶ್ನೆಗಳಿದ್ದರು ಅದರ ಉತ್ತರ ಕಂಡುಕೊಳ್ಳಲಾಗದೇ ಮೋಸದ ಪ್ರಪಂಚದಲ್ಲಿ ಮೋಸದ ಜನರಲ್ಲಿ ಜೀವಿಸಲಾಗದೇ ಜೀವಿಸುತ್ತಿರುವ ಜೀವ🙂🙂....
-
ಹಾಗೊಂದು ವೇಳೆ ಎಲ್ಲರನ್ನೂ ಮೆಚ್ಚಿಸಿದ್ದೇ
ಆದಲ್ಲಿ ಸುಳ್ಳಿನ ಸರಮಾಲೆಯನ್ನು ಹೆಣೆದು
ಆಡುಗಬ್ಬ ಮಾಡುತ್ತೀರಬಹುದಷ್ಟೇ..
ಕಾರಣ ಇಲ್ಲಿ ಎಲ್ಲರ ಆಲೋಚನೆ,
ಅಭಿಪ್ರಾಯ ನಾನಾ ರೀತಿ..
-
ಅಳಿದುಳಿದ ಭಾವನೆಗಳಿಗೆ ಪುನಃ ಜೀವ ನೀಡುವಾಸೆಯಾದರು ಯಾವುದು ಮೊದಲಿನಂತಿಲ್ಲ,
ಕೊಟ್ಟರು ಮರಳಿ ಮೊದಲಿನಂತೆ ಸಿಗುವ ಭರವಸೆಯು ನನ್ನಲ್ಲಿ ಉಳಿದಿಲ್ಲ....-
ಇಟ್ಟ ನಂಬಿಕೆಯನ್ನು ಚಟ್ಟಯೆರಿಸುವವರಿಗೇನೊ ಗೊತ್ತು, ಬರೀ ನಂಬಿಕೆಯನ್ನು ಮಾತ್ರವಲ್ಲ, ಅದರೊಂದಿಗೆ ಅವರ ಮನಸ್ಸನ್ನು ಕೂಡ
ಸುಟ್ಟು ಬೂದಿಯಾಗಿಸಿದರೆಂದು..
-
ನಿಸ್ವಾರ್ಥಿಯೆಂದು ಹೇಳಿಕೊಂಡು ತಿರುಗಾಡುವವರಲ್ಲೂ ಸ್ವಾರ್ಥ ಕಂಡಿರುವೆ,
ಸ್ವಾರ್ಥವಿರದೇ ನಿಸ್ವಾರ್ಥ ಮನಸೊಂದಿದ್ದರೆ ಅದು
ಪ್ರಾಣಿಗಳಲ್ಲಿ ಮಾತ್ರ,
ಮನುಷ್ಯತ್ವವೇ ಮರೆತ ಮಾನವ
ನೀ ಪ್ರಾಣಿಗಳಿಗಿಂತಲೂ ಕಡೆಯಾದೆಯಲ್ಲ.-
ಅದರೊಂದಿಗೆ ಪ್ರೀತಿಯ ಸವಿ ಮಾತುಗಳನ್ನಾಡಿ
ಎಲ್ಲೂ ತಿನ್ನಲ್ಲಾಗದೇ ಚೆಲ್ಲುವ ಅನ್ನಕ್ಕೆ ಇನ್ನೆಲ್ಲೂ
ಎಷ್ಟು ಬಡ ಜೀವಗಳು ಹಸಿವಿನಿಂದ ಪರದಾಡುತ್ತಿರುವರು..
ಹೆಚ್ಚೇನ್ನಿಸಿದ ಪದಾರ್ಥವನ್ನು ಚೆಲ್ಲುವ ಬದಲು ಇನ್ನೊಬ್ಬರಿಗೆ ದಾನ ಮಾಡುವುದು ಶ್ರೇಷ್ಠವಲ್ಲವೇ...-