ಯಾರೂ ಶಾಶ್ವತವಲ್ಲ ಬದುಕಲ್ಲಿ;
ನಂಬಿಕೆ ವಿಶ್ವಾಸ ಗಳಿಸುವ ನೆಪವಷ್ಟೇ ಎಲ್ಲರಲ್ಲಿ!
ಗಳಿಸಿರುವುದನ್ನು ಉಳಿಸುತ್ತಿರುವರು ಭಯದಲ್ಲಿ;
ತೊರೆದು ಬಿಡುವರು ಕೊನೆಗೆ ಅವರವರ ಪಾಲಿನ ನೆನಪಿನ ಬುತ್ತಿಯಲ್ಲಿ!
-
BELAGAVI(uk)
“ ನಿರೀಕ್ಷಿಸದಿದ್ದರೆ ಒಳಿತು! ಯಾಕೆಂದರೆ ನಿರೀಕ್ಷೆಗೂ ಮೀರಿ ಸಂಭವಿಸಿದರೂ ಆಶ್ಚರ್ಯವಿಲ... read more
ಪ್ರತಿ ಹಂತದಲ್ಲೂ
ಸೋಲುತ್ತಿರುವೆ ಮೊದಲಿಗಳಾಗಿ,
ಸೋಲುಂಡ ನೋವು ತಿಳಿದಿರಲೆಂದು!
ಎಂದೋ ಗೆದ್ದಾಗಲೂ
ಸಂಭ್ರಮಪಡದವರಲ್ಲಿ ನಾನೇ ಮೊದಲಿಗಳು,
ಯಾಕೆಂದರೆ ಸೋತವರ ಪಾಡು ಅರಿತವಳು ನಾನು!
-
ಈಜುಬಾರದ ಸಮುದ್ರದ ಮತ್ಸ್ಯಕನ್ಯೆ ಅವಳು..
ಈಜಿದರೆ ತನ್ನವರ ನಾಶದ ಶಾಪಕ್ಕೆ ಬಲಿಯಾಗಿರುವಾಕೆ!
ತನ್ನಾಶಯಕ್ಕೆ ಈಜಬೇಕೋ?
ತನ್ನಾಶಯ ಮರೆತು ತನ್ನವರ ಉಳಿಸಬೇಕೋ?
-
ಕೊಂಕು ಮಾತುಗಳೇ ಕೇಳಿದರೆ,
ವಿಫಲತೆಯೇ ದೊರೆಯುವುದು!
ಕೊಂಕು ಮಾತುಗಳು ರೂಢಿಗತವಾಗಿ,
ವಿಫಲತೆ ಯಶಸ್ಸಿನ ಮೆಟ್ಟಿಲಾಗಲೇಬೇಕು!
-
ಬದುಕಬಲ್ಲೆ ನಾನು ಕಣ್ಣೀರನು ಅವಡುಗಚ್ಚಿ ತಡೆಹಿಡಿದು!
ಬದುಕಲಾರೆ ನಾನೆಂದಿಗೂ ನೊಂದಂತೆ ನಾಟಕದ ಕಣ್ಣೀರನು ಹರಿಸಿ..!
-
🔱🔱🔱
ಮಾಯಾ ಜಾಲದ ಮೋಹಕೆ ಸಿಲುಕಿ
ಕಾಲಹರಣ ಮಾಡುತ್ತಿರುವ ಈ ಜೀವಕೆ
ಬರೀ ಇಷ್ಟೇ ನೋವೇಕೆ ಶಿವ!
ಒಂದೊಮ್ಮೆ ನೀ ಶಿಕ್ಷಿಸಿದರೆನಗೆ
ಆ ನೋವಿನ ನರಳಾಟದಲ್ಲೂ
ಜಪಿಸಿರಬೇಕು ನಾನೆಂದಿಗೂ ನಿನ್ನನ್ನೇ
ಪರಮಾತ್ಮ!
-
ನಂಬಿಕೆಯೊಂದು ಸೋತು ನಿಂತಾಗ
ಭಾವನೆಗಳು ಕುಸಿದು ಹೋದಾಗ
ಬದುಕೆಲ್ಲವೂ ಶೂನ್ಯವೆನಿಸಿದಾಗ
ಏಕಾಂತದ ಪರಿಚಯವಾದಾಗ
ನೋವಲ್ಲಿ ಬೆಂದಾಗ
ಧನಾತ್ಮಕತೆಯೊಂದು ಸೆಳೆದಿತ್ತು,
ಅದರ ಮೂಲ ಹುಡುಕಿದಾಗ ಕಂಡಿದ್ದೆ ನಾನು!
-
ಒಲವ ಮಳೆಯಲಿ ತೊಯಿಸುವೆ ನಾ
ಈ ಮಳೆಗೆ ಕಾರ್ಮೋಡ ನಿವಾಗಿರಬೇಕೆಂದು!
ನಿಮ್ಮೆದೆಗೊರಗಿ ಮಗುವಾಗುವೆ ನಾ
ನಾ ಮಗುವಾಗಲು ನೀವೆದುರಿಗಿರಬೇಕೆಂದು!
ಸಂಬಂಧಗಳ ಕಡಿದುಕೊಂಡು ಬಂಧಿಯಾಗಿರುವೆ ನಾ
ಈ ಬಂಧನದಲ್ಲಿ ನನ್ನೊಂದಿಗೆ ಶಾಶ್ವತವಾಗಿರಬೇಕು ನೀವೆಂದಿಗೂ!
ನನ್ನೊಂದಿಗೆ ಶಾಶ್ವತವಾಗಿರಬೇಕು ನೀವೆಂದಿಗೂ
ರೀ ನಿಮ್ಮೀ ಪ್ರೀತಿ ನನಗಷ್ಟೇ ಸೀಮಿತವಾಗಿರಲೆಂದು!
ಹ್ಯಾಪಿ ವೆಡ್ಡಿಂಗ್ ಆನಿವರ್ಸರಿ ಮೈ ಡಿಯರ್ ಲವ್❤️✨️💐
-
ತಾಳ್ಮೆಯಿಂದ ಎಲ್ಲವೂ ಸಿಗುತ್ತೆ,
ತಾಳ್ಮೆ ಹೆಚ್ಚಾದರೆ ಎಲ್ಲವೂ ಕಳೆದುಹೋಗುತ್ತೆ!
ಒಳ್ಳೆತನ ಯಾವಾಗಲೂ ಸೋಲುತ್ತೆ,
ಕೊನೆಗೆ ಒಂದೇ ಒಂದು ಸಾರಿ ಮಾತ್ರ ಗೆಲ್ಲುತ್ತೆ!
ಗೆದ್ದಾಗ ಆ ಒಳ್ಳೆಯ ವ್ಯಕ್ತಿನೇ ಬದುಕಿರಲ್ಲ!
-
ಸಿಕ್ಕಿರುವ ಸಮಯದಲ್ಲೇ
ಬರಸೆಳೆದು,
ನಿನ್ನದೆಗೊಮ್ಮೆ ಪ್ರೀತಿಯಿಂದ
ಅಪ್ಪಿಕೊಂಡುಬಿಡು
ಮಾತುಗಳು ಮುಳುಗಿ,
ಶುರುವಾಗಲಿ ಎದೆಯೊಳಗಿನ ಭಾವನೆಗಳ
ವಿನಿಮಯ!-